ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿರುವ ನಟಿ ಪ್ರಿಯಾಂಕಾ ಉಪೇಂದ್ರ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 43ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪ್ರಿಯಾಂಕಾ ಅವರಿಗೆ ಅಭಿಮಾನಿಗಳು ಶುಭಾಶಯದ ಮಹಾಪೂರವನ್ನೇ ಹರಿಸಿದ್ದಾರೆ.
ಇಂದು ತಮ್ಮ ನಿವಾಸದ ಬಳಿ ಪ್ರಿಯಾಂಕಾ ಆಭಿಮಾನಿಗಳು ಹಾಗೂ ಕುಟುಂಬದ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಪ್ರಿಯಾಂಕಾ ಸದ್ಯಕ್ಕೆ ಖೈಮರಾ, ಲೈಫ್ ಈಸ್ ಬ್ಯೂಟಿಫುಲ್, ಉಗ್ರಾವರತಾ, 1981 ಸೇರಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿರುವ ಪ್ರಿಯಾಂಕಾಗೆ ಖೈಮರಾ ಚಿತ್ರತಂಡ ಹೊಸ ಬಿರುದು ನೀಡಿರುವುದು ಪ್ರಿಯಾಂಕಾ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ. ಬರ್ತ್ಡೇ ವಿಶೇಷವಾಗಿ ಪ್ರಿಯಾಂಕಾ ಪತಿ ರಿಯಲ್ ಸ್ಟಾರ್ ಉಪೇಂದ್ರ 'ಉಗ್ರಾವತಾರ' ಚಿತ್ರದ ಪೋಸ್ಟರ್ ಅನಾವರಣಗೊಳಿಸಿ ಶುಭ ಕೋರಿದರು. ಉಪೇಂದ್ರ ಹಾಗೂ ಕುಟುಂಬದವರು ಪ್ರಿಯಾಂಕಾಗೆ ಕೇಕ್ ತಿನ್ನಿಸಿ ವಿಶ್ ಮಾಡಿದರು.