ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅಭಿನಯದ ‘ಪಡ್ಡೆ ಹುಲಿ’ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೇರಿಕೊಂಡಿದ್ದಾರೆ. ಸ್ನೇಹ ಹಾಗೂ ಪ್ರೀತಿಯ ಮೇರೆಗೆ ರಾಜಕುಮಾರ್ ಪಡ್ಡೆಹುಲಿ ಕ್ಲೈಮಾಕ್ಸ್ಲ್ಲಿ ಅತಿಥಿ ಆಗಿ ಕಾಣಿಸಿಕೊಂಡಿದ್ದಾರೆ. ಅಪ್ಪು ಅವರದು 15 ನಿಮಿಷಗಳಷ್ಟು ಇರುವಿಕೆ ಈ ಚಿತ್ರದಲ್ಲಿದೆ ಎಂದು ಮಾಹಿತಿ ರಿವೀಲ್ ಆಗಿದೆ.
‘ಪಡ್ಡೆ ಹುಲಿ’ ಮುಹೂರ್ತಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಕಿಚ್ಚ ಸುದೀಪ್ ಅವರು ಆಗಮಿಸಿ, ಚಿತ್ರತಂಡಕ್ಕೆ ವಿಶ್ ಮಾಡಿದ್ದರು. ಇದೀಗ ಈ ವೀರ ಕನ್ನಡಿಗ ಪಡ್ಡೆಹುಲಿ ಚಿತ್ರದ ಭಾಗವಾಗಿರುವ ಸುದ್ದಿ ಹೊರಬಿದ್ದಿದೆ.
ಗುರು ದೇಶಪಾಂಡೆ ನಿರ್ದೇಶನದ ‘ಪಡ್ಡೆ ಹುಲಿ’ ಚಿತ್ರತಂಡ ಮೊದಲು ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರನ್ನು ತಂದೆ ಪಾತ್ರಕ್ಕೆ ಆಹ್ವಾನಿಸಿತು. ಆಮೇಲೆ ಕಬಡ್ಡಿ ಕೋಚ್ ಆಗಿ ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಸೇರಿಕೊಂಡರು. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಐದು ಮಹನಿಯರ ಕವನಗಳನ್ನು ಈ ಚಿತ್ರಕ್ಕೆ ಬಳಸಿಕೊಂಡರು.ಈಗ ಪಡ್ಡೆಹುಲಿಗೆ 'ಪವರ್' ಸಾಥ್ ಸಿಕ್ಕಿದೆ. ಹೀಗೆ ಶ್ರೇಯಸ್ ಮಂಜು ಹಾಗೂ ನಿಶ್ವಿಕಾ ನಾಯ್ಡು ಸಿನಿಮಾಕ್ಕೆ ದೊಡ್ಡ ಹೆಸರುಗಳು ಸೇರ್ಪಡೆ ಆಗುತ್ತಲೇ ಇದೆ.