ETV Bharat / sitara

ಮೊದಲು ನಿರ್ಮಾಪಕರು ಕನಸು ಕಾಣಬೇಕು, ಆಮೇಲೆ ಕಲಾವಿದರು: ದರ್ಶನ್​​ - ಮದಕರಿ ನಾಯಕ

ಕುರುಕ್ಷೇತ್ರ ಸಿನಿಮಾದ ಮಾಧ್ಯಮಗೋಷ್ಠಿ ನಂತರ ಕೆಲವು ಪತ್ರಕರ್ತರ ಜೊತೆ ಮಾತನಾಡಿದ ದರ್ಶನ್, ಮೊದಲು ಚಿತ್ರ ಮಾಡುವುದಕ್ಕೆ ನಾಲ್ಕು ಗುಂಡಿಗೆ ಬೇಕು. ಅದಕ್ಕೂ ಮೊದಲು ನಿರ್ಮಾಪಕ ಅಂತಹ ಸಿನಿಮಾಗಳ ಕನಸು ಕಾಣಬೇಕು. ಆಮೇಲೆ ಕಲಾವಿದರು ಎಂದು ಹೇಳಿದ್ದಾರೆ.

ದರ್ಶನ್
author img

By

Published : Aug 5, 2019, 9:01 AM IST

ಕನ್ನಡ ಚಿತ್ರರಂಗದ ಚರಿತ್ರೆಯ ಪುಟಗಳಲ್ಲಿ ಮುನಿರತ್ನ ನಿರ್ದೆಶನದ ಕುರುಕ್ಷೇತ್ರ ಸಿನಿಮಾ ಸೇರಿಕೊಂಡಿದೆ. ಈಗ ಮತ್ತೊಂದು ‘ಮದಕರಿ ನಾಯಕ’ ಎಂಬ ಚಾರಿತ್ರಿಕ ಹಿನ್ನೆಲೆಯುಳ್ಳ ಸಿನಿಮಾದಲ್ಲಿ ಕೂಡ ಡಿಬಾಸ್ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹದೊಂದು ಯಾವುದಾದರೂ ಪಾತ್ರ ಮಾಡುವ ಅಭಿಲಾಷೆ ನಿಮ್ಮ ಮನಸಿನಲ್ಲಿದೆಯೇ ಎಂದು ಕೇಳಿದಕ್ಕೆ, ಇಂತಹ ಚಿತ್ರ ಮಾಡುವುದಕ್ಕೆ ನಾಲ್ಕು ಗುಂಡಿಗೆ ಬೇಕು. ಅದಕ್ಕೆ ಮೊದಲು ನಿರ್ಮಾಪಕ ಅಂತಹ ಸಿನಿಮಾಗಳ ಕನಸು ಕಾಣಬೇಕು ಎಂದು ದರ್ಶನ್ ಹೇಳಿದ್ದಾರೆ.

ಕುರುಕ್ಷೇತ್ರ ಸಿನಿಮಾದ ಮಾಧ್ಯಮಗೋಷ್ಠಿ ನಂತರ ಕೆಲವು ಪತ್ರಕರ್ತರ ಜೊತೆ ಮಾತನಾಡಿದ ದರ್ಶನ್​​, ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನ ಪಾತ್ರ ಮಾಡಲು ಒಪ್ಪಿದಾಗ ನಾನು ಸಾಕಷ್ಟು ಪೌರಾಣಿಕ ಸಿನಿಮಾಗಳನ್ನು ನೋಡಿದೆ. ನಾನಿರುವ ಮೈಸೂರಿನಲ್ಲಿ ಪೌರಾಣಿಕ ನಾಟಕಗಳನ್ನು ನಾನು ನೋಡಿಲ್ಲ. ಭಕ್ತ ಪ್ರಹ್ಲಾದ ಅಲ್ಲದೆ ಎನ್​​​ಟಿ ರಾಮರಾವ್ ಅವರ ಅಭಿನಯದ ಸಿನಿಮಾಗಳನ್ನು ನೋಡಿದೆ. ಬೆಳಗ್ಗೆ ಕೆಲ ಹೊತ್ತು ವ್ಯಾಯಾಮ ನಂತರ ನನ್ನ ಸಂಭಾಷಣೆ ಬಗ್ಗೆ ಗಮನ, ಚಿತ್ರೀಕರಣ ಸಮಯದಲ್ಲಿ ನಾನು ಮೊದಲು ನೋಡುತ್ತಾ ಇದ್ದದ್ದು ಹಿರಿಯ ನಟ ಶ್ರೀನಿವಾಸಮೂರ್ತಿ ಅವರನ್ನು. ಅವರು ಒಂದು ಸೂಚನೆ ಕೊಡುತ್ತಾ ಇದ್ದರು. ಆಮೇಲೆ ಕೆಲವು ಗಂಟೆ ಮುಂದಿನ ದಿನದ ಸಂಭಾಷಣೆ ಬಗ್ಗೆ ಗಮನ, ನಂತರ ನಿದ್ರೆಗೆ ಜಾರುತ್ತಿದ್ದೆ. ಮತ್ತೆ 4.30 ಗಂಟೆಗೆ ಎದ್ದು ಪುನಃ ದಿನಚರಿ ಪ್ರಾರಂಭ. ದರ್ಶನ್ ಪ್ರಕಾರ ದುರ್ಯೋಧನ ಒಬ್ಬ ನಿಜವಾದ ನಾಯಕ. ಅವನ ಹುಟ್ಟು ಮತ್ತು ಸಾವು ಅಹಂಕಾರದಲ್ಲಿ ಅಷ್ಟೇ ಎಂದರು.

