ETV Bharat / sitara

ಸಿನಿಮಾ ಕಾರ್ಮಿಕರಿಗೆ ಪುನೀತ್, ಹೊಂಬಾಳೆ ಫಿಲಂಸ್ ನೆರವು

ಕಾರ್ಮಿಕರ ಒಕ್ಕೂಟಕ್ಕೆ ನಟ ಪುನೀತ್ ರಾಜ್​ಕುಮಾರ್ 10 ಲಕ್ಷ ರೂ. ಧನಸಹಾಯ ಮಾಡಿದರೆ, ವಿಜಯ್​ ಕಿರಗಂದೂರು 32 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಇವರಿಬ್ಬರಿಗೂ ಒಕ್ಕೂಟದ ಅಧ್ಯಕ್ಷ ಸಾ.ರಾ. ಗೋವಿಂದು ಮತ್ತು ಕಾರ್ಯದರ್ಶಿ ರವೀಂದ್ರನಾಥ್ ಧನ್ಯವಾದ ಸಲ್ಲಿಸಿದ್ದಾರೆ.

Puneeth and Vijaykumar Kiragandur
ಪುನೀತ್​ ಮತ್ತು ವಿಜಯ್ ​ ಕಿರಗಂದೂರು
author img

By

Published : Jun 8, 2021, 2:26 PM IST

ಕೊರೊನಾದಿಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸ್ಯಾಂಡಲ್​ವುಡ್​ನ ಹಲವು ನಟ, ನಟಿಯರು ಹಾಗು ತಂತ್ರಜ್ಱರು ಸಹಾಯಹಸ್ತ ಚಾಚಿದ್ದಾರೆ. ಕೆಲ ದಿನಗಳ ಹಿಂದೆ ನಟ ಉಪೇಂದ್ರ, ಕನ್ನಡ ಚಲನಚಿತ್ರ ಕಾರ್ಮಿಕರು ಮತ್ತು ತಂತ್ರಜ್ಱರ ಒಕ್ಕೂಟದ ಎಲ್ಲಾ ಸದಸ್ಯರಿಗೂ ಉಚಿತವಾಗಿ ರೇಷನ್ ಕಿಟ್ ವಿತರಿಸಿದ್ದರು. ಬಳಿಕ ರಾಕಿಂಗ್ ಸ್ಟಾರ್​ ಯಶ್ 3,000 ಸಿನಿಮಾ ಕಾರ್ಮಿಕರ ಬ್ಯಾಂಕ್ ಅಕೌಂಟ್​ಗೆ ತಲಾ ಐದು ಸಾವಿರ ಡೆಪಾಸಿಟ್ ಮಾಡಿದ್ದರು.

ಇದೀಗ ಕಾರ್ಮಿಕರ ನೆರವಿಗೆ ಪುನೀತ್ ರಾಜ್​ಕುಮಾರ್ ಮತ್ತು ಹೊಂಬಾಳೆ ಫಿಲಂಸ್​​ನ ವಿಜಯ್​ ಕಿರಗಂದೂರು ಸಹ ಮುಂದೆ ಬಂದಿದ್ದಾರೆ. ಕಾರ್ಮಿಕರ ಒಕ್ಕೂಟಕ್ಕೆ ಪುನೀತ್ 10 ಲಕ್ಷ ರೂ. ಧನಸಹಾಯ ಮಾಡಿದರೆ, ವಿಜಯ್​ ಕಿರಗಂದೂರು 32 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಇವರಿಬ್ಬರಿಗೂ ಒಕ್ಕೂಟದ ಅಧ್ಯಕ್ಷ ಸಾ.ರಾ. ಗೋವಿಂದು ಮತ್ತು ಕಾರ್ಯದರ್ಶಿ ರವೀಂದ್ರನಾಥ್ ಧನ್ಯವಾದ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಕಾರ್ಮಿಕರಿಗೆ ಲಸಿಕೆ ಹಾಕಿಸಬೇಕು ಎಂದು ಪುನೀತ್ ಯೋಚಿಸಿದ್ದರಂತೆ. ಅದಕ್ಕಾಗಿ 10 ಲಕ್ಷ ರೂ.ಗಳನ್ನು ಎತ್ತಿಟ್ಟಿದ್ದರಂತೆ. ಈ ಮಧ್ಯೆ ಸರ್ಕಾರವೇ ಕಾರ್ಮಿಕರಿಗೆ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ಉಚಿತವಾಗಿ ಲಸಿಕೆ ಹಾಕಿಸಿದೆ. ಹಾಗಾಗಿ, ಲಸಿಕೆಗಾಗಿ ಇಟ್ಟಿದ್ದ ಹಣವನ್ನು ಪುನೀತ್, ಕಾರ್ಮಿಕರ ಒಕ್ಕೂಟಕ್ಕೆ ಕೊಟ್ಟಿದ್ದಾರೆ. ಅದನ್ನು ಅಗತ್ಯವಿರುವ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಬಳಸಿಕೊಳ್ಳುವುದಕ್ಕೆ ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ದಿನದಲ್ಲಿ ಹೊಸ ದಾಖಲೆ ಬರೆದ '777 ಚಾರ್ಲಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.