ಏಪ್ರಿಲ್ 24 ಅಭಿಮಾನಿ ದೇವರುಗಳು ಪಾಲಿಗೆ ಬಹಳ ವಿಶೇಷವಾದ ದಿನ. ಇಂದು ಕನ್ನಡಿಗರು ಆರಾಧಿಸುವ ವರನಟ ಡಾ. ರಾಜ್ಕುಮಾರ್ ಹುಟ್ಟಿದ ದಿನ. ಅಭಿಮಾನಿಗಳು ಈ ದಿನವನ್ನು ತಮ್ಮ ಮನೆ ಹಬ್ಬವಾಗಿ ಆಚರಿಸಿದ್ದಾರೆ.
-
Wanted to share this with you all today.....Happy Birthday Appaji we miss you..... pic.twitter.com/PuFaVYa1Jn
— Puneeth Rajkumar (@PuneethRajkumar) April 24, 2019 " class="align-text-top noRightClick twitterSection" data="
">Wanted to share this with you all today.....Happy Birthday Appaji we miss you..... pic.twitter.com/PuFaVYa1Jn
— Puneeth Rajkumar (@PuneethRajkumar) April 24, 2019Wanted to share this with you all today.....Happy Birthday Appaji we miss you..... pic.twitter.com/PuFaVYa1Jn
— Puneeth Rajkumar (@PuneethRajkumar) April 24, 2019
ಡಾ. ರಾಜ್ ಕುಟುಂಬದವರೂ ಕೂಡಾ ಇಂದು ಅವರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿ ಬಂದಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಸಾಕಷ್ಟು ಗಣ್ಯರು ಕೂಡಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಡಾ. ರಾಜ್ ಫೋಟೋವನ್ನು ಷೇರ್ ಮಾಡುವ ಮೂಲಕ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಇನ್ನು ಡಾ. ರಾಜ್ ಕಿರಿಯ ಪುತ್ರ ಪುನೀತ್ ರಾಜ್ಕುಮಾರ್ ಕೂಡಾ ತಮ್ಮ ಟ್ವಿಟರ್ನಲ್ಲಿ ಅಪ್ಪಾಜಿಗೆ ಹುಟ್ಟುಹಬ್ಬದ ಶುಭ ಕೋರಿ ಅಪರೂಪದ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಡಾ. ರಾಜ್ ಅವರ ಧ್ವನಿ ಇದೆ. 'ಪ್ರತಿ ಸಿನಿಮಾದಲ್ಲಿ ನಟಿಸುವಾಗಲೂ ನನಗೆ ಭಯ ಇದ್ದೇ ಇತ್ತು. ಬಟ್ಟೆ ಹಾಕಿಕೊಂಡು, ಬಣ್ಣ ಹಚ್ಚಿ ರೆಡಿ ಆಗಿ ಹೀಗೇ ಅಭಿನಯಿಸಬೇಕು ಎಂದು ಕ್ಯಾಮರಾ ಮುಂದೆ ಹೋಗಿ ನಿಂತರೆ ಅಲ್ಲಿ ಎಲ್ಲವೂ ಬದಲಾಗುತ್ತಿತ್ತು. ಇದು ನನಗೆ ಇಂದಿಗೂ ಕಾಡುತ್ತಿರುವ ಪ್ರಶ್ನೆ. ಹಾಗೆಂದ ಮಾತ್ರಕ್ಕೆ ನಾವು ಕುಗ್ಗಬಾರದು, ನಮ್ಮ ಸತತ ಪ್ರಯತ್ನ ನಾವು ಮಾಡಬೇಕು' ಎಂದು ಮಾತನಾಡಿರುವ ವಿಡಿಯೋ ಇದಾಗಿದೆ.
ಡಾ. ರಾಜ್ ಮಾತನಾಡಿರುವ ಅಪರೂಪದ ಆಡಿಯೋ ಕೇಳಿ ಅಭಿಮಾನಿಗಳು ಕೂಡಾ ಸಂತೋಷ ವ್ಯಕ್ತಪಡಿಸಿದ್ದಾರೆ. ದೊಡ್ಡಗಾಜನೂರಿನ ಮುತ್ತುರಾಜನನ್ನು ನೆನಯದವರೇ ಇಲ್ಲ ಎನ್ನಬಹುದು.