ಲಾಕ್ಡೌನ್ನಿಂದ ಕೆಲಸ ಇಲ್ಲದೆ ಅರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನಟಭಯಂಕರ ಚಿತ್ರದ ತಂತ್ರಜ್ಞನರು ಹಾಗೂ ಕಾರ್ಮಿಕರಿಗೆ ನಟ ಪ್ರಥಮ್ ಹಾಗೂ ನಿರ್ಮಾಪಕರು ಅರ್ಥಿಕವಾಗಿ ನೆರವು ನೀಡಿದ್ದಾರೆ.
ಕೆಲಸ ಇಲ್ಲದೆ ಸಣ್ಣ ಕಲಾವಿದರು, ತಂತ್ರಜ್ಞರು ಹಾಗು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಹಾಗೂ ಕೆಲವು ದಾನಿಗಳು ಸಿನಿ ಕಾರ್ಮಿಕರು ಹಾಗೂ ಪೋಷಕ ಕಲಾವಿದರಿಗೆ ದಿನಸಿ ಕಿಟ್ ನೀಡಿ ನೆರವು ನೀಡಿಲಾಗಿತ್ತು.
ಕೆಲಸ ಇಲ್ಲದ ಕಾರಣ ಚಿತ್ರರಂಗದ ಬಹುತೇಕ ಮಂದಿ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನರಿತ ನಟ, ನಿರ್ದೇಶಕ ಪ್ರಥಮ್ ನಟ ಭಯಂಕರ ಚಿತ್ರದ ನಿರ್ಮಾಪಕರ ಮೂಲಕ ನಟಭಯಂಕರ ಚಿತ್ರದಲ್ಲಿ ಕೆಲಸ ಮಾಡಿರುವ ಐವತ್ತಕ್ಕೂ ಹೆಚ್ಚು ಕಾರ್ಮಿಕರು ಹಾಗೂ ತಂತ್ರಜ್ಞರಿಗೆ ಮೂರು ಸಾವಿರ ರೂ. ನೆರವು ನೀಡುವುದರ ಜೊತೆಗೆ ಒಂದು ತಿಂಗಳಿಗೆ ಆಗುವಷ್ಟು ಉತ್ತಮ ಗುಣಮಟ್ಟದ ದಿನಸಿ ಕಿಟ್ ನೀಡಿದ್ದಾರೆ.
ಸದ್ಯ ದೇಶದಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಿ ಬಹುತೇಕ ಎಲ್ಲಾ ವಹಿವಾಟಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಅದರೆ, ಸಿನಿಮಾ ಶೂಟಿಂಗ್ ಹಾಗೂ ಚಿತ್ರಮಂದಿರಗಳ ಓಪನ್ ಮಾಡಲು ಅನುಮತಿ ನೀಡಿಲ್ಲ. ಅಲ್ಲದೆ ಅಗಸ್ಟ್ವರೆಗೂ ಚಿತ್ರರಂಗದ ಕೆಲಸಕ್ಕೆ ಸರ್ಕಾರ ಅನುಮತಿ ನೀಡುವುದಿಲ್ಲ ಎಂಬ ಮಾತು ಕೇಳಿ ಬರ್ತಿದೆ. ಇದು ಸಿನಿಮಾ ಉದ್ಯಮವನ್ನೇ ನಂಬಿ ಕೊಂಡಿದ್ದವರನ್ನು ಚಿಂತೆಗೀಡು ಮಾಡಿದೆ.