ಇತ್ತೀಚೆಗೆ ನಟಿ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ಮದುವೆ ಆಗಿದೆ. ಆಷ್ಟ್ರೇಲಿಯಾದಲ್ಲಿರುವ ಬ್ಯುಸಿನೆಸ್‌ಮೆನ್ ಗೌತಮ್ ಜೊತೆ ನಿತ್ಯಾ ರಾಮ್ ಸಪ್ತಪದಿ ತುಳಿದಿದ್ದಾರೆ. ಆದರೆ, ಇದೀಗ ಡಿಂಪಲ್ ಕ್ವೀನ್ ಅಭಿಮಾನಿಗಳಲ್ಲಿ ಒಂದು ಅನುಮಾನ ಕಾಡಲು ಶುರುವಾಗಿದೆ. ಗೌತಮ್ ಜೊತೆ ನಿತ್ಯಾ ಮದುವೆ ಆದ್ರಾ ಅಥವಾ ರಚಿತಾ ರಾಮ್ ಮದುವೆ ಆದ್ರಾ ಅಂತಾ.. ಈ ಅನುಮಾನಕ್ಕೆ ಕಾರಣವಾಗಿದ್ದು, ರಚಿತಾ ಪೋಸ್ಟ್ ಮಾಡಿರುವ ಆ ಫೋಟೋ..
![rachita ram Instagram pic create doubt](https://etvbharatimages.akamaized.net/etvbharat/prod-images/5306495_thumb2.png)
![rachita ram Instagram pic create doubt](https://etvbharatimages.akamaized.net/etvbharat/prod-images/5306495_thumb6.png)
![rachita ram Instagram pic create doubt](https://etvbharatimages.akamaized.net/etvbharat/prod-images/5306495_thumb3.png)
ಮದುವೆ ಸಂದರ್ಭದಲ್ಲಿ ಭಾವನ ಜೊತೆ ರಚಿತಾ ರಾಮ್ ಮದುವೆ ಮಾಲೆ ಧರಿಸಿ, ಮದುವೆ ಟೋಪಿ ಹಾಕಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನೋಡುಗರಿಗೆ ಇದು ಗೌತಮ್ ಮತ್ತು ರಚಿತಾ ರಾಮ್ ಮದುವೆಯ ರೀತಿ ಕಾಣುತ್ತದೆ. ಯಾಕಂದ್ರೆ, ಗೌತಮ್ ಮತ್ತು ರಚಿತ ಒಂದೇ ರೀತಿಯ ಮಾಲೆ ಧರಿಸಿ, ಇಬ್ಬರೂ ಕೂಡ ಮದುವೆಯಲ್ಲಿ ಹಾಕುವ ವೈಟ್ ಅಂಡ್ ವೈಟ್ ಬಟ್ಟೆ ಧರಿಸಿದ್ದಾರೆ.
![rachita ram Instagram pic create doubt](https://etvbharatimages.akamaized.net/etvbharat/prod-images/5306495_thumb5.png)
ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ ನೋಡಿದ ಕೆಲವುರು ರಚಿತಾಗೆ ಮದುವೆಯಾಯ್ತಾ ಎಂದು ಕೇಳಿದ್ರೆ, ಇನ್ನೂ ಕೆಲವರು ಮುಂದಿನ ಮದುಮಗಳು ರಚಿತ ರಾಮ್ ಎಂದು ಕಿಂಡಲ್ ಮಾಡಿದ್ದಾರೆ.