ಅಕ್ಕನ ಮದುವೆ ಸಡಗರದಲ್ಲಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ವಿಶೇಷ ಅಂದ್ರೆ ಅಕ್ಕನ ಮದುವೆ ಮುಗಿಯುತ್ತಿದ್ದ ಹಾಗೆ ಡೈರೆಕ್ಟಾಗಿ ಹೈದರಾಬಾದ್ಗೆ ಹಾರಿದ್ದಾರೆ.
ಕಳೆದ 20 ದಿನಗಳಿಂದ ಶೂಟಿಂಗ್ ಕೆಲಸಗಳಿಗೆ ಬ್ರೇಕ್ ಹಾಕಿದ್ದ ಡಿಂಪಲ್ ಕ್ವೀನ್ ಹೈದರಾಬಾದ್ಗೆ ಹೋಗಿ 'ಸೂಪರ್ ಮಚ್ಚಿ' ಅಂತಿದ್ದಾರೆ. ಸದ್ದಿಲ್ಲದೆ ಸ್ಯಾಂಡಲ್ವುಡ್ನಿಂದ ಟಾಲಿವುಡ್‌ಗೆ ಹಾರಿರುವ ರಚಿತಾ, ಚಿರಂಜೀವಿ ಅಳಿಯ ಕಲ್ಯಾಣ್ ದೇವ್ಗೆ ಜೋಡಿಯಾಗಿ ಸೂಪರ್ ಮಚ್ಚಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.
- " class="align-text-top noRightClick twitterSection" data="
">
ಐ ಲವ್ ಯೂ ಚಿತ್ರದ ತೆಲುಗು ವರ್ಷನ್ ಮೂಲಕ ತೆಲುಗರಿಗೆ ಪರಿಚಿತರಾಗಿದ್ದ ರಚಿತಾ, ಈಗ ತೆಲುಗು ಸಿನಿಮಾದಲ್ಲೇ ನಾಯಕಿಯಾಗಿ ನಟಿಸುತ್ತಿದ್ದಾರೆ. "ಸೂಪರ್ ಮಚ್ಚಿ" ಚಿತ್ರವನ್ನು ಪುಲಿ ವಾಸು ನಿರ್ದೇಶನ ಮಾಡುತ್ತಿದ್ದಾರೆ.