ETV Bharat / sitara

ದೊಡ್ಮನೆಯಿಂದ ನಟಿಯಾಗುತ್ತಿರೋದು ಇದೇ ಮೊದಲು.. ಸೊಸೆ ಕುರಿತು ಮಾವಂದಿರಾದ 'ಅಣ್ತಮ್ಮಾ' ಹೀಗಂದರು.. - punith Rajkumar talk about Ninna sanihake

ನಮ್ಮ ಕುಟುಂಬದಿಂದ ಸಿನಿಮಾಗೆ ಬರ್ತಾ ಇರೋ ಹೆಣ್ಣು ಮಗಳು ಧನ್ಯಾ. ಇದು ನಮಗೆ ಹೆಚ್ಚು ಹೆಮ್ಮೆ ಜೊತೆಗೆ ಖುಷಿ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸೂರಜ್ ಗೌಡ ನಟಿಸಿ ನಿರ್ದೇಶನ ಮಾಡಿರೋ ನಿನ್ನ ಸನಿಹಕೆ ಸಿನಿಮಾ ಇದೇ ತಿಂಗಳು 20ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ..

ninna sanihake cinema poster
ನಿನ್ನ ಸನಿಹಕೆ ಸಿನಿಮಾ ಪೋಸ್ಟರ್
author img

By

Published : Aug 6, 2021, 4:51 PM IST

ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಅಂದಾಕ್ಷಣ ಥಟ್ ಅಂತಾ ನೆನಪಾಗೋದು ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್. ಈ ದೊಡ್ಮನೆ ಅಂದರೇನೆ ಹಾಗೆ. ಈ ಹೆಸರಿಗೆ ಒಂದು ಗತ್ತು, ಗೌರವ. ಸದ್ಯ ಅಣ್ಣಾವ್ರ ಕುಟುಂಬದ ಮೊದಲ ಹೆಣ್ಣು ಮಗಳು ಹೀರೋಯಿನ್ ಆಗುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.

ಸೊಸೆ ಚಿತ್ರರಂಗ ಪ್ರವೇಶಿಸಿ ನಟಿ ಆಗ್ತಿರುವುದಕ್ಕೆ ಮಾವ ಶಿವರಾಜ್​ಕುಮಾರ್ ಮಾತು..​

ಸಹಜವಾಗಿ ಧನ್ಯಾ ರಾಮ್​ಕುಮಾರ್ ಸಿನಿಮಾಗೆ ಬರ್ತಾರೆ ಅಂತಾ ಹೇಳಿದಾಗ, ಅಭಿನಯ, ಎಕ್ಸ್ ಪ್ರೆಶನ್ ಹಾಗೂ ತೆರೆ ಮೇಲೆ ಹೇಗೆ ಕಾಣ್ತಾರೆ ಎಂಬ ಕುತೂಹಲ ಗಾಂಧಿನಗರ ಅಲ್ಲದೇ ಸಿನಿಮಾ ಪ್ರಿಯರಲ್ಲಿಯೂ ಇತ್ತು. ಈ ಎಲ್ಲಾ ಪ್ರಶ್ನೆಗಳಿಗೆ ನಿನ್ನ ಸನಿಹಕೆ ಸಿನಿಮಾದ ಟ್ರೈಲರ್​ನಲ್ಲಿ ಉತ್ತರ ಸಿಕ್ಕಿದೆ.

ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸಿರೋ ನಿನ್ನ ಸನಿಹಕೆ ಸಿನಿಮಾದ ಟ್ರೈಲರ್ ಬಗ್ಗೆ ಸೋದರ ಮಾವಂದಿರಾದ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಮೆಚ್ಚಿಕೊಂಡಿದ್ದಾರೆ.

ಈ ಬಗ್ಗೆ ಶಿವರಾಜ್ ಕುಮಾರ್ ಮಾತನಾಡಿ, ಕಲೆ ಅನ್ನೋದು ರಕ್ತಗತವಾಗಿ ಬರುತ್ತೆ ಅನ್ನೋದಿಕ್ಕೆ ನಿನ್ನ ಸನಿಹಕೆ ಟ್ರೈಲರ್ ನೋಡಬೇಕು. ಅದರಲ್ಲಿ ಧನ್ಯಾ ಅನುಭವ ಇರುವ ಹುಡಿಯಾಗಿ ನಟಿಸಿದ್ದಾಳೆ ಎಂದು ಕೊಂಡಾಡಿದ್ದಾರೆ.

ಸೋದರ ಸೊಸೆ ಕುರಿತಂತೆ ಮಾವ ಪುನೀತ್ ರಾಜ್​ಕುಮಾರ್ ಮಾತು..

ಈ ಬಗ್ಗೆ ಪುನೀತ್ ರಾಜ್​ಕುಮಾರ್ ಮಾತನಾಡಿ, ನಮ್ಮ ಕುಟುಂಬದಿಂದ ಸಿನಿಮಾಗೆ ಬರ್ತಾ ಇರೋ ಹೆಣ್ಣು ಮಗಳು ಧನ್ಯಾ. ಇದು ನಮಗೆ ಹೆಚ್ಚು ಹೆಮ್ಮೆ ಜೊತೆಗೆ ಖುಷಿ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸೂರಜ್ ಗೌಡ ನಟಿಸಿ ನಿರ್ದೇಶನ ಮಾಡಿರೋ ನಿನ್ನ ಸನಿಹಕೆ ಸಿನಿಮಾ ಇದೇ ತಿಂಗಳು 20ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಓದಿ: ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಯ 11ನೇ ಚಿತ್ರದ ಟೈಟಲ್ ರಿವೀಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.