ETV Bharat / sitara

ಚಿತ್ರ ಪ್ರದರ್ಶಕರ ಅಧ್ಯಕ್ಷ ಓದುಗೌಡಗೆ ಕನ್ನಡ ನಿರ್ಮಾಪಕರು ಮಾಡಿದ ಮನವಿ ಏನು..?

ನಿರ್ಮಾಪಕರು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಬೇಕಾದಲ್ಲಿ ಪರ್ಸೆಂಟೇಜ್ ಲೆಕ್ಕದಲ್ಲಿ ಹಣ ನೀಡಬೇಕು ಎಂದು ಪ್ರದರ್ಶಕರ ಅಧ್ಯಕ್ಷ ಓದು ಗೌಡ ನಿರ್ಧಾರ ಮಾಡಿರುವುದು ಬಿಗ್​ಬಜೆಟ್ ಸಿನಿಮಾ ನಿರ್ಮಾಪಕರಿಗೆ ತಲೆನೋವಾಗಿದೆ. ಚಿತ್ರರಂಗ ಈಗ ತಾನೇ ಸುಧಾರಿಸಿಕೊಳ್ಳುತ್ತಿದೆ, ಮುಂದಿನ ವರ್ಷದಿಂದ ಪರ್ಸೆಂಟೇಜ್​​ ಪದ್ಧತಿ ಮಾಡಿ ಎಂದು ನಿರ್ಮಾಪಕರು ಮನವಿ ಮಾಡಿಕೊಂಡಿದ್ದಾರೆ.

Producers
ಕನ್ನಡ ನಿರ್ಮಾಪಕರು
author img

By

Published : Jan 21, 2021, 12:05 PM IST

ಕೊರೋನಾದಿಂದಾಗಿ ಕನ್ನಡ ಚಿತ್ರರಂಗ ಸಾಕಷ್ಟು ಕಷ್ಟಕ್ಕೆ ಸಿಲುಕಿತ್ತು. ಮುಖ್ಯವಾಗಿ ಚಿತ್ರಮಂದಿರಗಳಲ್ಲಿ ಸ್ಟಾರ್ ಸಿನಿಮಾಗಳು ಬಿಡುಗಡೆ ಆಗಿ 10 ತಿಂಗಳೇ ಕಳೆದಿವೆ. ಈ ಮಧ್ಯೆ ಕೇಂದ್ರ ಸರ್ಕಾರ 50 ಪರ್ಸೆಂಟ್ ಸೀಟುಗಳ ಚಿತ್ರ ಪ್ರದರ್ಶನಕ್ಕೆ ಅನುಮತಿ ದೊರೆತಿದ್ದರೂ ಕೆಲವು ಕಡೆ ಸಂಪೂರ್ಣವಾಗಿ ಚಿತ್ರಮಂದಿರಗಳು ತೆರೆದಿರಲಿಲ್ಲ. ಅದಕ್ಕೆ ಕಾರಣ ಚಿತ್ರ ಪ್ರದರ್ಶಕರ ಮಹಾ ಮಂಡಲದ ಅಧ್ಯಕ್ಷ ಓದು ಗೌಡ ಅವರ ನಿಲುವು.

