ಕೆಜಿಎಫ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ಮಾಡಿದ ನಿರ್ಮಾಪಕ ವಿಜಯ್ ಕಿರಗಂದೂರು ಮಾಲೀಕತ್ವದ ಹೊಂಬಾಳೆ ಫಿಲ್ಮ್ ಇದೀಗ ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದೆ. ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದೆ. ಈ ಬಗ್ಗೆ ಸ್ವತಃ ಹೊಂಬಾಳೆ ಫಿಲ್ಮ್ ತಂಡವೇ ಮಾಹಿತಿ ನೀಡಿದ್ದು, ನಾಳೆ ಡಿಸೆಂಬರ್ 2ರಂದು ಯಾವ ಸಿನಿಮಾ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.
-
Dear Audience, You always Loved our Cinema more than Us. To continue to Love and to be Loved we are coming with our next "Indian Film". Keep your Heart Open for our announcement on 2nd Dec at 2:09pm #HombaleFilms7@vkiragandur @hombalefilms pic.twitter.com/nAz8Lh3fIK
— Hombale Films (@hombalefilms) November 30, 2020 " class="align-text-top noRightClick twitterSection" data="
">Dear Audience, You always Loved our Cinema more than Us. To continue to Love and to be Loved we are coming with our next "Indian Film". Keep your Heart Open for our announcement on 2nd Dec at 2:09pm #HombaleFilms7@vkiragandur @hombalefilms pic.twitter.com/nAz8Lh3fIK
— Hombale Films (@hombalefilms) November 30, 2020Dear Audience, You always Loved our Cinema more than Us. To continue to Love and to be Loved we are coming with our next "Indian Film". Keep your Heart Open for our announcement on 2nd Dec at 2:09pm #HombaleFilms7@vkiragandur @hombalefilms pic.twitter.com/nAz8Lh3fIK
— Hombale Films (@hombalefilms) November 30, 2020
ಈಗಾಗಲೇ ಹೊಂಬಾಳೆ ಫಿಲ್ಮ್ ನಿರ್ಮಾಣದ ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವವರು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಎಂಬ ಮಾತು ಸಾಕಷ್ಟು ಕೇಳಿ ಬರುತ್ತಿವೆ. ಮತ್ತೊಂದು ಕುತೂಹಲದ ವಿಚಾರ ಏನಂದ್ರೆ ಪ್ರಶಾಂತ್ ಈ ಬಾರಿ ತೆಲುಗಿನ ಡಾರ್ಲಿಂಗ್ ಪ್ರಭಾಸ್ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರಂತೆ.
ಈ ಹಿಂದೆ ಕೆಲವು ಸುದ್ದಿ ಹರಿದಾಡಿದ್ದು, ಕೆಜಿಎಫ್ 2 ಮುಕ್ತಾಯವಾದ ಮೇಲೆ ತೆಲುಗಿನ ಮಹೇಶ್ ಬಾಬು ಅಥವಾ ಜೂ.ಎನ್ಟಿಆರ್ಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದ್ರೆ, ಪ್ರಶಾಂತ್ ನೀಲ್ ಮಾತ್ರ, ನಾನು ಕೆಜಿಎಫ್- 2 ಮುಗಿಯುವ ತನಕ ಯಾವುದೇ ನಿರ್ಧಾರಕ್ಕೆ ಬರುವುದಿಲ್ಲ ಎನ್ನುತ್ತಿದ್ದಾರಂತೆ.
ಇತ್ತ ಹೊಂಬಾಳೆ ಫಿಲ್ಮ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದು, ಸಿನಿ ರಂಗದಲ್ಲಿ ಒಂದು ರೀತಿಯ ಕುತೂಹಲ ನಿರ್ಮಾಣವಾಗಿದೆ.