ಕನ್ನಡ ಚಿತ್ರರಂಗ ಕಂಡ ಅದ್ಭುತ ವಿಲನ್‌ಗಳಲ್ಲಿ ಒಬ್ಬರಾದ ಸುಂದರಕೃಷ್ಣ ಅರಸ್ ಪುತ್ರ ನಾಗೇಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಕಂಡು ಹಿಡಿ ನೋಡೋಣ' ಚಿತ್ರ ಕನ್ನಡ ತಮಿಳು ಹಾಗೂ ತೆಲುಗು ಮೂರು ಭಾಷೆಗಳಲ್ಲಿ ನಿರ್ಮಾಣಗೊಂಡಿದೆ. ಇದರಲ್ಲಿ ಹುಬ್ಬಳ್ಳಿ ಹುಡುಗನೊಬ್ಬ ಖಳನಾಯಕನಾಗಿ ನಟಿಸುವ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದಾನೆ.
ನಗರದ ಮೂರುಸಾವಿರಮಠದ ಬಳಿಯ ಅಂಚಟಗೇರಿ ಓಣಿಯ ರಾಘು ವದ್ದಿ ಎಂಬ ಯುವಕ ಈ ಚಿತ್ರದಲ್ಲಿ ವಿಲನ್ ರೋಲ್‌ನಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಟೀಸರ್ ಬಿಡುಗಡೆಯಾಗಿದ್ದು ಭಾರೀ ಗಮನ ಸೆಳೆದಿದೆ. ಕಳೆದ 5-6 ವರ್ಷಗಳಿಂದ ಚಿತ್ರರಂಗದ ಸೆಳೆತದಿಂದ ಬೆಂಗಳೂರಿನ ಗಾಂಧಿನಗರದಲ್ಲೇ ಬದುಕು ಕಟ್ಟಿಕೊಂಡಿರುವ ವದ್ದಿಗೆ ಈ ಮೊದಲೇ 'ಮೃತ್ಯುಂಜಯಂ', 'ಎರಡು ಹಾರ್ಟ್ ಒಂದು ಫೈಟ್ ','ನಮೋ' ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದು ಇನ್ನೂ ಮೂರ್ನಾಲ್ಕು ಅವಕಾಶಗಳು ಅರಸಿ ಬಂದಿವೆ.
'ಕಂಡು ಹಿಡಿ ನೋಡೋಣ' ಸಸ್ಪೆನ್ಸ್, ಥಿಲ್ಲರ್ ಚಿತ್ರವಾಗಿದ್ದು ಪ್ರಣವ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ರಘು ವದ್ದಿ ಸ್ನೇಹಿತ ಕಲ್ಲಪ್ಪ ಶಿರಕೋಳ ಕೂಡ ಚಿತ್ರದಲ್ಲಿ ಕಾಣಿಸಿರೋದು ವಿಶೇಷವಾಗಿದೆ. ಈಗಾಗಲೇ ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಟೀಸರ್ ಬಿಡುಗಡೆಯಾಗಿದೆ.
ವರನಟ ರಾಜ್‌ಕುಮಾರ್ ಕುಟುಂಬದ ಬಗ್ಗೆ ಅಪಾರ ಗೌರವ ಹೊಂದಿರುವ ರಾಘು ವದ್ದಿಗೆ ಅವರ ಚಿತ್ರಗಳೆಂದರೆ ಬಹಳ ಇಷ್ಟ, ಪುನೀತ್ ರಾಜಕುಮಾರ್ ಸಹ ಇವರ ಹುಬ್ಬಳ್ಳಿ ನಿವಾಸಕ್ಕೆ ಭೇಟಿ ನೀಡಿ ಬೆನ್ನು ತಟ್ಟಿದ್ದಾರೆ ಹರಿಸಿದ್ದಾರೆ.