ಓದು ಗೌಡಗೆ ಮನವಿ ಮಾಡಿದ ನಿರ್ಮಾಪಕರು

ನಿರ್ಮಾಪಕರು ಚಿತ್ರಮಂದಿರಗಳಲ್ಲಿ ತಮ್ಮ, ಸಿನಿಮಾವನ್ನು ಪ್ರದರ್ಶಿಸಬೇಕಾದರೆ ಬಾಡಿಗೆ ಬಿಟ್ಟು ಪರ್ಸೆಂಟೇಜ್​​​​ ಲೆಕ್ಕ ಕೊಡಬೇಕು ಎನ್ನುವುದು ಮಹಾಮಂಡಲ ಅಧ್ಯಕ್ಷ ಓದುಗೌಡ ಅವರ ಬೇಡಿಕೆಯಾಗಿದೆ. ಇದನ್ನು ಚಿತ್ರಮಂದಿರಗಳ ಮಾಲೀಕರು ಕೂಡಾ ಬೆಂಬಲಿಸಿದ್ದಾರೆ. ನಿರ್ಮಾಪಕರು ಇದಕ್ಕೆ ಒಪ್ಪುವವರೆಗೂ ಚಿತ್ರಮಂದಿರವನ್ನು ತೆರೆಯಲು ಬಿಡುವುದಿಲ್ಲ ಎಂದು ಓದುಗೌಡ ಪಣ ತೊಟ್ಟಿದ್ದಾರೆ.ಇದು ಈಗ ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಪಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಈ ವಿಚಾರ ತಿಳಿದಿರುವ ಭಜರಂಗಿ 2, ಫ್ಯಾಂಟಮ್, ಯುವರತ್ನ, ಪೊಗರು, ಕೋಟಿಗೊಬ್ಬ 3 ನಂತ ಬಿಗ್​​ ಬಜೆಟ್​​​​​​​​​​​​​​​ ಸಿನಿಮಾಗಳ ನಿರ್ಮಾಪಕರಾದ ಜಯಣ್ಣ, ಸೂರಪ್ಪ ಬಾಬು, ಜಾಕ್ ಮಂಜು, ಕೆ.ಪಿ. ಶ್ರೀಕಾಂತ್, ಪುಷ್ಕರ್ ಮಲ್ಲಿಕಾರ್ಜುನ್, ಸುಪ್ರೀತ್, ಬಿ.ಕೆ. ಗಂಗಾಧರ್ ಸೇರಿದಂತೆ ಕೆಲ ಬಿಗ್ ಬಜೆಟ್ ನಿರ್ಮಾಪಕರು 'ಪೊಗರು' ಸಿನಿಮಾ ರಿಲೀಸ್​​​​​​​​​​​ ಪ್ರೆಸ್​​​ಮೀಟ್​​​ನಲ್ಲಿ ಓದುಗೌಡ ಅವರಿಗೆ ಮನವಿಯೊಂದನ್ನು ಮಾಡಿದ್ದಾರೆ.

ಇದನ್ನೂ ಓದಿ: ಸೋನು ಸೂದ್ ವಿರುದ್ಧ ಬಿಎಂಸಿ ದೂರು: ನಟನ ಅರ್ಜಿ ವಜಾ ಮಾಡಿದ ಬಾಂಬೆ ಹೈಕೋರ್ಟ್

ಚಿತ್ರ ಪ್ರದರ್ಶಕರ ಮಹಾ ಮಂಡಲದ ಅಧ್ಯಕ್ಷ ಓದುಗೌಡ ಅವರ ನಿರ್ಧಾರ ಸರಿಯಿಲ್ಲ. ದಯವಿಟ್ಟು ಕೊರೊನಾ ಸಂದರ್ಭದಲ್ಲಿ ನಿರ್ಮಾಪಕರ ಕಷ್ಟವನ್ನು ಅರ್ಥ ಮಾಡಿಕೊಳ್ಳಿ. ಈ ಸಮಯಲ್ಲಿ ಚಿತ್ರಮಂದಿರಗಳ ಪರ್ಸೆಂಟೇಜ್​​​​​​​​​​​ ಹೆಚ್ಚಿಸೋದು ಸರಿಯಿಲ್ಲ ಎಂದು 'ಕೋಟಿಗೊಬ್ಬ-3' ಚಿತ್ರದ ಸೂರಪ್ಪ ಬಾಬು ಮನವಿ ಮಾಡಿದ್ರು. ಖ್ಯಾತ ನಿರ್ಮಾಪಕ ಹಾಗೂ ವಿತರಕ ಜಯಣ್ಣ ಮಾತನಾಡಿ ಓದುಗೌಡ ನಿರ್ಧಾರ ಸರಿಯಿಲ್ಲ, ಚಿತ್ರಮಂದಿರಗಳ ಪರ್ಸೆಂಟೇಜ್​​​​ ಮಾಡಬೇಕಾದ್ರೆ ಒಂದು ಕಮಿಟಿ ಮಾಡಲಿ, ಅಥವಾ ಈ ವರ್ಷ ಮಾಡುವುದು ಬೇಡ. ಚಿತ್ರರಂಗ ಈಗ ತಾನೇ ಚೇತರಿಸಿಕೊಳ್ಳುತ್ತಿದೆ. ಮುಂದಿನ ವರ್ಷದಿಂದ, ಚಿತ್ರಮಂದಿರಗಳಲ್ಲಿ ಪರ್ಸೆಂಟೇಜ್​​​​​​​​ ಪದ್ಧತಿ ಮಾಡಲಿ ಎಂದು ಮನವಿ ಮಾಡಿದರು. ನಿರ್ಮಾಪಕರ ಮನವಿಗೆ ಓದುಗೌಡ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.