ಇತ್ತೀಚೆಗೆ ನಟಿ ರಚಿತಾ ರಾಮ್ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ರಚಿತಾರಾಮ್ ಮದುವೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಇನ್ನು ಈ ಹಿಂದೆ ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ಮಾತನಾಡಿದ್ದ ರಚಿತಾ ರಾಮ್
ಇನ್ನು ಈ ಮಾತುಗಳನ್ನೇ ಆಧಾರವಾಗಿಟ್ಟುಕೊಂಡು ಕೆಲವರು ನಿಖಿಲ್ ಕುಮಾರಸ್ವಾಮಿ ಮತ್ತು ರಚಿತಾ ನಡುವೆ ಗುಸು-ಪಿಸು ನಡೆಯುತ್ತಿದೆ. ಅವರಿಬ್ಬರ ನಡುವೆ ಮದುವೆ ಮಾತುಕತೆಗಳು ನಡೆಯುತ್ತಿವೆ ಎಂದು ಕೆಲವು ಮಾಧ್ಯಮಗಳಲ್ಲಿ ಮತ್ತು ಸಾಮಾಜಿ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿತ್ತು. ಇಂದು ನಿಖಿಲ್ ಕುಮಾರಸ್ವಾಮಿ ಬರ್ತ್ ಡೇ ಇದ್ದು, ಈ ರೀತಿ ಮದುವೆ ಬಗ್ಗೆ ಸುಳ್ಳು ಸುದ್ದಿ ಹರಿದಾಡಿಸುವವರ ಬಗ್ಗೆ ರಚಿತಾ ಚಾಟಿ ಬೀಸಿದ್ದಾರೆ.
-
🙏🏻🙂 pic.twitter.com/umOL1bh7QF
— Rachita Ram (@RachitaRamDQ) January 22, 2020 " class="align-text-top noRightClick twitterSection" data="
">🙏🏻🙂 pic.twitter.com/umOL1bh7QF
— Rachita Ram (@RachitaRamDQ) January 22, 2020🙏🏻🙂 pic.twitter.com/umOL1bh7QF
— Rachita Ram (@RachitaRamDQ) January 22, 2020
ವದಂತಿ ಹರಡಿಸುವವರಿಗೆ ಟ್ವೀಟ್ ಮೂಲಕ ಕ್ಲಾಸ್ ತೆಗೆದುಕೊಂಡಿರುವ ರಚಿತಾ, ನನ್ನ ವಯಕ್ತಿಕ ಮತ್ತು ಸಿನಿಮಾ ಸಂಬಂಧಿಸಿದಂತೆ ನೀವು ಹಾಕುವ ಪೋಸ್ಟ್ಗಳು ನಿಮಗೆ ಮನರಂಜನೆಯಾದ್ರೆ, ನನಗೆ ನೋವು ತರಿಸುತ್ತದೆ ಎಂದು ಬರೆಕೊಂಡಿದ್ದಾರೆ.
ಇನ್ನು ತಮ್ಮ ಮದುವೆ ಬಗ್ಗೆ ಮಾತನಾಡಿರುವ ರಚಿತಾ ರಾಮ್, ನನಗೆ ನಿಶ್ಚಿತಾರ್ಥವಾಗಿಲ್ಲ. ನನ್ನ ಮದುವೆ ನಿಶ್ಚಯವಾದ್ರೆ ನಾನೇ ನಿಮಗೆ ತಿಳಿಸುತ್ತೇನೆ. ಅಲ್ಲದೆ ನಾನು ನನ್ನ ಅಧಿಕೃತ ಖಾತೆಯಲ್ಲಿ ಹಾಕಿದ ಸುದ್ದಿ ಮಾತ್ರ ಸತ್ಯ. ಅದನ್ನು ಬಿಟ್ಟು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಟ್ವೀಟ್ ಮೂಲಕವೇ ಸ್ಪಷ್ಟಪಡಿಸಿದ್ದಾರೆ.