ETV Bharat / sitara

ಅಮೆಜಾನ್​​ನಲ್ಲಿ ಪಿಆರ್​ಕೆ ಪ್ರೊಡಕ್ಷನ್ ಚಿತ್ರಗಳ ರಿಲೀಸ್...ಬೇಸರ ವ್ಯಕ್ತಪಡಿಸಿದ ಪ್ರದರ್ಶಕರು

ಸರ್ಕಾರ ಸ್ವಲ್ಪ ಲಾಕ್​​ಡೌನ್​ ಸಡಿಲಿಸಿದ್ದರೂ ಈಗಲೇ ಸಿನಿಮಾ ಚಟುವಟಿಕೆಗಳು ಆರಂಭವಾಗುವ ಮುನ್ಸೂಚನೆ ಕಾಣುತ್ತಿಲ್ಲ. ಆದ್ದರಿಂದ ಕೆಲವೊಂದು ಸಿನಿಮಾಗಳನ್ನು ಒಟಿಟಿ ಪ್ಲಾಟ್​​ಫಾರ್ಮ್​ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಪಿಆರ್​ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯಾರಾದ ಸಿನಿಮಾಗಳು ಕೂಡಾ ಇದೀಗ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗುತ್ತಿವೆ.

author img

By

Published : May 16, 2020, 9:23 PM IST

PRK productions movies
ಪುನೀತ್ ರಾಜ್​​ಕುಮಾರ್

ಸದ್ಯದ ಲಾಕ್​​ಡೌನ್​​​​​​​​ ಸಂದರ್ಭದಲ್ಲಿ ಸಿನಿಮಾ ಚಟುವಟಿಕೆ ಶುರು ಆಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಹಾಗೇನಾದರೂ ಚಿತ್ರೀಕರಣ ಆರಂಭವಾಗಿ, ಚಿತ್ರಮಂದಿರಗಳು ತೆರೆದರೂ ಅನೇಕ ನಿಬಂಧನೆಗಳ ನಡುವೆ ಕೆಲಸ ಮಾಡಬೇಕು.

ಲಾಕ್​​​ಡೌನ್​​ನಿಂದ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್​​​​ಗಳು ದಿನಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುತ್ತಿವೆ. ಈ ಸಮಯದಲ್ಲಿ ಸಿನಿಮಾಗಳು ಒಟಿಟಿ ಪ್ಲಾಟ್​​​ಫಾರ್ಮ್​ನಲ್ಲಿ ಬಿಡುಗಡೆ ಆಗುತ್ತಿರುವುದಕ್ಕೆ ಕೂಡಾ ಆಕ್ಷೇಪಣೆ ವ್ಯಕ್ತವಾಗುತ್ತಿದೆ. ಕಳೆದ ವರ್ಷ ‘ಭಿನ್ನ’ ಸಿನಿಮಾ ಮೊದಲು ಜೀ 5 ವಾಹಿನಿಯಲ್ಲಿ ಪ್ರಸಾರ ಆಗಿತ್ತು. ಅದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿಲ್ಲ. ಈಗ ಪುನೀತ್ ರಾಜ್​​ಕುಮಾರ್ ಅವರ ಪಿಆರ್​ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಹೆಸರಿನಲ್ಲಿ ತಯಾರಾಗಿರುವ ‘ಲಾ’ ಹಾಗೂ ‘ಫ್ರೆಂಚ್ ಬಿರ್ಯಾನಿ’ ಚಿತ್ರಗಳು ಜೂನ್​ 24, ಜುಲೈ 26 ರಂದು ಅಮೆಜಾನ್​ ಪ್ರೈಂ ನಲ್ಲಿ ಬಿಡುಗಡೆಯಾಗಲು ದಿನಾಂಕ ನಿಗದಿಯಾಗಿದೆ.

