ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಟಾಲಿವುಡ್ ನಿರ್ಮಾಪಕ ಅನಿಲ್ ಕುಮಾರ್ ಕೊನೇರು ನಿನ್ನೆ ನಿಧನರಾಗಿದ್ದಾರೆ.
ಅನಿಲ್ ಕುಮಾರ್ ನಿಧನದಿಂದ ಟಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ. ತೆಲುಗಿನ ಶ್ರೀರಾಮಚಂದ್ರುಲು, ಒಟ್ಟೇಸಿ ಚೆಪ್ತುನ್ನಾ, ರಾಧಾಗೋಪಾಲಂ, ಅಲ್ಲರಿ ಬುಲ್ಲೋಡು ಸೇರಿ ಸಾಕಷ್ಟು ಹಿಟ್ ಸಿನಿಮಾಗಳನ್ನು ಅನಿಲ್ ನಿರ್ಮಿಸಿದ್ದಾರೆ. ಅನಿಲ್ ಕುಮಾರ್ ಸಿನಿಮಾ ನಿರ್ಮಾಣ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ಮುಂದಿದ್ದು ಸಾಕಷ್ಟು ಬಡಜನರಿಗೆ ಹಣದ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಟಾಲಿವುಡ್ ಸೆಲಬ್ರಿಟಿಗಳು ಅನಿಲ್ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.