ಕರ್ನಾಟಕಕ್ಕಾಗಿ, ಕನ್ನಡ ಭಾಷೆಗಾಗಿ ನಡೆದ ಚಳವಳಿಗಳ ಪೈಕಿ 1980ರ ಸಮಯದಲ್ಲಿ ನಡೆದ ಗೋಕಾಕ್ ಚಳವಳಿ ಬಹಳ ವಿಶೇಷ. ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನ ಕಡ್ಡಾಯ ಮಾಡಬೇಕೆಂದು ಸಾಹಿತಿಗಳು, ಕನ್ನಡ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಈ ಚಳವಳಿಗೆ ಅಣ್ಣಾವ್ರು ಎಂಟ್ರಿಕೊಟ್ಟ ಮೇಲೆ ಆ ಚಳವಳಿಯ ಶಕ್ತಿಯೇ ಬೇರೆಯಾಯಿತು.
ಇನ್ನು, ಈ ಸಂದರ್ಭದಲ್ಲಿ ಅಣ್ಣಾವ್ರ ಮಕ್ಕಳು ಹೇಗಿದ್ರು ಎಂಬ ಕುತೂಹಲ ರಾಜ್ ಕುಮಾರ್ ಫ್ಯಾಮಿಲಿಯ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. 1980ರ ಸುಮಾರಿಗೆ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಯಾರೂ ಇನ್ನೂ ನಾಯಕ ನಟರಾಗಿ ಕಾಣಿಸಿರಲಿಲ್ಲ.
ರಾಜ್ ಕುಮಾರ್ ಚಳವಳಿಯಲ್ಲಿ ಭಾಗಿಯಾಗಿದ್ದ ವೇಳೆ ಅವರ ಮಕ್ಕಳು ಕೂಡ ಚಳವಳಿಯಲ್ಲಿ ಭಾಗಿಯಾಗಿದ್ರು. ಆ ಅಪರೂಪದ ಫೋಟೋವನ್ನು ಪುತ್ರ ಪುನೀತ್ ರಾಜ್ ಕುಮಾರ್ ಹಂಚಿಕೊಂಡಿದ್ದಾರೆ.
ಟ್ವಿಟರ್ನಲ್ಲಿ ಈ ಫೋಟೋವನ್ನು ಶೇರ್ ಮಾಡಿರುವ ಅಪ್ಪು, ಗೋಕಾಕ್ ಚಳವಳಿಯ ಫೋಟೋ ಇದು. ಅಪ್ಪಾಜಿ ಜೊತೆ ನಾನು, ಶಿವಣ್ಣ ಮತ್ತು ರಾಘಣ್ಣ ಎಂದು ಬರೆದಿದ್ದಾರೆ.