ETV Bharat / sitara

ಪುನೀತ್ ರಾಜ್​ಕುಮಾರ್​​​​​​​ 'ಯುವರತ್ನ' ಚಿತ್ರದ ಹೊಸ ಲುಕ್ ಬಿಡುಗಡೆ - Santosh anandram new movie

ಸಂತೋಷ್ ಆನಂದ್​​ರಾಮ್​ ನಿರ್ದೇಶನದಲ್ಲಿ ಪುನೀತ್ ರಾಜ್​ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಯುವರತ್ನ' ಚಿತ್ರದ ಹೊಸ ಲುಕ್ ಬಿಡುಗಡೆಯಾಗಿದೆ. ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ತಯಾರಿಸಲಾಗಿದೆ.

Puneet rajkumar starter Yuvaratna new poster out
ಪುನೀತ್ ರಾಜ್​ಕುಮಾರ್​​​​​​​
author img

By

Published : Jul 31, 2020, 12:23 PM IST

ವರಮಹಾಲಕ್ಷ್ಮಿ ಹಬ್ಬದಂದು ಸಾಮಾನ್ಯವಾಗಿ ಹೊಸ ಚಿತ್ರ ಘೋಷಿಸುವುದಾಗಲೀ, ಹೊಸ ಸಿನಿಮಾಗಳ ಪೋಸ್ಟರ್ ಅಥವಾ ಟೀಸರ್ ಬಿಡುಗಡೆ ಮಾಡುವ ಸಂಪ್ರದಾಯ ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದ ಮಾಡುತ್ತಾ ಬರಲಾಗಿದೆ. ಈ ಬಾರಿ ಕೂಡಾ ವರಮಹಾಲಕ್ಷ್ಮಿ ಹಬ್ಬದಂದು ಸಿನಿಪ್ರಿಯರಿಗೆ ಸಂತೋಷದ ಸುದ್ದಿ.

ಪುನೀತ್ ರಾಜ್​ಕುಮಾರ್ ಅಭಿನಯದ 'ಯುವರತ್ನ' ಸಿನಿಮಾದ ಹೊಸ ಪೋಸ್ಟರ್​​​ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಪವರ್ ಸ್ಟಾರ್‌ ಈ ಪೋಸ್ಟರ್​​​​ನಲ್ಲಿ ಸಖತ್ ಸ್ಟೈಲಿಷ್ ಆಗಿ ಕಾಣುತ್ತಿದ್ದಾರೆ. "ನಾನ್ ಯಾವತ್ತು ಬೇರೆಯವರ ROUTE ಅಲ್ಲಿ TRAVEL ಆಗಲ್ಲ !. ನಮ್ದೇ ದಾರಿ-ನಮ್ದೇ ಸವಾರಿ.. ಪಕ್ಕದಲ್ಲಿ FERRARI ಹೋದ್ರು ತಲೆಕೆಡಿಸಿಕೊಳ್ಳಲ್ಲ" ಎಂದು ಪುನೀತ್ ಪಂಚಿಂಗ್ ಡೈಲಾಗ್ ಹೇಳುತ್ತಿರುವಂತೆ ಬರೆಯಲಾಗಿದೆ.

Puneet rajkumar starter Yuvaratna new poster out
'ಯುವರತ್ನ' ಚಿತ್ರದ ಹೊಸ ಪೋಸ್ಟರ್

'ರಾಜಕುಮಾರ ' ನಂತರ ನಿರ್ದೇಶಕ ಸಂತೋಷ್​​​​​​​ ಆನಂದ್​​​​ರಾಮ್ ಹಾಗೂ ಪುನೀತ್ ಕಾಂಬಿನೇಷನ್​​​ನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದು. ಚಿತ್ರದಲ್ಲಿ ಸಾಕಷ್ಟು ಥ್ರಿಲ್ಲಿಂಗ್ ಅಂಶಗಳಿವೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್​​​ನಲ್ಲಿ ಪುನೀತ್ ರಾಜ್​ಕುಮಾರ್ ಕಾಲೇಜು ಹುಡುಗ, ರಗ್ಬಿ ಆಟಗಾರ, ಆ್ಯಕ್ಷನ್ ಹೀರೋ ಆಗಿ ಅಬ್ಬರಿಸಿದ್ದಾರೆ.

ಚಿತ್ರದಲ್ಲಿ ಪವರ್ ಸ್ಟಾರ್​​ಗೆ ಸಯೇಷಾ ಸೈಗಲ್ ನಾಯಕಿಯಾಗಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಂಗದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ತಮನ್ ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಬಹುತೇಕ ಟಾಕಿ ಪೋಷನ್ ಚಿತ್ರೀಕರಣ ಮುಗಿದಿದ್ದುಒಂದು ಹಾಡು ಬಾಕಿ ಇದೆ. ಎಲ್ಲಾ ಸರಿ ಇದ್ದಿದ್ದರೆ ಈ ವೇಳೆಗೆ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣ ಸಿನಿಮಾ ಮುಂದಕ್ಕೆ ಹೋಗಿದೆ. ಒಟ್ಟಿನಲ್ಲಿ 'ಯುವರತ್ನ 'ನ ಹೊಸ ಲುಕ್​​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.