ಕುರುಕ್ಷೇತ್ರ ಡಬ್ಬಿಂಗ್ ಸಮಯದಲ್ಲಿ ನನಗೆ ಕಷ್ಟ ಆಗುತ್ತಾ ಇತ್ತು. ಚಿತ್ರೀಕರಣದಲ್ಲಿ ಹೇಳಿದ್ದನ್ನು ಬಹಳ ದಿವಸಗಳ ನಂತರ ಹೇಳಬೇಕಾಗಿತ್ತು. ಆಗ ಕೆಲವು ಮರೆತು ಹೋಗುತ್ತಾ ಇತ್ತು. 28 ದಿವಸ ಡಬ್ಬಿಂಗ್ ಮಾಡಬೇಕಾಯಿತು. ಕುರುಕ್ಷೇತ್ರ ಚಿತ್ರೀಕರಣ ಕೆಲವು ಭಾಗ ಆಗಿನ ಕಾಲದಲ್ಲಿ ಎನ್.ಟಿ. ರಾಮರಾವ್ ಅಭಿನಯ ಮಾಡುತ್ತಾ ಇದ್ದ ಸೆಟ್​​ನಲ್ಲಿ ಮಾಡಲಾಗಿದೆ. ಆ ಪೌರಾಣಿಕ ಸೆಟ್​​​ಅನ್ನು ಹೈದರಾಬಾದ್​​ನಲ್ಲಿ ಹಾಗೆಯೇ ಉಳಿಸಿಕೊಂಡಿದ್ದಾರೆ. ಇದು ಎರಡು ವರ್ಷಗಳ ಪರಿಶ್ರಮ. 70ರ ದಶಕದ ಕಲಾವಿದರಿಂದ 2010ರ ವರೆಗಿನ ನಾಲ್ಕು ದಶಕಗಳ ಕಲಾವಿದರು ಇಲ್ಲಿ ಕಾಣುತ್ತಾರೆ ಎಂಬುದು ದರ್ಶನ್ ಅವರಿಗೆ ಹೆಮ್ಮೆಯ ವಿಚಾರವಾಗಿದೆ. ಈ ಸಿನಿಮಾ 2 ಡಿ ಹಾಗೂ 3 ಡಿನಲ್ಲಿ ಮೂಡಿಬಂದಿದ್ದು, ಇಂದಿನ ಪೀಳಿಗೆ ನೋಡಲೇಬೇಕಾದ ಸಿನಿಮಾವೆಂದು ದರ್ಶನ್ ಹೇಳುತ್ತಾರೆ.

ನಿರ್ಮಾಪಕರು ಕನಸು ಕಾಣಬೇಕು ಆಮೇಲೆ ಕಲಾವಿದರು – ಡಿ ಬಾಸ್ ದರ್ಶನ್

ಕನ್ನಡ ಸಿನಿಮಾ ರಂಗದ ಚರಿತ್ರೆಯ ಪುಟಗಳಲ್ಲಿ ಮುನಿರತ್ನ ಕುರುಕ್ಷೇತ್ರ ತಯಾರಿಯಿಂದ ಸೇರಿಕೊಂಡಿದೆ. ಈಗ ಮತ್ತೊಂದು ಮದಕರಿ ನಾಯಕಿ ಚಾರಿತ್ರಿಕೆ ಹಿನ್ನಲೆ ಸಿನಿಮಾ ಕೂಡ ಡಿ ಬಾಸ್ ದರ್ಶನ್ ನಟಿಸುತ್ತಿದ್ದಾರೆ ಎಂಬುದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಯಾವುದಾದರೂ ಪಾತ್ರ ನಿಮ್ಮ ಮನಸಿನಲ್ಲಿ ಇದೆಯೇ ಎಂದು ಕೇಳಿ ನೋಡಿ....

