ETV Bharat / sitara

ನಮಗೆ ಫ್ಲೈಟ್ ಹತ್ತಲು ಬಿಡದೇ ತೊಂದರೆ ಮಾಡಿದರು: ಪೋಲೆಂಡ್ ಘಟನೆ ವಿವರಿಸಿದ ಸೂರಪ್ಪ ಬಾಬು - ಪೋಲೆಂಡ್ ಘಟನೆ ಬಗ್ಗೆ ನಿರ್ಮಾಪಕ ಸೂರಪ್ಪಬಾಬು ವಿವರಣೆ

ಕೋಟಿಗೊಬ್ಬ 3 ಚಿತ್ರಕ್ಕಾಗಿ ಪೋಲೆಂಡ್​ನಲ್ಲಿ ಲೊಕೇಷನ್ ತೋರಿಸಿದ ಕಾರಣ ಮುಂಬೈ ಮೂಲದ ಏಜೆನ್ಸಿಗೆ ಮೂರು ಕೋಟಿ ರೂಪಾಯಿ ನೀಡಿದರೂ ಹೆಚ್ಚಿನ ಹಣಕ್ಕೆ ಅವರು ಬ್ಲಾಕ್​ ಮೇಲ್ ಮಾಡಿದರು. ಅಲ್ಲದೇ ನಮಗೆ ಫ್ಲೈಟ್ ಹತ್ತಲು ಬಿಡದೆ ಸತಾಯಿಸಿದರು ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.

ಸೂರಪ್ಪ ಬಾಬು
author img

By

Published : Oct 16, 2019, 11:14 PM IST

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಶೂಟಿಂಗ್​​​ಗಾಗಿ ಪೋಲೆಂಡ್​​ಗೆ ತೆರಳಿದ್ದ ಚಿತ್ರತಂಡಕ್ಕೆ ಅಲ್ಲಿ ಒಂದು ಸಮಸ್ಯೆ ಎದುರಾಗಿತ್ತು. ಮುಂಬೈ ಮೂಲದ ಏಜೆನ್ಸಿಯೊಂದು ನಿರ್ಮಾಪಕ ಸೂರಪ್ಪ ಬಾಬು ಬಳಿ ಮೊದಲೇ ಮಾತನಾಡಿದ್ದ ಹಣಕ್ಕಿಂತ ಹೆಚ್ಚು ಹಣಕ್ಕೆ ಡಿಮ್ಯಾಂಡ್ ಮಾಡಿತ್ತು ಎನ್ನಲಾಗಿದೆ.

ಪೋಲೆಂಡ್ ಘಟನೆ ವಿವರಿಸಿದ ಸೂರಪ್ಪ ಬಾಬು

ಶೂಟಿಂಗ್ ಮುಗಿಸಿ ಇಡೀ ಚಿತ್ರತಂಡ ಬೆಂಗಳೂರಿಗೆ ವಾಪಸಾಗಿದ್ದರೂ ನಿರ್ಮಾಪಕ ಸೂರಪ್ಪ ಬಾಬು ಅಕೌಂಟೆಂಟ್​​​ ಏಜೆನ್ಸಿಗೆ ಸೇರಿದ ಸಂಜಯ್ ಪಾಲ್ ಎಂಬಾತ ಅಲ್ಲೇ ಇರಿಸಿಕೊಂಡಿದ್ದರು. ಅಲ್ಲದೇ ಶೂಟಿಂಗ್ ಮಾಡಿದ ಹಾರ್ಡ್ ಡಿಸ್ಕ್​​ ಕೂಡಾ ವಾಪಸ್ ಕೊಡದೇ ಸತಾಯಿಸುತ್ತಿದ್ದರು ಎನ್ನಲಾಗಿತ್ತು. ಈ ಬಗ್ಗೆ ಇಂದು ನಿರ್ಮಾಪಕ ಸೂರಪ್ಪ ಬಾಬು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 5 ರವರೆಗೆ ವಿದೇಶದಲ್ಲಿ 10 ದಿನಗಳ ಕಾಲ ಶೂಟಿಂಗ್ ಪ್ಲ್ಯಾನ್​ ಮಾಡಿದ್ದೆವು. ಶೂಟಿಂಗ್ ಮುಗಿಸಿ ಬರುವ ವೇಳೆ ಮುಂಬೈ ಮೂಲದ ಏಜೆನ್ಸಿಯಿಂದ ತೊಂದರೆ ಶುರುವಾಯ್ತು. ಅವರು ಲೊಕೇಷನ್ ತೋರಿಸಿದ್ದರಿಂದ ನನ್ನ ಅಕೌಂಟ್​​​ನಿಂದ 3 ಕೋಟಿ ರೂಪಾಯಿ ಟ್ರಾನ್ಸ್​​ಫರ್ ಮಾಡಿದರೂ ನಂತರ ಮತ್ತೆ 50 ಲಕ್ಷ ರೂಪಾಯಿಗೆ ಸತಾಯಿಸಿದರು.

