ಹೂವಿನ ಬೆಡಗಿ ನಟಿ ಪ್ರಿಯಾಂಕಾ ಉಪೇಂದ್ರ ಮದುವೆಯಾಗಿ ಮಕ್ಕಳಾದರೂ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರೋ ಪರಿ ಅದ್ಭುತ. ದೇವಕಿ ಚಿತ್ರದಲ್ಲಿ ನಟಿಸಿದ್ದ ಪ್ರಿಯಾಂಕಾ ಈಗ 'ಉಗ್ರವತಾರ' ತಾಳಲು ರೆಡಿಯಾಗಿದ್ದಾರೆ.
ಹೌದು 2018 ರಲ್ಲಿ ರಿಲೀಸ್ ಆಗಿದ್ದ ಸೆಕೆಂಡ್ ಆಫ್ ಚಿತ್ರದಲ್ಲಿ ಪ್ರಿಯಾಂಕಾ ಮಹಿಳಾ ಪೊಲೀಸ್ ಪಾತ್ರದಲ್ಲಿ ಗಮನಸೆಳೆದಿದ್ರು. ಈಗ ಮತ್ತೆ ದೇವಕಿ ಖಡಕ್ ರಫ್ ಅಂಡ್ ಟಫ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಲು ರೆಡಿಯಾಗುತ್ತಿದ್ದಾರೆ.
ಪ್ರಿಯಾಂಕಾ ಉಪೇಂದ್ರ "ಉಗ್ರವತಾರ" ಎಂಬ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಅಲ್ಲದೆ ಚಿತ್ರದ ಪಾತ್ರಕ್ಕಾಗಿ ಸಖತ್ ವರ್ಕ್ ಔಟ್ ಮಾಡ್ತಿರುವ ಪ್ರಿಯಾಂಕಾ ಜಿಮ್ನಲ್ಲಿ ದೇಹ ಕರಗಿಸ್ತಿದ್ದಾರೆ.
ಪೊಲೀಸ್ಅಧಿಕಾರಿ ಪಾತ್ರ ನಿಭಾಯಿಸುತ್ತಿರುವ ಕಾರಣ ಪ್ರಿಯಾಂಕಾ ಜಿಮ್ ನಲ್ಲಿ ಸಖತ್ ವರ್ಕ್ ಔಟ್ ಮಾಡ್ತಿದ್ದಾರೆ. ಈಗಾಗಲೇ ದೇಹವನ್ನು ದಂಡಿಸಿರುವ ಉಪ್ಪಿ ಮಡದಿ ಸ್ಲಿಮ್ ಆಗಿದ್ದು ಉಗ್ರವತಾರ ಚಿತ್ರದ ಫೋಟೋ ಶೂಟ್ ಕೂಡ ಮಾಡಿಸಿದ್ದಾರಂತೆ.
"ಉಗ್ರವತಾರ " ಚಿತ್ರ ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್ ಜೊತೆ ಸೋಷಿಯಲ್ ಅವೇರ್ನೆಸ್ ನೀಡಲಿದೆಯಂತೆ. ಚಿತ್ರದಲ್ಲಿ ಆಕ್ಷನ್ ಸೀನ್ಗಳಿಗೆ ಹೆಚ್ಚು ಮಹತ್ವ ನೀಡಿದ್ದು, ಪ್ರಿಯಾಂಕಾ ಪಾತ್ರಕ್ಕಾಗಿ ಮಾರ್ಷಲ್ ಆರ್ಟ್ಸ್ ಸಹ ಕಲಿಯುತ್ತಿದ್ದಾರಂತೆ.