ಇತ್ತೀಚೆಗೆ ಅಭಿಮಾನಿಯೊಬ್ಬ 2,75,000 ರೂಪಾಯಿ ನೀಡಿ ಸಿನಿಮಾದ 1200 ಟಿಕೆಟ್ಗಳನ್ನು ತಾನೇ ಖರೀದಿಸಿದ್ದರು. ಅಷ್ಟರ ಮಟ್ಟಿಗೆ ಪವರ್ ಸ್ಟಾರ್ ಕ್ರೇಜ್ ಆರಂಭವಾಗಿದೆ. ' ಚಕ್ರವ್ಯೂಹ' ಸಿನಿಮಾ ನಂತರ ಎರಡನೇ ಬಾರಿಗೆ ಪುನೀತ್ ಜೊತೆ ನಟಿಸಿರುವ ರಚಿತಾ ಕೂಡಾ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಎಂಬ ಕುತೂಹಲದಲ್ಲಿದ್ದಾರೆ. ಸಾಮಾನ್ಯರಷ್ಟೇ ಅಲ್ಲ, ನಟಸಾರ್ವಭೌಮನ ಹಾಡಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡಾ ಸೊಂಟ ಬಳುಕಿಸಿದ್ಧಾರೆ. ಸಿನಿಮಾದ ಟೈಟಲ್ ಹಾಡಿಗೆ ರಚಿತಾ ಹಾಕಿರುವ ಸ್ಟೆಪ್ಸ್ ವಿಡಿಯೋ ವೈರಲ್ ಆಗಿದೆ.
ರಾಕ್ಲೈನ್ ವೆಂಕಟೇಶ್ ನಿರ್ಮಿಸಿರುವ ಸಿನಿಮಾ ಫೆಬ್ರವರಿ 7 ರಂದು ಗುರುವಾರ ಬಿಡುಗಡೆಯಾಗಲಿದ್ದು ಬಾಕ್ಸ್ ಆಫೀಸ್ ಬೇಟೆ ಶುರುವಾಗಲಿದೆ.