ಗುಳಿಕೆನ್ನೆ ಚೆಲುವೆ ರಚಿತ ರಾಮ್ ಮನೆಗೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದಾರೆ. ಅಕ್ಕನ ಮದುವೆ ಸಂಭ್ರಮದಲ್ಲಿರುವ ರಚ್ಚು ತನ್ನ ನೆಚ್ಚಿನ ಮರ್ಸಿಡಿಸ್ ಬೆಂಜ್ ಜಿಎಲ್‌ಎಸ್-350 ಸೀರೀಸ್ನ ಎಸ್.ಯೂವಿ ಕಾರನ್ನು ಖರೀದಿಸಿದ್ದಾರೆ.
![Rachitha ram buying the new car](https://etvbharatimages.akamaized.net/etvbharat/prod-images/kn-bng-4-rachitha-buy-newcar-ka10012_19112019215104_1911f_1574180464_94.jpg)
ಈ ಕಾರಿನ ಬೆಲೆ 88 ಲಕ್ಷ. ಬೆಂಗಳೂರಿನ ಕಸ್ತೂರ್ ಬಾ ರಸ್ತೆಯ ಮರ್ಸಿಡಿಸ್ ಬೆಂಜ್ ಸುಂದರಂ ಮೋಟರ್ಸ್ನಲ್ಲಿ ರಚಿತಾ ಕಾರು ಖರೀದಿಸಿದ್ದಾರೆ. ಕಾರು ಡೆಲಿವೆರಿ ಕೊಡುವ ಸಂದರ್ಭದಲ್ಲಿ ಶೋ ರೂಂ ಸಿಬ್ಬಂದಿ ರಚ್ಚುಗೆ ಸನ್ಮಾನ ಮಾಡಿದ್ದಾರೆ.
![Rachitha ram buying the new car](https://etvbharatimages.akamaized.net/etvbharat/prod-images/kn-bng-4-rachitha-buy-newcar-ka10012_19112019215104_1911f_1574180464_297.jpg)