ಇದಕ್ಕೆ ಸಂಬಂಧಿಸಿದಂತೆ ಶೂಟಿಂಗ್ ಮುಗಿಸಿ ಬರುವಾಗ ನಮಗೆ ಫ್ಲೈಟ್ ಹತ್ತಲು ಬಹಳ ತೊಂದರೆ ಮಾಡಿದರು. ಈ ತೊಂದರೆ ಬಳಿಕ ಸಂಜಯ್ ಪಾಲ್ ಹಿನ್ನೆಲೆ ಕೆದಕಿದಾಗ ಅವನೊಬ್ಬ ಮುಂಬೈ ಮೂಲದ ಮೆಡಿಕಲ್ ಮಾಫಿಯಾ ಎಂಬ ವಿಷಯ ಗೊತ್ತಾಯ್ತು. ಇಲ್ಲಿ ಬಂದು ಬೆಂಗಳೂರಿನ ಕಮಿಷನರ್​​​​​​​​​​​​​ಗೆ ದೂರು ನೀಡಿದ ನಂತರ ಎಲ್ಲಾ ಸುಖಾಂತ್ಯ ಕಂಡಿದೆ. ಮುಂದೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ನಿರ್ಮಾಪಕ ಸೂರಪ್ಪ ಬಾಬು ಎಲ್ಲಾ ಘಟನೆಯನ್ನು ವಿವರಿಸಿದ್ದಾರೆ.

Intro:ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರತಂಡಕ್ಕೆ, ಮುಂಬೈ ಮೂಲದ ಏಜೆನ್ಸಿಯಿಂದ ಎದುರಾದ ಸಮಸ್ಯೆ ಏನು? ಪೋಲೆಂಡ್ ನಲ್ಲಿ ಚಿತ್ರೀಕರಣ ಹೋಗಿದ್ದ, ಕೋಟಿಗೊಬ್ಬ 3 ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬುಗೆ , ಮುಂಬೈ ಮೂಲದ ಏಜೆನ್ಸಿ ಮುಖ್ಯಸ್ಥ ಸಂಜಯ್ ಪಾಲ್ ಹಣಕ್ಕಾಗಿ ಬ್ಲಾಕ್‌ ಮೈಲ್ ಮಾಡಿದ್ರಾ? ಸದ್ಯ ನಿರ್ಮಾಪಕ ಸೂರಪ್ಪ ಬಾಬು ಬೆಂಗಳೂರು ಕಮಿಷನರ್ ಮೂಲಕ ಈ ಸಮಸ್ಯೆಯನ್ನ ಬಗೆ ಹರಿಸಿ, ಕೋಟಿಗೊಬ್ಬ 3 ಚಿತ್ರದ ಅಕೌಂಟೆಂಟ್ ಬೆಂಗಳೂರಿಗೆ ವಾಪಸ್ಸು ಆದ್ರಾ? ಈ ಎಲ್ಲಾ ಘಟನೆ ಬಗ್ಗೆ ಸುದೀಪ್ ಹೇಳಿದ್ದೇನು?

Body: ಕೋಟಿಗೊಬ್ಬ 3 ಸಿನಿಮಾ‌ ಎಷ್ಟು ಪರ್ಸೆಂಟ್ ಶೂಟಿಂಗ್ ಮುಗಿದಿದೆ..ಯಾವಾಗ ಈ ಸಿನಿಮಾ ತೆರೆಗೆ ಬರುತ್ತೆ ಹೀಗೆ ಹಲವಾರು ವಿಷ್ಯಗಳ ಬಗ್ಗೆ ನಮ್ಮ‌ ರಿಪೋರ್ಟರ್ ಜೊತೆ ನಿರ್ಮಾಪಕ ಸೂರಪ್ಪ ಬಾಬು ಹಂಚಿಕೊಂಡಿದ್ದಾರೆ..

Conclusion:ಚಿಟ್ ಚಾಟ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.