ETV Bharat / sitara

ಬಿಗ್​ ಬಾಸ್​ : ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದ ರಘು ಗೌಡ

ಈ ವಾರ ನಡೆದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ರಘು ಗೌಡ ಅವರು ನಿರೀಕ್ಷೆಯ ಮಟ್ಟದಲ್ಲಿ ಟಾಸ್ಕ್ ಮಾಡಲಿಲ್ಲ. ಹೀಗಾಗಿ ಈ ವಾರ ಪ್ರೇಕ್ಷಕರ ವೋಟ್ ನಿಂದ ವಂಚಿತರಾಗಿ ಮನೆಯಿಂದ ಹೊರ ಬಂದಿದ್ದಾರೆ.

 Raghu Gowda Eliminated in Second Elimination Round

author img

By

Published : Jul 11, 2021, 1:25 AM IST

ಬಿಗ್ ಬಾಸ್ ಸೀಸನ್ ಎಂಟರ ಸೆಕೆಂಡ್ ಇನ್ನಿಂಗ್ಸ್ ಎರಡನೇ ಎಲಿಮಿನೇಷನ್ ಸುತ್ತಿನಲ್ಲಿ ರಘು ಗೌಡ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ.

ಕಳೆದ ವಾರ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯ ಕ್ಯಾಪ್ಟನ್ ಆಗಿದ್ದ ದಿವ್ಯ ಉರುಡುಗ ಹಾಗೂ ಶುಭಾ ಪೂಂಜಾ ಅವರನ್ನು ಹೊರತುಪಡಿಸಿ ಉಳಿದೆಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಈ ವಾರ ನಡೆದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ರಘು ಗೌಡ ಅವರು ನಿರೀಕ್ಷೆಯ ಮಟ್ಟದಲ್ಲಿ ಟಾಸ್ಕ್ ಮಾಡಲಿಲ್ಲ. ಹೀಗಾಗಿ ಈ ವಾರ ಪ್ರೇಕ್ಷಕರ ವೋಟ್ ನಿಂದ ವಂಚಿತರಾಗಿ ಮನೆಯಿಂದ ಹೊರ ಬಂದಿದ್ದಾರೆ.

ಕಳೆದವಾರ ಕೂಡ ನಾಮಿನೇಟ್ ಆಗಿದ್ದ ರಘು, ಚಕ್ರವರ್ತಿ ಚಂದ್ರಚೂಡ್ ಅವರನ್ನು ಹಿಂದಿಕ್ಕಿದ್ದರು. ಆದರೆ, ಈ ವಾರ ನೀರಿಕ್ಷೆಯ‌ ಮತ ಗಳಿಸಲು ಸಾಧ್ಯವಾಗಿಲ್ಲ. ಟಂಕಶಾಲೆ ಟಾಸ್ಕ್ ನಲ್ಲಿ ರಘು ಗೌಡ ಅವರ ಮೆಷಿನ್ ಬದಲಾಯಿಸಿದ್ದ ಅರವಿಂದ್ ವಿರುದ್ಧ ಯಾವುದೇ ಮರು ಮಾತನಾಡದೆ ಸುಮ್ಮನೆ ಕುಳಿತಿದ್ದ ರಘು ಅವರ ಮೌನ ಎಲಿಮಿನೇಟ್​ಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ದಿವ್ಯ ಉರುಡುಗ, ಅರವಿಂದ್​ ಎಚ್ಚರಿಸಿದ ಸುದೀಪ್:

ಕ್ಯಾಪ್ಟನ್ ಅವಧಿಯಲ್ಲಿ ಸ್ಪರ್ಧಿಗಳ ನಡುವೆ ತಾರತಮ್ಯದ ಕುರಿತು ಕಿಚ್ಚ ಸುದೀಪ್ ದಿವ್ಯಾ ಉರುಡುಗ ಬಳಿ ಖಾರವಾಗಿಯೇ ಪ್ರಶ್ನಿಸಿದರು. ದಿವ್ಯಾ ಉರುಡುಗ ಮಾಡಿದ ಕೆಲ ಸಣ್ಣ ತಪ್ಪುಗಳ ಬಗ್ಗೆ ಸ್ಪಷ್ಟನೆ ಕೇಳಿದರು. ಆದರೆ, ಸೂಕ್ತ ಉತ್ತರ ನೀಡುವಲ್ಲಿ ದಿವ್ಯಾ ಉರುಡುಗ ವಿಫಲರಾದರು. ನಂತರ ಕಣ್ಣೀರು ಹಾಕಿದರು.

ಮೊದಲಿಗೆ ಮೊಟ್ಟೆ ಟಾಸ್ಕ್, ಬಲೂನ್ ಟಾಸ್ಕ್ ಹಾಗೂ ಕ್ಯಾಪ್ಟನ್ಸಿಯ ಕೀ ಟಾಸ್ಕ್ ಗಳ ಮಾತನಾಡಿ ದಿವ್ಯಾ ಅವರಿಂದ ಸ್ಪಷ್ಟನೆ ಬಯಸಿದರು.

