ETV Bharat / sitara

ಡ್ರಗ್ಸ್ ಪ್ರಕರಣ: ಕಾಮೆಂಟ್ಸ್​​ಗೆ ಬೇಸತ್ತು ಕಣ್ಣೀರು ಹಾಕಿದ ತುಪ್ಪದ ಬೆಡಗಿ - ಡ್ರಗ್ಸ್ ಪ್ರಕರಣ'

ಡ್ರಗ್ಸ್‌ ಪಾರ್ಟಿ ವಿಚಾರ ಇಟ್ಟುಕೊಂಡು ಕೆಲವರು ತುಂಬ ನೆಗೆಟಿವ್‌ ಕಾಮೆಂಟ್‌ ಮಾಡಿದ್ದಾರೆ. ನನಗೆ ಹೆಸರುಗಳನ್ನು ಇಟ್ಟಿದ್ದಾರೆ. ಹೆಣ್ಣುಮಕ್ಕಳಿಗೆ ಈ ಥರ ಹೆಸರಿಟ್ಟು, ಅವರ ಕುಟುಂಬದ ಬಗ್ಗೆ ಮಾತನಾಡಿದರೆ ನಿಮಗೆ ಏನು ಖುಷಿ ಸಿಗುತ್ತೋ ನನಗೆ ತಿಳಿಯುತ್ತಿಲ್ಲ ಎಂದು ಇನ್‌ಸ್ಟಾಗ್ರಾಮ್​‌ ಲೈವ್​ನಲ್ಲಿ ನಟಿ ರಾಗಿಣಿ‌ ಕಣ್ಣೀರು ಹಾಕಿದ್ದಾರೆ.

ragini-dwivedi-sheds-tears-over-drug-case
ಡ್ರಗ್ಸ್ ಪ್ರಕರಣ ಸಂಬಂಧ ಕಣ್ಣೀರು ಹಾಕಿದ ತುಪ್ಪದ ಬೆಡಗಿ!
author img

By

Published : Feb 11, 2021, 2:24 PM IST

Updated : Feb 11, 2021, 2:45 PM IST

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿರುವ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ತಮಗೆ ಬರುತ್ತಿರುವ ಕೆಟ್ಟ ಕಾಮೆಂಟ್ಸ್​ಗಳ ಬಗ್ಗೆ ಇನ್‌ಸ್ಟಾಗ್ರಾಮ್​ ಲೈವ್​ನಲ್ಲಿ ಕಣ್ಣೀರು ಹಾಕಿದ್ದಾರೆ.

ಡ್ರಗ್ಸ್ ಪ್ರಕರಣ: ಕಾಮೆಂಟ್ಸ್​​ಗೆ ಬೇಸತ್ತು ಕಣ್ಣೀರು ಹಾಕಿದ ತುಪ್ಪದ ಬೆಡಗಿ

ರಾಗಿಣಿ ದ್ವಿವೇದಿ ಹೊರಗಡೆ ಬಂದು ಒಂದು ತಿಂಗಳಾಗುತ್ತಾ ಬಂದಿದ್ದು, ಇದೀಗ ಹೊಸ ಜೀವನ ಆರಂಭಿಸಿದ್ದಾರೆ. ಆದರೆ, ರಾಗಿಣಿಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಕಾಮೆಂಟ್​ ಮಾಡುತ್ತಿದ್ದಾರೆ. ಇದರಿಂದ ನೊಂದಿರುವ ತುಪ್ಪದ ಬೆಡಗಿ, ಇನ್‌ಸ್ಟಾಗ್ರಾಮ್​ನಲ್ಲಿ‌ ಲೈವ್‌ ಬಂದು ಕಣ್ಣೀರು ಹಾಕಿದ್ದಾರೆ.

ನನಗೆ ಅನೇಕ ಕೆಟ್ಟ ಕಾಮೆಂಟ್‌ಗಳು ಬಂದಿವೆ. ಅದನ್ನು ನಾನು ಪಾಸಿಟಿವ್‌ ಆಗಿಯೇ ಸ್ವೀಕರಿಸಿದ್ದೇನೆ. ಆದರೆ, ಡ್ರಗ್ಸ್‌ ಪಾರ್ಟಿ ವಿಚಾರ ಇಟ್ಟುಕೊಂಡು ಕೆಲವರು ತುಂಬ ನೆಗೆಟಿವ್‌ ಕಾಮೆಂಟ್‌ ಮಾಡಿದ್ದಾರೆ. ನನಗೆ ಹೆಸರುಗಳನ್ನು ಇಟ್ಟಿದ್ದಾರೆ. ಹೆಣ್ಣುಮಕ್ಕಳಿಗೆ ಈ ಥರ ಹೆಸರಿಟ್ಟು, ಅವರ ಕುಟುಂಬದ ಬಗ್ಗೆ ಮಾತನಾಡಿದರೆ ನಿಮಗೆ ಏನು ಖುಷಿ ಸಿಗುತ್ತೋ ನನಗೆ ತಿಳಿಯುತ್ತಿಲ್ಲ. ನಿಮಗೆ ಖುಷಿ ಸಿಕ್ಕಿದೆ ಅಂದರೆ ನನಗೂ ಸಂತೋಷ. ಹೇಗೋ ಒಂದು ರೀತಿಯಲ್ಲಿ ನಿಮಗೆ ಖುಷಿಕೊಟ್ಟಿದ್ದೇನೆ ಎಂದು ರಾಗಿಣಿ ಕಣ್ಣೀರು ಸುರಿಸಿದ್ದಾರೆ.

ನಾನು ತುಂಬ ಕಷ್ಟಪಟ್ಟಿದ್ದೇನೆ. ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ, ಅದಕ್ಕೆ ಸಮಯ ಬೇಕಾಗಿದೆ. ನಾನು ಎಷ್ಟೇ ಪಾಸಿಟಿವ್‌ ಆಗಿದ್ದರೂ ಒಮ್ಮೊಮ್ಮೆ ರಾತ್ರಿ ನಿದ್ದೆ ಬರುವುದಿಲ್ಲ. ಆದರೆ ನನ್ನ ಕುಟುಂಬ ನನಗೆ ಶಕ್ತಿ ತುಂಬಿದೆ ಎಂದು ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ರಾಗಿಣಿ ಕಣ್ಣೀರು ಹಾಕಿದ್ದಾರೆ.

Last Updated : Feb 11, 2021, 2:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.