ಪ್ರಿಯಾಮಣಿ ಹಾಗೂ ಕಿಶೋರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ನನ್ನ ಪ್ರಕಾರ' ಸಿನಿಮಾದಲ್ಲಿ ಶ್ವಾನಗಳು ಕೂಡಾ ಅಭಿನಯಿಸಿವೆ. ಈ ಸಿನಿಮಾ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಯನ್ನೊಂದಿದೆ.
ಚಿತ್ರದಲ್ಲಿ ಅಭಿನಯಿಸಿರುವ 'ರಾಖಿ' ಎಂಬ ಶ್ವಾನವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಪ್ರಿಯಾಮಣಿ ಹಾಗೂ ಕಿಶೋರ್ 'ರಾಖಿ' ಹುಟ್ಟುಹಬ್ಬವನ್ನು ಆಚರಿಸುವ ದೃಶ್ಯವೊಂದಿದೆ. ಚಿತ್ರತಂಡ ಇದೀಗ ಈ ಪೋಟೋಗಳನ್ನು ರಿವೀಲ್ ಮಾಡಿದೆ. ವಿನಯ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಕಿಶೋರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಿಯಾಮಣಿ ಸಿನಿಮಾದಲ್ಲಿ ಡಾಕ್ಟರ್ ಆಗಿ ನಟಿಸಿದ್ದಾರೆ.
ವಿನಯ್ ಬಾಲಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ, ಹುಲಿರಾಯ ಖ್ಯಾತಿಯ ಅರ್ಜುನ್ ರಾಮು ಸಂಗೀತ ಸಂಯೋಜಿಸಿದ್ದಾರೆ. ಮನ್ವರ್ಷಿ, ವಿನಯ್‍ಬಾಲಾಜಿ, ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಮನೋಹರ್ ಜೋಷಿ ಛಾಯಾಗ್ರಹಣವಿದೆ. ಕಿಶೋರ್, ಪ್ರಿಯಾಮಣಿ ಜೊತೆಗೆ ಮಯೂರಿ, ಅರ್ಜುನ್ ಯೋಗಿ, ನಿರಂಜನ್ ದೇಶಪಾಂಡೆ, ಗಿರಿಜಾ ಲೋಕೇಶ್, ವೈಷ್ಣವಿ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯದಲ್ಲೇ 'ನನ್ನ ಪ್ರಕಾರ' ಆಡಿಯೋ ಬಿಡುಗಡೆಯಾಗಲಿದ್ದು ಮುಂದಿನ ತಿಂಗಳು ಸಿನಿಮಾ ತೆರೆಗೆ ಬರಲಿದೆ.