ಫೆಬ್ರವರಿ 14 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮಿಲನಾ ನಾಗರಾಜ್, ಹನಿಮೂನ್ಗಾಗಿ ಮಾಲ್ಡೀವ್ಸ್ಗೆ ತೆರಳಿದ್ದರು. ಅಲ್ಲಿಂದ ಬಂದವರೇ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಿಲನಾ ನಾಗರಾಜ್ ಹಾಗೂ ಪೃಥ್ವಿ ನಟಿಸಿರುವ 'ಫಾರ್ REGN' ಚಿತ್ರೀಕರಣ ಇತ್ತೀಚೆಗೆ ಮಂಗಳೂರು, ಉಡುಪಿ ಕಡಲ ತೀರದಲ್ಲಿ ಜರುಗಿದೆ. ಈ ಹಾಡಿನ ಚಿತ್ರೀಕರಣದ ಕೆಲವೊಂದು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಆಗಿದೆ.
ಇದನ್ನೂ ಓದಿ: 'ಸಲಗ' ಸಿನಿಮಾ ನೋಡುವ ಇಚ್ಛೆ ವ್ಯಕ್ತಪಡಿಸಿದ ಸಂಸದ ತೇಜಸ್ವಿ ಸೂರ್ಯ
ನಿಶ್ಚಲ್ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಸಿನಿಮಾವನ್ನು ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು , ದ್ವೀತಿಯ ಹಂತದ ಚಿತ್ರೀಕರಣ ಮಾರ್ಚ್ ಅಂತ್ಯದ ವೇಳೆಗೆ ಆರಂಭವಾಗಲಿದೆ. ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿಯ ಮಿಲನಾ ನಾಗರಾಜ್ ಹಾಗೂ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಸುಧಾರಾಣಿ, ಸುಂದರರಾಜ್, ಸಿಹಿ ಕಹಿ ಚಂದ್ರು, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ತಬಲಾ ನಾಣಿ, ತ್ರಿವೇಣಿ ರಾವ್ , ತುಳು ನಟ ಅರವಿಂದ್ ಬೋಳಾರ್ ಹೀಗೆ ಹಿರಿಯ ಕಲಾವಿದರ ಬಳಗವೇ ಈ ಚಿತ್ರದಲ್ಲಿದೆ. ನವೀನ್ ರಾವ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿವೇಕ್ ಎಸ್.ಕೆ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಾಗಾರ್ಜುನ ಶರ್ಮ ಬರೆದಿರುವ ಹಾಡುಗಳಿಗೆ ಹರೀಶ್ ಆರ್. ಕೆ ಸಂಗೀತ ನೀಡಿದ್ದಾರೆ. ಧರಣಿ ಕಲಾ ನಿರ್ದೇಶನ ಮಾಡಿದ್ದಾರೆ. ಇದು ಈ ತಂಡದ ಮೊದಲ ಪ್ರಯತ್ನವಾಗಿದ್ದರೂ, ಪಕ್ಕಾ ಪ್ರಾಮಿಸಿಂಗ್ ಚಿತ್ರ ಎನ್ನುವುದು ಚಿತ್ರತಂಡದ ಅನಿಸಿಕೆ.