ETV Bharat / sitara

ಮಗಳು ಪುಸ್ತಕ ಓದುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ರಾಧಿಕಾ ಪಂಡಿತ್​​​ - Ayra one more photo viral

ಯಶ್ ಹಾಗೂ ರಾಧಿಕಾ ಪಂಡಿತ್ ಮುದ್ದು ಪುತ್ರಿ ಐರಾ ಪುಸ್ತಕವೊಂದನ್ನು ಹಿಡಿದು ಬಹಳ ಆಸಕ್ತಿಯಿಂದ ನೋಡುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾನೂ ಕೂಡಾ ಇಷ್ಟು ಆಸಕ್ತಿಯಿಂದ ಓದಿಲ್ಲ ಎಂದು ರಾಧಿಕಾ ಬರೆದುಕೊಂಡಿದ್ದಾರೆ.

Radhika pandit daughter Ayra
ಯಶ್ ಹಾಗೂ ರಾಧಿಕಾ ಪಂಡಿತ್
author img

By

Published : Jul 29, 2020, 9:42 AM IST

ಸೆಲಬ್ರಿಟಿಗಳ ಮಕ್ಕಳು ಏನು ಮಾಡಿದ್ರೂ ಸುದ್ದಿಯಾಗ್ತಾರೆ. ಯಶ್​​ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್​​ವುಡ್ ಕ್ಯೂಟ್ ಜೋಡಿಗಳಲ್ಲಿ ಒಂದು. ಇಬ್ಬರು ಮುದ್ದಾದ ಮಕ್ಕಳೊಂದಿಗೆ ಈ ಜೋಡಿ ಸಂತೋಷದ ಜೀವನ ನಡೆಸುತ್ತಿದೆ.

Radhika pandit daughter Ayra
ಪುಸ್ತಕ ಓದುತ್ತಿರುವ ಐರಾ

ಈ ಸ್ಟಾರ್ ದಂಪತಿ ಆಗ್ಗಾಗ್ಗೆ ತಮ್ಮ ಮುದ್ದು ಮಕ್ಕಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡುತ್ತಿರುವುದು ತಿಳಿದಿರುವ ವಿಚಾರ. ಅದರಲ್ಲೂ ಐರಾ ಫೋಟೋ ಹಾಗೂ ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಇದೀಗ ಐರಾ ಮತ್ತೊಂದು ಫೋಟೋ ಬಹಳ ವೈರಲ್ ಆಗುತ್ತಿದೆ. ಅದು ಐರಾ ಪುಸ್ತಕ ಹಿಡಿದು ಓದುತ್ತಿರುವ ಫೋಟೋ. ಐರಾಗೆ ಏನು ಅರ್ಥವಾಯ್ತೋ ಏನೋ ಪುಸ್ತಕ ಹಿಡಿದು ಬಹಳ ಆಸಕ್ತಿಯಿಂದ ನೋಡುತ್ತಿದ್ದಾಳೆ.

Radhika pandit daughter Ayra
ಯಶ್ ಮುದ್ದು ಕುಟುಂಬ

ಇದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿರುವ ರಾಧಿಕಾ ಪಂಡಿತ್​, 'ನಾನು ಪರೀಕ್ಷೆ ಸಮಯದಲ್ಲೂ ಇಷ್ಟೊಂದು ಶ್ರದ್ಧೆಯಿಂದ ಓದಿರಲಿಲ್ಲ.ಈಗ ನನ್ನ ಮಗಳ ಓದುವ ಹವ್ಯಾಸ ಹೇಗಿದೆ ನೋಡಿ. ಫೋನ್, ಟಿವಿ, ಬದಲು ಹಲವು ಮನರಂಜನೆಯ ಪುಸ್ತಕಗಳ‌ನ್ನು ಆಕೆಗೆ ನೀಡುತ್ತಿದ್ದೇನೆ. ಐರಾ ಈಗ ಪುಸ್ತಕದಲ್ಲಿರುವ ಭಾವಚಿತ್ರಗಳನ್ನು ನೋಡುತ್ತಿದ್ದಾಳೆ.‌ ಐರಾಗೆ ಈ ಪುಸ್ತಕ ಕೊಟ್ಟಿದ್ದು ಅನು ಪ್ರಭಾಕರ್​​​ ಮುಖರ್ಜಿ ಹಾಗೂ ರಘು ಮುಖರ್ಜಿ ಪುಟ್ಟ ಮಗಳು ನಂದನಾ ಪ್ರಭಾಕರ್ ಮುಖರ್ಜಿ ಅಂತೆ. ಈ ಪುಸ್ತಕ ಕೊಟ್ಟ ನಂದನಾಗೆ ಕೂಡಾ ರಾಧಿಕಾ ಥ್ಯಾಂಕ್ಸ್ ಹೇಳಿದ್ದಾರೆ.

Radhika pandit daughter Ayra
ರಾಧಿಕಾ ಪಂಡಿತ್ ಫೇಸ್​​ಬುಕ್ ಪೋಸ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.