ಡಿ ಬಾಸ್ ಟಕ್ ಅಂತ ಹೇಳೋದು ಇಂತಹ ಚಿತ್ರ ಮಾಡುವುದಕ್ಕೆ ನಾಲ್ಕು ಗುಂಡಿಗೆ ಬೇಕು. ಅದಕ್ಕೆ ಮೊದಲು ನಿರ್ಮಾಪಕ ಅಂತಹ ಸಿನಿಮಾಗಳ ಕನಸು ಕಾಣಬೇಕು ಅಂತ ಹೇಳುತ್ತಾರೆ ದರ್ಶನ್.

ಮುನಿರತ್ನ ಕುರುಕ್ಷೇತ್ರ ಮಾಧ್ಯಮ ಘೋಷ್ಟಿ ನಂತರ ಮಾತಿಗೆ ಕೆಲವು ಪತ್ರಕರ್ತರ ಜೊತೆ ಕುಳಿತಾಗ ದರ್ಶನ್ ಅನೇಕ ವಿಚಾರಗಳ ಬಗ್ಗೆ ಪ್ರಸ್ಥಾಪಿಸಿದರು. ಅದರಲ್ಲಿ ಮುಖ್ಯವಾಗಿ ಮೊದಲ ಪೌರಾಣಿಕ ನಂತರ ನೀವು ರಾವಣ ಸಿನಿಮಾ ಮಾಡುವುದು ಎಂದು ಹೇಳಲಾಗುತ್ತಿದೆ ಎಂದಿದ್ದಕೆ ಅಂತಹ ಚಿತ್ರಗಳಿಗೆ ನಿರ್ಮಾಪಕರು ಮೊದಲು ಕನಸು ಕಂಡರೆ ಸಾಧ್ಯವಾಗುತ್ತೆ ಎಂದರು.

ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನ ಪಾತ್ರ ಒಪ್ಪಿದಾಗ ನಾನು ಸಾಕಷ್ಟು ಪೌರಾಣಿಕ ಸಿನಿಮಗಳನ್ನು ನೋಡಿದೆ, ನಾನಿರುವ ಮೈಸೂರಿನಲ್ಲಿ ಪೌರಾಣಿಕ ನಾಟಕಗಳು ನನ್ನ ಬಾಲ್ಯದಲ್ಲಿ ನಾನು ನೋಡಿಲ್ಲ. ಭಕ್ತ ಪ್ರಹಲ್ಲಾದ ಅಲ್ಲದೆ ಎನ್ ಟಿ ರಾಮ ರಾವ್ ಅವರ ಅಭಿನಯದ ಸಿನಿಮಾಗಳನ್ನು ನೋಡಿದೆ. ಬೆಳಗ್ಗೆ ಕೆಲ ಹೊತ್ತು ವ್ಯಾಯಾಮ ನಂತರ ನನ್ನ ಸಂಭಾಷಣೆ ಬಗ್ಗೆ ಗಮನ, ಚಿತ್ರೀಕರಣ ಸಮಯದಲ್ಲಿ ನಾನು ಮೊದಲು ನೋಡುತ್ತಾ ಇದ್ದದ್ದು ಹಿರಿಯ ನಟ ಶ್ರೀನಿವಾಸಮೂರ್ತಿ ಅವರನ್ನು. ಅವರು ಒಂದು ಸೂಚನೆ ಕೊಡುತ್ತಾ ಇದ್ದರು. ಅಮೇಲೆಯೇ ನಾನು ಮುಂದುವರೆಸುತ್ತಾ ಇದ್ದೇ. ಸಂಜೆ ಆಯಿತು ಅಂದರೆ ಮಾತೆ ವ್ಯಾಯಾಮ. ಆಮೇಲೆ ಕೆಲವು ಘಂಟೆಗಳು ಮುಂದಿನ ದಿನದ ಸಂಭಾಷಣೆ ಬಗ್ಗೆ ಗಮನ ನಂತರ ನಿದ್ರೆಗೆ ಜಾರುತ್ತಾ ಇದ್ದೇ, ಮತ್ತೆ 4.30 ಘಂಟೆಗೆ ಎದ್ದು ಪುನಹ ದಿನಚರಿ ಪ್ರಾರಂಭ. ದರ್ಶನ್ ಪ್ರಕಾರ ದುರ್ಯೋಧನ ನಿಜವಾದ ನಾಯಕ. ಸ್ವರ್ಗಕ್ಕೂ ಸಹ ಆತನೇ ಹೋಗುವುದು. ಅವನ ಹುಟ್ಟು ಮತ್ತು ಸಾವು ಅಹಂಕಾರದಲ್ಲಿ ಅಷ್ಟೇ.

