ETV Bharat / sitara

ಬಾಲಿವುಡ್ ನಟರನ್ನು ಭೇಟಿ ಮಾಡಿದ ರಾಘಣ್ಣ..ಭೇಟಿ ಹಿಂದಿನ ಕಾರಣ ಏನು..?

author img

By

Published : Jul 22, 2019, 10:37 PM IST

'ಪೊಗರು' ಸಿನಿಮಾ ಶೂಟಿಂಗ್​​ಗಾಗಿ ಹೈದರಾಬಾದ್ ರಾಮೋಜಿ ಫಿಲಮ್ ಸಿಟಿಗೆ ತೆರಳಿರುವ ರಾಘವೇಂದ್ರ ರಾಜ್​​ಕುಮಾರ್ ಅಲ್ಲಿ ಬಾಲಿವುಡ್ ನಟರಾದ ಜಾನ್ ಅಬ್ರಹಾಂ ಹಾಗೂ ಅನಿಲ್ ಕಪೂರ್ ಅವರನ್ನು ಭೇಟಿ ಮಾಡಿದ್ದಾರೆ.

ರಾಘಣ್ಣ

'ಅಮ್ಮನ ಮನೆ' ಸಿನಿಮಾ ಮೂಲಕ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದ ರಾಘವೇಂದ್ರ ರಾಜ್​​ಕುಮಾರ್ ಇದೀಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದಾರೆ. ಇತ್ತೀಚೆಗೆ ರಾಘಣ್ಣ ಬಾಲಿವುಡ್ ನಟ ಜಾನ್ ಅಬ್ರಹಾಂ ಹಾಗೂ ಅನಿಲ್ ಕಪೂರ್​​ ಅವರನ್ನು ಭೇಟಿ ಮಾಡಿದ್ದಾರೆ.

raghanna
ಅನಿಲ್​​ ಕಪೂರ್ ಜೊತೆ ರಾಘಣ್ಣ

ರಾಘಣ್ಣ ಹಾಗೂ ಬಾಲಿವುಡ್​​​​ ನಟರ ಭೇಟಿ ವಿಷಯ ತಿಳಿದ ಅಭಿಮಾನಿಗಳು ಇವರೆಲ್ಲಾ ಯಾವುದಾದರೂ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿರಬಹುದಾ ಎಂಬ ಕುತೂಹಲದಲ್ಲಿದ್ದಾರೆ. ಆದರೆ ಇದು ಔಪಚಾರಿಕ ಭೇಟಿ ಅಷ್ಟೇ. ರಾಘಣ್ಣ ಇಬ್ಬರೊಂದಿಗೆ ಕೂಡಾ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಕಳೆದಿದ್ದಾರೆ. ಈ ಸ್ಟಾರ್ ನಟರ ಮಿಲನಕ್ಕೆ ಸಾಕ್ಷಿಯಾಗಿದ್ದು ಹೈದರಾಬಾದ್​​​​ನ ರಾಮೋಜಿ ಫಿಲ್ಮ್ ಸಿಟಿ. ರಾಘಣ್ಣ ಸದ್ಯಕ್ಕೆ ಧ್ರುವಾಸರ್ಜಾ, ಅಭಿನಯದ 'ಪೊಗರು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

raghanna
ಜಾನ್ ಅಬ್ರಹಾಂ ಜೊತೆ ರಾಘವೇಂದ್ರ ರಾಜ್​ಕುಮಾರ್​

'ಪೊಗರು' ಸಿನಿಮಾ ಶೂಟಿಂಗ್ ಸ್ಪಾಟ್ ಪಕ್ಕದಲ್ಲೇ, ಜಾನ್ ಅಬ್ರಹಾಂ ಹಾಗೂ ಅನಿಲ್ ಕಪೂರ್ ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ಬಿಡುವಿನ ವೇಳೆಯಲ್ಲಿ ರಾಘವೇಂದ್ರ ಕುಮಾರ್ ಜಿಮ್ ಹೋಗಿದ್ದಾಗ ಜಾನ್ ಅಬ್ರಾಹಂ ಹಾಗೂ ಅನಿಲ್ ಕಪೂರ್ ಕೂಡಾ ಅದೇ ಜಿಮ್​​​​​​​​ಗೆ ಬಂದಿದ್ದಾರೆ. ಈ ವೇಳೆ ಮೂವರೂ ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದ್ದಾರೆ. ಬಾಲಿವುಡ್​ ನಟರಿಬ್ಬರೂ ರಾಘಣ್ಣನನ್ನು ಕುರಿತು ನಿಮ್ಮ ತಂದೆ ಡಾ. ರಾಜ್​ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇವೆ ಎಂದು ಬಹಳ ಆತ್ಮೀಯವಾಗಿ ಮಾತನಾಡಿಸಿದ್ದಲ್ಲದೆ ಅವರ ಆರೋಗ್ಯ ಕೂಡಾ ವಿಚಾರಿಸಿದ್ದಾರೆ. ಈ‌ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ ರಾಘಣ್ಣ.

