ETV Bharat / sitara

ಪ್ರಿಯಾಂಕ ಚೋಪ್ರಾ ನಟಿಸುತ್ತಿರುವ ಮ್ಯಾಟ್ರಿಕ್ಸ್​ 4 ಚಿತ್ರದ ಶೂಟಿಂಗ್ ಪುನಾರಂಭ - ಕೋವಿಡ್​ ಬಳಿಕ ಮ್ಯಾಟ್ರಿಕ್ಸ್​ 4 ಚಿತ್ರದ ಶೂಟಿಂಗ್ ಪುನರಾರಂಭ

ಕೋವಿಡ್​ ಹಿನ್ನೆಲೆ ಸ್ಥಗಿತಗೊಂಡಿದ್ದ ಪ್ರಿಯಾಂಕ ಚೋಪ್ರಾ ನಟಿಸುತ್ತಿರುವ ಹಾಲಿವುಡ್​ನ ಮ್ಯಾಟ್ರಿಕ್ಸ್​ 4 ಚಿತ್ರದ ಚಿತ್ರೀಕರಣವು ಮುಂದುವರೆದಿದೆ.

Priyanka Chopra commences shooting for Matrix 4
ಮ್ಯಾಟ್ರಿಕ್ಸ್​ 4 ಚಿತ್ರದ ಶೂಟಿಂಗ್ ಪುನರಾರಂಭ
author img

By

Published : Jul 7, 2020, 8:45 AM IST

ಮುಂಬೈ : ನಟಿ, ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಜೊನಾಸ್ ದಿ ಮ್ಯಾಟ್ರಿಕ್ಸ್ 4 ಚಿತ್ರದ ಶೂಟಿಂಗ್ ಪ್ರಾರಂಭಿಸಿದ್ದಾರೆ. ವಾರ್ನರ್ ಬ್ರದರ್ಸ್ ಮತ್ತು ವಿಲೇಜ್ ರೋಡ್ ಶೋ ನಿರ್ಮಿಸುತ್ತಿರುವ ಈ ಚಿತ್ರವನ್ನು ಸಿರೀಸ್​ ಕೊ - ಕ್ರಿಯೇಟರ್​ ಲಾನಾ ವಾಚೋವ್ಸ್ಕಿ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಘೋಷಿಸಿದಂತೆ ಕೀನು ರೀವ್ಸ್, ಕ್ಯಾರಿ - ಆನ್ ಮಾಸ್, ಯಾಹ್ಯಾ ಅಬ್ದುಲ್-ಮಾತೀನ್ II ​​ಮತ್ತು ನೀಲ್ ಪ್ಯಾಟ್ರಿಕ್ ಹ್ಯಾರಿಸ್ ಚಿತ್ರ ತಂಡದಲ್ಲಿ ಸೇರಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಪಾತ್ರದ ಬಗ್ಗೆ ಇನ್ನೂ ಸರಿಯಾದ ಮಾಹಿತಿ ದೊರೆತಿಲ್ಲ.

ಕೋವಿಡ್​ ಹಿನ್ನೆಲೆ ದಿ ಮ್ಯಾಟ್ರಿಕ್ಸ್ 4 ರ ಶೂಟಿಂಗ್ ಮಾರ್ಚ್ ಮಧ್ಯದಲ್ಲಿ ಸ್ಥಗಿತಗೊಂಡಿತ್ತು. ಅಷ್ಟೊತ್ತಿಗೆ ತಂಡವು ಸುಮಾರು ಒಂದು ತಿಂಗಳ ಕಾಲ ಶೂಟಿಂಗ್ ಮುಗಿಸಿತ್ತು. ಲಾಕ್​​​​ಡೌನ್ ಘೋಷಿಸಿದ್ದರಿಂದ ಚಿತ್ರದ ಹೆಚ್ಚಿನ ಕೆಲಸಗಳು ಬಾಕಿ ಉಳಿದಿವೆ. ಹೀಗಾಗಿ ಬಿಡುಗಡೆ ದಿನಾಂಕವನ್ನು 2021 ರ ಆರಂಭದಿಂದ 2022 ರ ಏಪ್ರಿಲ್​ಗೆ ಮುಂದೂಡಲಾಗಿದೆ.

ವರದಿಗಳ ಪ್ರಕಾರ, ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಮೊದಲು ದಿ ಮ್ಯಾಟ್ರಿಕ್ಸ್ 4 ನ ಫೈಟ್​ ಸೀನ್​ಗಾಗಿ ಚಿತ್ರ ತಂಡ ಕಠಿಣ ತರಬೇತಿ ಪಡೆದಿದೆ. ಕಳೆದ ಆಗಸ್ಟ್​ನಲ್ಲಿ ವಾರ್ನರ್ ಬ್ರದರ್ಸ್ ಮ್ಯಾಟ್ರಿಕ್ಸ್ 4 ಚಿತ್ರದ ಕೆಲಸ ನಡೆಯುತ್ತಿದೆ ಎಂದು ಘೋಷಿಸಿತ್ತು. ಬಳಿಕ ರೀವ್ಸ್ ಮತ್ತು ಮಾಸ್ ತಂಡದೊಂದಿಗೆ ಸೇರಿಕೊಂಡಿದ್ದಾರೆ. ಲಾನಾ ವಾಚೋವ್ಸ್ಕಿ ಬರೆದು, ನಿರ್ದೇಶನ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.