ಅಭಿಮಾನಿಗಳಿಗೆ ಪುನೀತ್ ರಾಜ್ ಕುಮಾರ್ ಅಂದ್ರೆ ತುಂಬಾನೇ ಅಚ್ಚು ಮೆಚ್ಚು. ಹಾಗೇ ಪುನೀತ್ ರಾಜ್ ಕುಮಾರ್ ಕೂಡ ಅಭಿಮಾನಿಗಳಲ್ಲಿ ಭೇದ ಭಾವ ಮಾಡದೆ ಎಲ್ಲರನ್ನೂ ಒಂದೇ ತೆರನಾಗಿ ಕಾಣುವಂತಹ ಸರಳ ಸಜ್ಜನಿಕೆಯ ನಟ.
ಇನ್ನು ಅಪ್ಪುಗೆ ಊಟ ಮಾಡೋದು ಅಂದ್ರೆ ತುಂಬಾ ಇಷ್ಟ. ವಿವಿಧ ಭಕ್ಷ್ಯಗಳನ್ನು ಸವಿಯೋದಂದ್ರೆ ನನಗೆ ತುಂಬಾ ಆಸೆ ಅಂತ ಇತ್ತೀಚಿನ ಸಂದರ್ಶನ ಒಂದರಲ್ಲಿ ಪುನೀತ್ ರಾಜ್ಕುಮಾರ್ ಹೇಳಿಕೊಂಡಿದ್ದರು.
ಇತ್ತೀಚೆಗೆ ಉತ್ತರ ಕರ್ನಾಟಕದ ದಾಂಡೇಲಿಯ ಗುಡ್ಡಗಾಡು ಪ್ರದೇಶದಲ್ಲಿ ಯುವರತ್ನ ಸಿನಿಮಾದ ಶೂಟಿಂಗ್ ನಡೆದಿದೆ. ಈ ವೇಳೆ ಅಲ್ಲಿನ ಒಂದು ಸಾಮಾನ್ಯ ಕುಟುಂಬದ ಜೊತೆ ಪುನೀತ್ ರಾಜ್ ಕುಮಾರ್ ಊಟ ಮಾಡಿದ್ದಾರೆ. ನೆಲದಲ್ಲಿ ಕುಳಿತು, ಬಾಳೆ ಎಲೆಯಲ್ಲಿ ಊಟ ಮಾಡುತ್ತಿರುವ ಫೋಟೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
![Puneet Raj Kumar having lunch at Dandeli's house](https://etvbharatimages.akamaized.net/etvbharat/prod-images/9466740_thumb.jpg)
ಇದೀಗ ಪುನೀತ್ ರಾಜ್ಕುಮಾರ್ ಯುವರತ್ನ ಶೂಟಿಂಗ್ ಮುಗಿಸಿ, ಇತ್ತೀಚೆಗೆ ಉತ್ತರ ಕರ್ನಾಟಕದ ಗಂಗಾವತಿ ಸಮೀಪದಲ್ಲಿ ಜೇಮ್ಸ್ ಸಿನಿಮಾದ ಶೂಟಿಂಗ್ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳ ದಂಡೇ ನೆರೆದಿದ್ದು, ಅಪ್ಪುವನ್ನು ನೇರವಾಗಿ ಕಣ್ತುಂಬಿಕೊಂಡಿದ್ದರು.