ಕನ್ನಡ ಚಿತ್ರರಂಗದ ಸೂಪರ್ ಹಿಟ್ ನಿರ್ದೇಶಕ ಎನ್ನಿಸಿಕೊಂಡ ಪುಟ್ಟಣ್ಣ ಕಣಗಾಲ್ ಅವರು ಕಾಲವಾಗಿ ಜೂನ್ 5ಕ್ಕೆ 34 ವರ್ಷಗಳು ತುಂಬಲಿದೆ. ಪುಟ್ಟಣ್ಣ ಸ್ಮರಣಾರ್ಥ ರಾಜ್ಯದ ನಾನಾ ಕಡೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
![puttanna kanagal](https://etvbharatimages.akamaized.net/etvbharat/prod-images/puttanna-kanagal-memory-on-may-18-20191557370870010-10_0905email_1557370880_880.jpg)
ಮೇ 18ರಂದು ಬೆಂಗಳೂರಿನ ಪ್ರೇಮಚಂದ್ರ ಸಾಗರ ಸಭಾಂಗಣದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯ ಕರಿಸುಬ್ಬು ಅವರ ಅಧ್ಯಕ್ಷತೆಯಲ್ಲಿ ‘ಮೂಕ ಹಕ್ಕಿಯು ಹಾಡುತಿದೆ’ ಸಂಗೀತ ಸಂಜೆಯನ್ನು ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ. ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಲ್ಲಿ ನಟಿಸಿದ ಏಳು ತಾರೆಯರು ಈ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ. ಡಾ. ಜಯಂತಿ, ಶಿವರಾಮಣ್ಣ, ಡಾ. ಶ್ರೀನಾಥ್, ಡಾ. ಶ್ರೀಧರ್, ರಾಮಕೃಷ್ಣ, ಜೈ ಜಗದೀಶ್, ಪದ್ಮಾ ವಾಸಂತಿ ಹಾಗೂ ಚಿತ್ರರಂಗದ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
![puttanna kanagal](https://etvbharatimages.akamaized.net/etvbharat/prod-images/puttanna-kanagal-memory---musical-evening-on-may-181557370870009-59_0905email_1557370880_420.jpg)
ಅಂದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನಿಮಾ ಹಾಡುಗಳು ಹಾಗೂ ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಶ್ ಅವರ ಸ್ಮರಣಾರ್ಥವಾಗಿ ಅವರ ಸಿನಿಮಾಗಳ ಹಾಡುಗಳನ್ನೂ ಹಾಡಲಾಗುವುದು. ದೇಶಭಕ್ತಿ, ಪ್ರೀತಿ, ಪ್ರೇಮ, ವೇದನೆ ಯಾವ ಭಾವನೆಯೇ ಇದ್ದರೂ ಅದು ಹೃದಯವನ್ನು ನಾಟಿ ಪ್ರೇಕ್ಷಕರನ್ನು ಮನಸೂರೆಗೊಂಡ ಪುಟ್ಟಣ್ಣ ಅವರ ಚಿತ್ರಗಳು ಹಾಗೂ ಹಾಡುಗಳಿಗೆ ಸರಿ ಸಾಟಿಯಿಲ್ಲ. ಮೇ 18ರ ಸಂಜೆಯ ಮುಖ್ಯ ಅತಿಥಿಗಳಲ್ಲಿ ಶ್ರೀಮತಿ ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್ ಹಾಜರಿರುತ್ತಾರೆ.