ಅಮೆಜಾನ್​ ಪ್ರೈಮ್​​​ನಲ್ಲಿ ಈಗಾಗಲೇ ಪುನೀತ್ ರಾಜಕುಮಾರ್ ನಿರ್ಮಾಣದ 'ಕವಲುದಾರಿ' ಹಾಗೂ 'ಮಾಯಾಬಜಾರ್' ಚಿತ್ರಗಳು ಪ್ರಸಾರವಾಗಿವೆ. ಆದ್ದರಿಂದ ಮುಂದಿನ ಎರಡು ಸಿನಿಮಾಗಳಿಗೆ ಸಂಬಂಧಿಸಿದಂತೆ ಅಮೆಜಾನ್ ಪ್ರೈಮ್​​ನಲ್ಲೇ ಮಾತುಕತೆ ನಡೆಸಲಾಗಿದೆ. ಪುನೀತ್ ನಿರ್ಮಾಣದ ಸಿನಿಮಾಗಳು ಥಿಯೇಟರ್​​​​ನಲ್ಲಿ ಬಿಡುಗಡೆಯಾಗುತ್ತಿಲ್ಲ. ಆದರೆ ಅವರ ಅಭಿನಯದ ಸಿನಿಮಾಗಳು ಮಾತ್ರ ಥಿಯೇಟರ್​​​​ನಲ್ಲಿ ಬಿಡುಗಡೆಯಾಗುತ್ತಿವೆ ಎಂಬುದರ ಬಗ್ಗೆ ಗುಸುಗುಸು ಚರ್ಚೆ ಆರಂಭವಾಗಿದೆ.

ಇನ್ನು ಒಟಿಟಿ ಪ್ಲಾಟ್​​​​​ಫಾರ್ಮ್​ನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ಪ್ರಶಸ್ತಿಗೆ ಪರಿಗಣಿಸುವ ಅಗತ್ಯವಿಲ್ಲ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಮತ್ತೆ ಇದಕ್ಕೆ ವಿರುದ್ಧವಾಗಿ ಸಾಕಷ್ಟು ಕಲಾತ್ಮಕ ಸಿನಿಮಾಗಳು ಥಿಯೇಟರ್​​​ನಲ್ಲಿ ಬಿಡುಗಡೆಯಾಗದೆ ನೇರವಾಗಿ ಪ್ರಶಸ್ತಿ ಪಡೆಯಲು ಪೈಪೋಟಿ ನಡೆಸುತ್ತಿರುವುದರಿಂದ ಓಟಿಟಿ ಪ್ಲಾಟ್​​​​ಫಾರ್ಮ್​ಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳನ್ನು ಕೂಡಾ ಪ್ರಶಸ್ತಿಗೆ ಪರಿಗಣಿಸಬೇಕು ಎನ್ನಲಾಗುತ್ತಿದೆ.

ಅದೇನೆ ಇರಲಿ ಇದೀಗ ಅಮೆಜಾನ್​ ಪ್ರೈಮ್​​ನಲ್ಲಿ ಪ್ರಸಾರವಾಗಲಿರುವ ಪಿಆರ್​ಕೆ ಪ್ರೊಡಕ್ಷನ್​ ಸಿನಿಮಾಗಳು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇದರಿಂದ ಪ್ರದರ್ಶಕ ವಲಯ ಕೂಡಾ ಬೇಸರ ವ್ಯಕ್ತಪಡಿಸಿದೆ. ಆದರೆ ಕಾನೂನಿನ ಪ್ರಕಾರ ಒಬ್ಬ ನಿರ್ಮಾಪಕ ಸಿನಿಮಾಗಾಗಿ ತಾನು ಹಾಕಿದ ಬಂಡವಾಳವನ್ನು ಎಲ್ಲಿ ಬೇಕಾದರೂ ವಾಪಸ್ ಪಡೆಯಬಹುದು ಎನ್ನಲಾಗಿದೆ.

'ಲಾ' ಚಿತ್ರದ ಮೂಲಕ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಸಿನಿಮಾಗೆ ಎಂಟ್ರಿ ನೀಡಿದ್ದಾರೆ. ಸಿರಿ ಪ್ರಹ್ಲಾದ್​​​​, ಮುಖ್ಯಮಂತ್ರಿ ಚಂದ್ರು ಹಾಗೂ ಇತರರು ಅಭಿನಯಿಸಿರುವ ಚಿತ್ರವನ್ನು ರಘು ಸಮರ್ಥ ನಿರ್ದೇಶಿಸಿದ್ದಾರೆ. ಜೂನ್ 26 ರಂದು ಅಮೆಜಾನ್ ಪ್ರೈಮ್​​​ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ನಂತರ ಜುಲೈ 24 ರಂದು ಪನ್ನಗಾಭರಣ ನಿರ್ದೇಶನದ 'ಫ್ರೆಂಚ್ ಬಿರ್ಯಾನಿ' ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ದಾನಿಶ್ ಸೇಠ್​, ಸಾಲಾ ಯೂಸುಫ್ ಹಾಗೂ ಇನ್ನಿತರರು ನಟಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.