ಪ್ರಿಯಾಮಣಿ ಹಾಗೂ ಕಿಶೋರ್ ಮುಖ್ಯ ಭೂಮಿಕೆಯಲ್ಲಿರುವ 'ನನ್ನ ಪ್ರಕಾರ’ ಚಿತ್ರ ಆಗಸ್ಟ್ 23ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಪ್ರಿಯಾಮಣಿ ವೈದ್ಯೆಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಡಾಕ್ಟರ್ ಗೆಟಪ್ನಲ್ಲಿರುವ ಪ್ರಿಯಾಮಣಿ ಪೋಟೋಗಳು ರಿವೀಲ್ ಆಗಿವೆ. ಈ ಚಿತ್ರದಲ್ಲಿ ಕಿಶೋರ್ ಎಂದಿನಂತೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ವಿನಯ್ ಬಾಲಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಹುಲಿರಾಯ ಖ್ಯಾತಿಯ ಅರ್ಜುನ್‍ರಾಮು ಸಂಗೀತ ಸಂಯೋಜನೆ ಮಾಡಿದ್ದಾರೆ. ಮನ್ವರ್ಷಿ, ವಿನಯ್ ಬಾಲಾಜಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣವಿದೆ. ನನ್ನ ಪ್ರಕಾರ ಸಿನಿಮಾದಲ್ಲಿ ಕಿಶೋರ್, ಪ್ರಿಯಾಮಣಿ ಅಲ್ಲದೆ ಮಯೂರಿ, ಅರ್ಜುನ್ ಯೋಗಿ, ನಿರಂಜನ್ ದೇಶಪಾಂಡೆ, ಗಿರಿಜಾ ಲೋಕೇಶ್, ವೈಷ್ಣವಿ ಮುಂತಾದವರು ಅಭಿನಯಿಸಿದ್ದಾರೆ.


