ETV Bharat / sitara

ನಡವಳಿಕೆ ಬಗ್ಗೆ ಮಗನಿಗೆ ಪಾಠ ಮಾಡುತ್ತಿರುವ ರಾಧಿಕಾ ಪಂಡಿತ್​​​​​​​...ವಿಡಿಯೋ - Radhika pandit lesson to son

ಸದ್ಯಕ್ಕೆ ಮಕ್ಕಳ ಆರೈಕೆಗೆ ಸಂಪೂರ್ಣ ಗಮನ ನೀಡುತ್ತಿರುವ ನಟಿ ರಾಧಿಕಾ ಪಂಡಿತ್, ಮಗನಿಗೆ ನಡವಳಿಕೆ ಬಗ್ಗೆ ಪಾಠ ಹೇಳಿಕೊಡುತ್ತಿದ್ದಾರೆ. ಈ ಮೂಲಕ ಮಗನಿಗೆ ಕನ್ನಡ, ಇಂಗ್ಲೀಷ್ ಹಾಗೂ ಕೊಂಕಣಿ ಭಾಷೆಗಳನ್ನು ಕಲಿಸುತ್ತಿದ್ದಾರೆ.

lesson about manners
ರಾಧಿಕಾ ಪಂಡಿತ್
author img

By

Published : Mar 16, 2021, 11:18 AM IST

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್​ವುಡ್ ಪ್ರಿನ್ಸ್ ರಾಧಿಕಾ ಪಂಡಿತ್ ಇತ್ತೀಚೆಗಷ್ಟೇ ಮಕ್ಕಳೊಂದಿಗೆ ಮಾಲ್ಡೀವ್ಸ್​​ಗೆ ತೆರಳಿ ಆ ಸುಂದರ ಕ್ಷಣವನ್ನು ಬಹಳ ಎಂಜಾಯ್ ಮಾಡಿದ್ದರು. ಸಮಯ ದೊರೆತರೆ ಸಾಕು ಮಕ್ಕಳೊಂದಿಗೆ ಕಾಲ ಕಳೆಯುವ ಯಶ್ ದಂಪತಿ, ಮಕ್ಕಳಿಗೆ ಪಾಠ ಕೂಡಾ ಹೇಳಿಕೊಡುತ್ತಾರೆ. ರಾಧಿಕಾ ಪಂಡಿತ್ ಸದ್ಯಕ್ಕೆ ಜವಾಬ್ದಾರಿಯುತ ಅಮ್ಮನಾಗಿ ಮಕ್ಕಳಿಗೆ ನಡವಳಿಕೆ ಬಗ್ಗೆ ಪಾಠ ಮಾಡುತ್ತಿದ್ದಾರೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಬರ್ತ್‌ಡೇ ದಿನ ಸುದೀಪ್‌ ತನ್ನ ಪತ್ನಿಯನ್ನು ಮೆಚ್ಚಿಸಿದ್ದು ಹೇಗೆ ಗೊತ್ತೇ? ರಮೇಶ್ ಅರವಿಂದ್‌ ಹೇಳಿದ ಸಂಗತಿ..

ಕೆಲವು ದಿನಗಳ ಹಿಂದೆ ಯಥರ್ವ, ಏರೋಪ್ಲೇನ್ ಎನ್ನಲು ಹೋಗಿ ತೊದಲು ಮಾತಿನಿಂದ ಅಪಾಪೀನ್ ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ರಾಧಿಕಾ ಪಂಡಿತ್ ಮಗನಿಗೆ ನಡವಳಿಕೆ ಬಗ್ಗೆ ಪಾಠ ಮಾಡುತ್ತಿರುವ ವಿಡಿಯೋ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 'ಯಾರಾದರೂ ಏನಾದರೂ ನೀಡಿದರೆ ಏನು ಹೇಳಬೇಕು'..? ಎಂದು ರಾಧಿಕಾ ಕನ್ನಡ, ಇಂಗ್ಲೀಷ್ ಹಾಗೂ ಕೊಂಕಣಿ ಮೂರೂ ಭಾಷೆಗಳಲ್ಲಿ ಮಗನನ್ನು ಪ್ರಶ್ನಿಸುತ್ತಾರೆ. ಅಮ್ಮನ ಮಾತನ್ನು ಅರ್ಥ ಮಾಡಿಕೊಳ್ಳುವ ಯಥರ್ವ್ ಥ್ಯಾಂಕ್ಸ್ ಎಂದು ಹೇಳುತ್ತಾನೆ. ನಡವಳಿಕೆ ಜೊತೆ ಮಗನಿಗೆ ಇಂಗ್ಲೀಷ್, ತಮ್ಮ ಮಾತೃಭಾಷೆ ಕೊಂಕಣಿ ಹಾಗೂ ಪತಿ ಮಾತೃಭಾಷೆ ಕನ್ನಡ ಮೂರೂ ಭಾಷೆಗಳನ್ನು ಕಲಿಸುತ್ತಿದ್ದಾರೆ. ಈ ವಿಡಿಯೋವನ್ನು ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಈ ಎರಡು ಸಣ್ಣ ಪದಗಳ ಶಕ್ತಿಯನ್ನು ಎಂದಿಗೂ ಕಡಿಮೆ ಎಂದು ಭಾವಿಸಬೇಡಿ. ಈ ಒಂದು ಚಿಕ್ಕ ಪದ ಮ್ಯಾಜಿಕನ್ನೇ ಸೃಷ್ಟಿಸುತ್ತದೆ' ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

lesson about manners
ಯಶ್ ಕುಟುಂಬ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.