ETV Bharat / sitara

ಸ್ಟೈಲಿಶ್ ಡಾನ್ ಆಯಿಲ್ ಕುಮಾರ್ ಆಗಿ ಬದಲಾದ ಪ್ರಶಾಂತ್ ಸಂಬರಗಿ - Ravi Shrivatsa direction MR movie

ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಪ್ರಶಾಂತ್ ಸಂಬರಗಿ ಈಗ ಸಿನಿಮಾಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. 5 ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದು ಅದರಲ್ಲಿ ಮಾಜಿ ಭೂಗತ ಲೋಕದ ದೊರೆ, ದಿವಂಗತ ಮುತ್ತಪ್ಪ ರೈ ಬಯೋಪಿಕ್ 'ಎಂಆರ್'ಚಿತ್ರದಲ್ಲಿ ಆಯಿಲ್ ಕುಮಾರ್ ಎಂಬ ಪಾತ್ರದಲ್ಲಿ ಪ್ರಶಾಂತ್ ಸಂಬರಗಿ ಆ್ಯಕ್ಟ್ ಮಾಡುತ್ತಿದ್ದಾರೆ.

prashant sambargi
ಪ್ರಶಾಂತ್ ಸಂಬರಗಿ
author img

By

Published : Dec 19, 2020, 9:30 AM IST

ಸ್ಯಾಂಡಲ್‍ವುಡ್ ಡ್ರಗ್ಸ್ ಹಗರಣದ ನಂತರ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರ ಜನಪ್ರಿಯತೆ ಹೆಚ್ಚಾಗಿದೆಯಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಏಕೆಂದರೆ ಅವರಿಗೆ ಕನ್ನಡ ಸಿನಿಮಾಗಳಿಂದ ಸಾಲು ಸಾಲು ಆಫರ್​ ಬರುತ್ತಿದೆಯಂತೆ. ಬಂದ ಅವಕಾಶವನ್ನು ಸ್ವೀಕರಿಸಿರುವ ಸಂಬರಗಿ ಸಿನಿಮಾಗಳಲ್ಲಿ ನಟಿಸಲಾರಂಭಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಕೆಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರೂ ಪ್ರಶಾಂತ್ ಸಂಬರಗಿ ಹೊರಗಿನವರು ಎಂದು ಎಲ್ಲರೂ ಹೇಳುತ್ತಿದ್ದರು. ಅವರಿಗೆ ಕನ್ನಡ ಚಿತ್ರರಂಗದ ಜೊತೆಗೆ ಯಾವುದೇ ನಂಟಿಲ್ಲದಿರುವುದರಿಂದ ಚಿತ್ರರಂಗದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಹೇಳುತ್ತಿದ್ದರು. ಆದರೆ ಡ್ರಗ್ಸ್ ಹಗರಣದ ನಂತರ ಪ್ರಶಾಂತ್‍ಗೆ ಒಂದಿಷ್ಟು ಆಫರ್​​​​ಗಳು ಬರುತ್ತಿದ್ದು ಐದು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಈ ಪೈಕಿ ರವಿ ಶ್ರೀವತ್ಸ ನಿರ್ದೇಶನದ 'ಎಂಆರ್' ಸಿನಿಮಾ ಕೂಡಾ ಒಂದು. ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಂಬರಗಿ ಈಗ ಮೊದಲ ಬಾರಿಗೆ 'ಎಂಆರ್' ಚಿತ್ರದಲ್ಲಿ ಅಂಡರ್​​​​ವರ್ಲ್ಡ್​ ಡಾನ್ ಬೂಟ್‍ಹೌಸ್ ಕುಮಾರ್ ಅಲಿಯಾಸ್ ಆಯಿಲ್ ಕುಮಾರ್​​​​​​​​​​​​ ಪಾತ್ರವನ್ನು ಮಾಡುತ್ತಿದ್ದಾರೆ. ತಮ್ಮ ಪಾತ್ರಕ್ಕಾಗಿ ಈಗಾಗಲೇ ತಯಾರಿ ಕೂಡಾ ಆರಂಭಿಸಿದ್ದಾರಂತೆ.

ಇದನ್ನೂ ಓದಿ: ರೊಮ್ಯಾಂಟಿಕ್​ ಆಗಿ ಪತ್ನಿಯ ಬರ್ತ್​​ ಡೇ ಆಚರಿಸಿದ ಧ್ರುವ ಸರ್ಜಾ: ವಿಡಿಯೋ ನೋಡಿ

ಈ ಕುರಿತು ಮಾತನಾಡುವ ಅವರು, "ಇದೊಂದು ಬಯೋಪಿಕ್ ಚಿತ್ರವಾದ್ದರಿಂದ, ಕಾನೂನಿನ ವಿಚಾರಗಳನ್ನು ಮಾತನಾಡಲು ನಿರ್ದೇಶಕ ರವಿ ಶ್ರೀವತ್ಸ ನನ್ನನ್ನು ಭೇಟಿ ಮಾಡಿದ್ದರು. ಅವರನ್ನು ಹಲವು ಲಾಯರ್​​​​​​​​​​​​​ಳಿಗೆ ಪರಿಚಯಿಸಿಕೊಟ್ಟೆ. ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಏನೇನು ಸಹಾಯ ಮಾಡಬಹುದೋ ಅದನ್ನು ಮಾಡಿದೆ. ಈ ಸಂದರ್ಭದಲ್ಲಿ ಆಯಿಲ್ ಕುಮಾರ್​​​​​​​​​​ ಪಾತ್ರವನ್ನು ನೀವೇ ಏಕೆ ಮಾಡಬಾರದು ಎಂದು ಕೇಳಿದರು. ನನಗೂ ಆಶ್ಚರ್ಯ ಆಯಿತು. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರೂ ನನ್ನನ್ನು ಹೊರಗಿನವನು ಎಂದು ಗುರುತಿಸುವಾಗ ಬೇಸರವಾಗುತ್ತಿತ್ತು. ಈಗ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ನಟಿಸಲು ಅವಕಾಶ ದೊರೆತಿರುವುದಕ್ಕೆ ಖುಷಿಯಾಗಿ ಒಪ್ಪಿಕೊಂಡೆ. ಇದೊಬ್ಬ ಸ್ಟೈಲಿಶ್ ಡಾನ್ ಪಾತ್ರ. ರೆಬಾನ್ ಗ್ಲಾಸ್, 555 ಸಿಗರೇಟು , ಕಾಸ್ಲ್ಟಿ ಬಟ್ಟೆಗಳು ... ಹೀಗೆ ಬಹಳ ಸ್ಟೈಲಿಶ್ ಆಗಿರುತ್ತಿದ್ದರು ಕುಮಾರ್. ಅಂತದ್ದೊಂದು ಪಾತ್ರವನ್ನು ನನಗೆ ಕೊಟ್ಟಿದ್ದಾರೆ. ನನ್ನ ಭಾಗದ ಚಿತ್ರೀಕರಣ ದುಬೈನಲ್ಲೂ ನಡೆಯಲಿದೆ" ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.