ಕ್ಯಾಪ್ಟನ್ಸಿ ಕೀ ಟಾಸ್ಕ್ ನಲ್ಲಿ ಅರವಿಂದ್ ಒಂದು ಕೀ ತೆರೆದು ಅದನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಅದನ್ನು ವಾಪಸ್ ಬಾಲ್ ಇರುವ ಬುಟ್ಟಿಗೆ ಹಾಕಿರಲಿಲ್ಲ. ಈ ವೇಳೆ ದಿವ್ಯಾ ಅದನ್ನು ತೆಗೆದುಕೊಂಡು ಹೋಗಿ ಹಾಕಿದ್ದರು. ಆದರೆ, ಕ್ಯಾಪ್ಟನ್ ಸ್ಥಾನದಲ್ಲಿದ್ದ ನೀವು ಮಾಡಿದ್ದು ಸರಿಯೇ? ನೀವು ಉಳಿದವರಿಗೆ ಕೊಟ್ಟ ಎಚ್ಚರಿಕೆಯನ್ನು ಅದೇ ಟೋನ್​​ನಲ್ಲಿ ಅರವಿಂದ್ ಅವರಿಗೆ ಯಾಕೆ ನೀಡಲಿಲ್ಲ ಎಂದು ಪ್ರಶ್ನೆ ಮಾಡಿದರು.

ಹಣ ಸಿದ್ಧ ಮಾಡುವ ಟಾಸ್ಕ್ ಬಗ್ಗೆ ಬಾಗಿಲಿನಲ್ಲಿ ನಿಲ್ಲುವ ರೂಲ್ಸ್ ಬಗ್ಗೆಯೂ ಕಿಚ್ಚ ಸುದೀಪ್ ಮಾತನಾಡಿದ್ದರು. ಎಲ್ಲರಿಗೂ ತಿಳಿಸದೇ ರೂಲ್ಸ್ ಮಾಡಿದ್ದು ಯಾಕೆ? ಹಾಗೆಯೇ, ಮಂಜು ಪಾವಗಡ ಹಾಗೂ ಪ್ರಶಾಂತ್ ನಡುವೆ ನಡೆದ ಏಪ್ರಾನ್ ಗುದ್ದಾಟದ ಬಗ್ಗೆಯೂ ಸುದೀಪ್ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ತಾವು ಅಭಿಪ್ರಾಯ ಅಥವಾ ಮತ್ತೊಂದು ಚಾನ್ಸ್ ಪಡೆದು ಆಟ ಮಾಡಿಸಬಹುದಿತ್ತು ಎಂದು ಸುದೀಪ್ ಹೇಳಿದರು.

ಈ ಬಗ್ಗೆ ತಾವು ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಿಕೊಡಬೇಕು ದೃಷ್ಟಿಯಿಂದ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಆದರೆ ತಪ್ಪಾಗಿದೆ ಕ್ಷಮಿಸಿ ಎಂದು ದಿವ್ಯ ಹುಡುಗ ಕಣ್ಣೀರು ಹಾಕಿದರು.

ಟಾಸ್ಕ್ ಒಂದರಲ್ಲಿ ಪ್ರಿಂಟಿಂಗ್ ಯಂತ್ರವನ್ನು ರಘು ಅವರಿಂದ ಕಸಿದುಕೊಂಡ ಅರವಿಂದ್​ಗೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂದರು . ಹಾಗೆಯೇ ದಿವ್ಯ ಉರುಡುಗ ಹಾಗೂ ಪ್ರಶಾಂತ್ ನಡುವೆ ರಾತ್ರಿ ಸಮಾಧಾನದ ಮಾತುಕತೆ ನಡೆದಿತ್ತು. ಇಬ್ಬರೂ ಸರಿ ಹೋಗಿದ್ದರು. ಆದರೆ ತಾವು ಆಡಿದ ಒಂದು ಮಾತಿನಿಂದ ಪ್ರಶಾಂತ್ ಅವರನ್ನು ಕೆಣಕಿದ್ದೀರಾ. ದಿವ್ಯ ಅವರನ್ನು ಸಲುಗೆಯಿಂದಲೋ ಅಥವಾ ಸ್ಪರ್ಧಿ ದೃಷ್ಟಿಯಿಂದಲೂ ನೀವು ಮಾತನಾಡಿಸಿದ್ದೀರಾ?‌ ಎಂದು ಪ್ರಶ್ನಿಸಿದ ಅವರು, ಪ್ರಶಾಂತ್ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದು ನೀವೇ. ಇದು ಕೂಡ ಸಮಂಜಸವಲ್ಲ ಎಂದು ಕಿಚ್ಚ ಸುದೀಪ್ ಅರವಿಂದ ಅವರನ್ನು ಎಚ್ಚರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.