ETV Bharat / sitara

ಎಂ.ಪಿ. ಜಯರಾಜ್​​​​​ ಕಥೆ ಹೊಂದಿರುವ ಡಾಲಿ ಧನಂಜಯ್ ಸಿನಿಮಾ ಹೆಸರು ರಿವೀಲ್​​​​​...! - Former underworld don Jayaraj

ಡಾಲಿ ಧನಂಜಯ್ ಭೂಗತ ಲೋಕದ ಮಾಜಿ ದೊರೆ ಜಯರಾಜ್ ಪಾತ್ರ ಮಾಡುತ್ತಿರುವ ಚಿತ್ರಕ್ಕೆ 'ಹೆಡ್ ಬುಷ್' ಎಂದು ಹೆಸರಿಡಲಾಗಿದ್ದು ಚಿತ್ರದ ಟೈಟಲನ್ನು ಪುನೀತ್ ರಾಜ್​ಕುಮಾರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Dolly new movie title
ಡಾಲಿ ಧನಂಜಯ್
author img

By

Published : Aug 15, 2020, 4:51 PM IST

ಬೆಂಗಳೂರಿನ ಭೂಗತ ಲೋಕದ ಮಾಜಿ ಡಾನ್ ಎಂ.ಪಿ. ಜಯರಾಜ್ ಜೀವನ ಆಧಾರಿತ ಸಿನಿಮಾದಲ್ಲಿ ಡಾಲಿ ಧನಂಜಯ್ ಜಯರಾಜ್ ಪಾತ್ರ ಮಾಡುತ್ತಿರುವುದು ತಿಳಿದ ವಿಚಾರ. ಆ ದಿನಗಳು, ಸ್ಲಂಬಾಲಾ, ಎದೆಗಾರಿಕೆ ಚಿತ್ರಗಳ ರೂವಾರಿ ಅಗ್ನಿ ಶ್ರೀಧರ್ ಅವರೇ ಜಯರಾಜ್​ ಕಥೆಯನ್ನು ಹೇಳಲು ಹೊರಟಿದ್ದಾರೆ.

Dolly new movie title
ಟೈಟಲ್ ರಿವೀಲ್ ಮಾಡಿದ ಪುನೀತ್​ ರಾಜ್​ಕುಮಾರ್

ಜಯರಾಜ್ ಬಯೋಪಿಕ್​​​ಗೆ ಇನ್ನೂ ಹೆಸರಿಟ್ಟಿರಲಿಲ್ಲ. ಆದರೆ ಇದೀಗ ಸಿನಿಮಾ ಹೆಸರು ನಿರ್ಧಾರವಾಗಿದ್ದು ಚಿತ್ರದ ಟೈಟಲ್ ಕೂಡಾ ರಿವೀಲ್ ಆಗಿದೆ. ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ಈ ಚಿತ್ರದ ಟೈಟಲನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ್ದಾರೆ. ಎಂ.ಪಿ. ಜಯರಾಜ್ ಕಥೆ ಒಳಗೊಂಡಿರುವ ಈ ಚಿತ್ರಕ್ಕೆ 'ಹೆಡ್ ಬುಷ್ ' ಅಂತಾ ಟೈಟಲ್ ಇಡಲಾಗಿದೆ. ಮೊದಲು ಈ ಟೈಟಲ್ ಕೇಳಿದಾಗ ಏನು ಹೀಗಿದೆ ಅನಿಸುತ್ತೆ. ಆದರೆ ನಿರ್ದೇಶಕ ಶೂನ್ಯ ಹೇಳುವ ಪ್ರಕಾರ ಈ 'ಹೆಡ್ ಬುಷ್ ' ಟೈಟಲ್​​​​​​​​​​ಗೂ ಜಯರಾಜ್ ಕಥೆಗೂ ಒಂದು ಲಿಂಕ್ ಇದೆಯಂತೆ.

Dolly new movie title
ಹೆಡ್ ಬುಷ್

ಈಗಾಗಲೇ ಧನಂಜಯ್ ಕೂಡಾ ಜಯರಾಜ್ ಪಾತ್ರಕ್ಕೆ ಮೈ ದಂಡಿಸುತ್ತಾ ಇದ್ದಾರೆ‌. ಕಥೆ. ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದು ಅವರ ಶಿಷ್ಯ ಶೂನ್ಯ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಅಶು ಬೆದ್ರ ಈ ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು ಸದ್ಯದಲ್ಲೇ 'ಹೆಡ್ ಬುಷ್' ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಸದ್ಯಕ್ಕೆ ಗಾಂಧಿನಗರದೆಲ್ಲೆಡೆ 'ಹೆಡ್​​ ಬುಷ್' ಟೈಟನದ್ದೇ ಸುದ್ದಿ.

Dolly new movie title
ಪುನೀತ್ ರಾಜ್​ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.