Intro:ರಾಜ್ ಕುಮಾರ್ ಸಿನಿಮಾಗಳು ನಮಗೆ ಸ್ಫೂರ್ತಿ ಬಾಲಿವುಡ್ ನಟ ಜಾನ್ ಹಾಗು ಅನಿಲ್ ಕಪೂರ್!!!

ಡಾ ರಾಜ್ ಕುಮಾರ್ ಅಂದ್ರನೇ ಒಂದು ಶಕ್ತಿ.. ಕನ್ನಡ ಚಿತ್ರರಂಗದಲ್ಲಿ, ಇವತ್ತಿಗೂ ಕೋಟ್ಯಾಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿರುವ, ರಾಜ್ ಕುಮಾರ್ ಎಂಬ ಹೆಸರಿಗೆ ಒಂದು ಗೌರವ ಇದೆ..ಈ ಮಾತಿಗೆ ಪೂರಕವಾಗಿ ಬಾಲಿವುಡ್ ನಟರಾದ ಜಾನ್ ಅಬ್ರಾಹಂ ಹಾಗು ಅನಿಲ್ ಕಪೂರ್ ಸಾಕ್ಷಿ.. ಹೌದು ಅಣ್ಣಾವ್ರ ಮಗನಾದ ರಾಘವೇಂದ್ರ ರಾಜ್ ಕುಮಾರ್ ಅವ್ರನ್ನ ನೋಡಿ, ಬಾಲಿವುಡ್ ನ್ನ ಸ್ಟಾರ್ ನಟರಾದ ಜಾನ್ ಅಬ್ರಾಹಂ ಹಾಗು ಅನಿಲ್ ಕಪೂರ್ ಜೊತೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾಲ ಕಳೆದಿದ್ದಾರೆ..ಈ ಸ್ಟಾರ್ ನಟರ ಮಿಲನಕ್ಕೆ ಸಾಕ್ಷಿಯಾಗಿದ್ದು ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿ..ಅಮ್ಮನೆ ಮನೆ ಸಿನಿಮಾ, ಮೂಲಕ ಕನ್ನಡ ಚಿತ್ರರಂಗಕ್ಕೆ ಗುಡ್ ಕಮ್ ಬ್ಯಾಕ್ ಮಾಡಿರೋ ರಾಘವೇಂದ್ರ ರಾಜ್ ಕುಮಾರ್ ಸದ್ಯ ಧ್ರುವ ಸರ್ಜಾ, ಅಭಿನಯದ ಪೊಗರು ಸಿನಿಮಾದಲ್ಲಿ ಆಕ್ಟ್ ಮಾಡುತ್ತಿದ್ದಾರೆ.. ಈ ಚಿತ್ರದ ಶೂಟಿಂಗ್ ಪಕ್ಕದಲ್ಲೇ ,ಬಾಲಿವುಡ್ ನಟರಾದ ಜಾನ್ ಅಬ್ರಾಹಂ ಹಾಗು ಅನಿಲ್ ಕಪೂರ್ ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಾಘವೇಂದ್ರ ಕುಮಾರ್ ಜಿಮ್ ಹೋಗಿದ್ದಾಗ ಜಾನ್ ಅಬ್ರಾಹಂ ಹಾಗು ಅನಿಲ್ ಕಪೂರ್ ಕೂಡ ಅದೇ ಜಿಮ್ ನಲ್ಲಿ ಬಂದ ಕಾರಣ ಈ ನಟರ ಸಮಾಗಮ ಆಗಿದೆ..Body:ಈ ಟೈಮಲ್ಲಿ ಜಾನ್ ಅಬ್ರಾಹಂ ಹಾಗು ಅನಿಲ್ ಕಪೂರ್ ನಿಮ್ಮ, ತಂದೆ ಅಂದ್ರೆ ರಾಜ್ ಕುಮಾರ್ ಸಿನಿಮಾಗಳನ್ನ ನೋಡಿ ಬೆಳೆದಿದ್ದೀವಿ ಅಂತಾ ಬಹಳ ಆತ್ಮೀಯವಾಗಿ ರಾಘವೇಂದ್ರ ರಾಜ್ ಕುಮಾರ್, ಜೊತೆ ಈ ಬಾಲಿವುಡ್ ನಟರು ಸಾಕಷ್ಟು ವಿಷ್ಯಗಳ ಜೊತೆ ರಾಘಣ್ಣನ ಆರೋಗ್ಯ ಕೂಡ ವಿಚಾರಿಸಿದ್ರಂತೆ..ಈ‌ ಕ್ಷಣವನ್ನ ರಾಘವೇಂದ್ರ ರಾಜ್ ಕುಮಾರ್ ಎಂದು ಮರೆಯೋದಿಕ್ಕೆ ಆಗೋಲ್ಲ ಅಂತಾರೆ..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.