ETV Bharat / sitara

ಅಪ್ಪು ಸ್ಫೂರ್ತಿ... ನಿತ್ಯ 200 ಜನರಿಂದ ನೇತ್ರದಾನ‌... 30 ಜನರಿಗೆ ಕಣ್ಣು ಜೋಡಣೆ - punith rajkumar fans

ನಟ ಅಪ್ಪು ಅಗಲಿದ ನಂತರವೂ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಪುನೀತ್ ನಿಧನರಾದ ಬಳಿಕ 30 ಜನರ ಕಣ್ಣನ್ನು ನಾವು ಬೇರೆಯವರಿಗೆ ಜೋಡಿಸಿದ್ದೇವೆ. ಸಾವಿನ ಮನೆಯಿಂದಲೂ ಕರೆ ಬರುತ್ತಿದೆ ಎಂದು ಡಾ. ಭುಜಂಗ ಶೆಟ್ಟಿ ತಿಳಿಸಿದ್ದಾರೆ.

punith
ಪುನೀತ್
author img

By

Published : Nov 4, 2021, 10:58 PM IST

ಬೆಂಗಳೂರು: ನಟ ಪುನೀತ್ ರಾಜ್​ಕುಮಾರ್​ ಅವರಿಂದ ಸ್ಫೂರ್ತಿ ಪಡೆದ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ತಮ್ಮ ನೇತ್ರಗಳನ್ನ ದಾನ ಮಾಡಲು ಮುಂದಾಗುತ್ತಿದ್ದಾರೆ.

ನಗರದ ನಾರಾಯಣ ನೇತ್ರಾಲಯದಲ್ಲಿ ನೇತ್ರದಾನ ಮಾಡಲು ಜನರ ದಂಡು ಹರಿದು ಬರುತ್ತಿದೆ. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಈ ಬಗ್ಗೆ ಡಾ. ಭುಜಂಗ ಶೆಟ್ಟಿ ಮಾತನಾಡಿದ್ದು, ಪುನೀತ್ ಅವರ ಸಮಾಧಿಗೆ ಭೇಟಿ ಕೊಟ್ಟು ಬಂದವರೆಲ್ಲ ಬಹುತೇಕರು ನೇರವಾಗಿ ನಾರಾಯಣ ನೇತ್ರಾಲಯಕ್ಕೆ ಬಂದು ಕಣ್ಣಿನ ದಾನ ಮಾಡಿದ್ದಾರೆ. ಈ ಮೊದಲು ದಿನಕ್ಕೆ 3 ರಿಂದ 4 ಜನ ನೇತ್ರದಾನ ಮಾಡಿದರೆ, ಅದೇ ದೊಡ್ಡ ವಿಷಯವಾಗಿತ್ತು. ಆದ್ರೀಗ ನಿತ್ಯ 200 ಜನ ನೇತ್ರದಾನ ಮಾಡಲು ಬರುತ್ತಿದ್ದಾರೆ.

ನಟ ಅಪ್ಪು ಅಗಲಿದ ನಂತರವೂ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಪುನೀತ್ ನಿಧನರಾದ ಬಳಿಕ 30 ಜನರ ಕಣ್ಣನ್ನು ನಾವು ಬೇರೆಯವರಿಗೆ ಜೋಡಿಸಿದ್ದೇವೆ. ಸಾವಿನ ಮನೆಯಿಂದಲೂ ಕರೆ ಬರುತ್ತಿದೆ. ಇಷ್ಟರಮಟ್ಟಿಗೆ ಜನ ಜಾಗೃತಿಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಓದಿ: ಅಪ್ಪು ಬಾಲ್ಯದಲ್ಲೇ ಹೈಪರ್ ಆ್ಯಕ್ಟೀವ್ ಅನ್ನೋದಕ್ಕೆ ಅದೊಂದು ಘಟನೆ ಸಾಕ್ಷಿ...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.