ಕುರುಕ್ಷೇತ್ರ ಡಬ್ಬಿಂಗ್ ಸಮಯದಲ್ಲಿ ನನಗೆ ಕಷ್ಟ ಆಗುತ್ತಾ ಇತ್ತು. ಚಿತ್ರೀಕರಣದಲ್ಲಿ ಹೇಳಿದ್ದನ್ನು ಬಹಳ ದಿವಸಗಳ ನಂತರ ಹೇಳಬೇಕಾಗಿತ್ತು. ಆವಾಗ ಕೆಲವು ಮರೆತು ಹೋಗುತ್ತಾ ಇತ್ತು ಸಹ. 28 ದಿವಸ ಡಬ್ಬಿಂಗ್ ಮಾಡಬೇಕಾಯಿತು.

ಕುರುಕ್ಷೇತ್ರ ಚಿತ್ರೀಕರಣ ಕೆಲವು ಭಾಗ ಆಗಿನ ಕಾಲದಲ್ಲಿ ಎನ್ ಟಿ ರಾಮ ರಾವ್ ಅಭಿನಯ ಮಾಡುತ್ತಾ ಇದ್ದ ಸೆಟ್ ಅಲ್ಲಿ ಮಾಡಲಾಗಿದೆ. ಆ ಪೌರಾಣಿಕ ಸೆಟ್ ಅನ್ನು ಹಾಗೆ ಉಳಿಸಿಕೊಂಡಿದ್ದಾರೆ ಹೈದರಾಬಾದಿನಲ್ಲಿ. ಇದು ಎರಡು ವರ್ಷಗಳ ಪರಿಶ್ರಮ. 70 ರ ದಶಕದ ಕಲಾವಿದರಿಂದ 2010 ರ ವರೆಗಿನ ನಾಲ್ಕು ದಶಕಗಳ ಕಲಾವಿದರು ಇಲ್ಲಿ ಕಾಣುತ್ತಾರೆ ಎಂಬುದು ದರ್ಶನ್ ಅವರಿಗೆ ಹೆಮ್ಮೆಯ ವಿಚಾರ.

ಮುನಿರತ್ನ ನಾಯ್ಡು ಅವರ ಅನಾಥರು ಸಿನಿಮಾ ನಟಿ ರಂಭಾ ಅವರ ಹಾಡಿನ ಚಿತ್ರೀಕರಣ ಸಮಯದಲ್ಲಿ ಮಾತನಾಡುತ್ತಾ ಈ ಸಿನಿಮಾ ಬಗ್ಗೆ ಹೇಳಿದ್ದರು. ಅದು ಸಾಧ್ಯವಾ ಎಂದು ಅಂದು ಅಂದುಕೊಂಡಿದ್ದೆ. ಈಗ ಸಂಪೂರ್ಣವಾಗಿ ಅವರ ಕನಸು ನನಸಾಗಿದೆ. ಈ ಚಿತ್ರದ ಮೊದಲ ಹೀರೋ ಅಂದರೆ ಮುನಿರತ್ನ ಅವರೇ ಅನ್ನುತ್ತಾರೆ ದರ್ಶನ್.

2 ಡಿ ಹಾಗೂ 3 ಡಿ ಅಲ್ಲಿ ಮೂಡಿಬಂದಿರುವ ಚಿತ್ರ ಕುರುಕ್ಷೇತ್ರ ಇಂದಿನ ಪೀಳಿಗೆ ನೋಡಲೇಬೇಕಾದ ಸಿನಿಮಾ. ಇದು ಮನೆ ಮಂದಿಯ ಸಿನಿಮಾ ಸಹ ಎಂದು ಹೇಳುತ್ತಾರೆ ದರ್ಶನ್.

ಚಿತ್ರೀಕರಣ ಸಮಯದಲ್ಲಿ ಡಾ ಅಂಬರೀಶ್ ಅವರು ಬಹಳ ಕಷ್ಟ ಪಟ್ಟು ಮೇಕಪ್ ಹಾಕಿದ ತಕ್ಷಣ ಎಲ್ಲವನು ಮರೆತು ಅಭಿನಯಕ್ಕೆ ಸಜ್ಜಾಗುತ್ತ ಇದ್ದರು. ಆಗಲೇ ದರ್ಶನ್ ಅವರಿಗೆ ಅವರ ತಂದೆ ತೂಗುದೀಪ ಶ್ರೀನಿವಾಸ್ ಆಗಲಿಕೆಗೂ 15 ದಿವಸ ಮುಂಚೆ ಮುಖ ಎಲ್ಲ ಕಡಿತಾ ಇದೆ ಮೇಕಪ್ ಹಾಕದೆ ಎಂದು ಹೇಳುತ್ತಾ ಇದ್ದದ್ದು ಕ್ಷಣ ಜ್ಞಾಪಕ ಅಂಬಿ ಅಪ್ಪಾಜಿ ಮೇಕಪ್ ಹಾಕಿ ನಿಂತಾಗ ಮತ್ತೆ ನೆನಪಿಗೆ ಬಂದಿದ್ದನ್ನು ದರ್ಶನ್ ಸ್ಮರಿಸಿಕೊಂಡರು. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.