ETV Bharat / sitara

ತೂಕ ಹೆಚ್ಚಿಸಿಕೊಂಡ ಪ್ರಿಯಾಂಕಾ ತಿಮ್ಮೇಶ್… ಯಾಕೆ ಗೊತ್ತಾ? - ಬಿಗ್​ಬಾಸ್​ ಪ್ರಿಯಾಂಕಾ ತಿಮ್ಮೇಶ್

ನಟಿ ಪ್ರಿಯಾಂಕಾ ತೂಕ ಹೆಚ್ಚಾಗಿರುವುದು ಸಿನಿಮಾಗಾಗಿ. ಹೊಸ ಚಿತ್ರವನ್ನು ಒಪ್ಪಿಕೊಂಡಿರುವ ಅವರು, ಅದಕ್ಕಾಗಿ ದಪ್ಪ ಕಾಣಿಸಬೇಕಿತ್ತಂತೆ. ಅದೇ ಕಾರಣಕ್ಕೆ ಅವರು ತೂಕ ಹೆಚ್ಚಿಸಿಕೊಂಡಿದ್ದಾರೆ.

priyanka-gains-weight-foe-next-movie
ತೂಕ ಹೆಚ್ಚಿಸಿಕೊಂಡ ಪ್ರಿಯಾಂಕಾ ತಿಮ್ಮೇಶ್ … ಯಾಕೆ ಗೊತ್ತಾ?
author img

By

Published : Sep 30, 2021, 10:16 AM IST

ಪ್ರಿಯಾಂಕಾ ತಿಮ್ಮೇಶ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ಅವರ ತೂಕ ಹೆಚ್ಚಿರುವ ವಿಷಯ ಸಹಜವಾಗಿಯೇ ಗಮನ ಸೆಳೆಯುತ್ತದೆ. ಕೆಲಸ ಇಲ್ಲದೇ ಇರುವುದರಿಂದ ಮತ್ತು ಮನೆಯಲ್ಲೇ ಇರುವುದರಿಂದ ಪ್ರಿಯಾಂಕಾ ತೂಕ ಹೆಚ್ಚಾಗಿದೆಯಾ ಎಂಬ ಪ್ರಶ್ನೆ ಬರಬಹುದು.

ಪ್ರಿಯಾಂಕಾ ತೂಕ ಹೆಚ್ಚಾಗಿರುವುದು ಸಿನಿಮಾಗಾಗಿ. ಹೊಸ ಚಿತ್ರವನ್ನು ಒಪ್ಪಿಕೊಂಡಿರುವ ಅವರು, ಅದಕ್ಕಾಗಿ ದಪ್ಪ ಕಾಣಿಸಬೇಕಿತ್ತಂತೆ. ಅದೇ ಕಾರಣಕ್ಕೆ ಅವರು 10 ಕೆಜಿಯಷ್ಟು ತೂಕ ಹೆಚ್ಚಿಸಿಕೊಂಡಿದ್ದಾರೆ. ಈ ಹಿಂದಿನ ಚಿತ್ರಗಳಿಗಿಂತ ಬಹಳ ವಿಭಿನ್ನವಾಗಿ ಮತ್ತು ದಷ್ಟಪುಷ್ಟವಾಗಿ ಕಾಣುತ್ತಿದ್ದಾರೆ. ಮೂರು ಹೊತ್ತು ಅನ್ನ ತಿಂದು ತೂಕ ಹೆಚ್ಚಿಸಿಕೊಂಡಿದ್ದೇನೆ. ಶೂಟಿಂಗ್ ಮುಗಿದ ಮೇಲೆ ಮತ್ತೆ ಸಹಜ ಸ್ಥಿತಿಗೆ ಮರಳಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇದಕ್ಕೂ ಮುನ್ನ ಅಯೋಗ್ಯ ಮುಂತಾದ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರೀತಮ್ ತೆಗ್ಗಿನಮನೆ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್​​ನಡಿ ಟಿ.ಆರ್. ಚಂದ್ರಶೇಖರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಇಕ್ಕಟ್ ಖ್ಯಾತಿಯ ನಾಗಭೂಷಣ್ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಸದ್ಯದಲ್ಲೇ ಅದೂ ಮುಗಿದು, ನವೆಂಬರ್ ಕೊನೆಯಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆಯಂತೆ.

ಇದಲ್ಲದೆ ಅರ್ಜುನ್ ಗೌಡ ಮತ್ತು ಶುಗರ್ಲೆಸ್ ಚಿತ್ರಗಳಲ್ಲಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದು, ಆ ಚಿತ್ರಗಳು ಸಹ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಇದನ್ನೂ ಓದಿ: ಶಂಕರ್​ ನಾಗ್ ಪುಣ್ಯಸ್ಮರಣೆ... 'ಆಟೋ ರಾಜ' ನಮ್ಮನ್ನಗಲಿ ಇಂದಿಗೆ 31 ವರ್ಷ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.