ನಿಜವಾದ ಸಾಧನೆ ಅಂದ್ರೆ ಇದೆ ಅಲ್ವಾ? ವಿದ್ಯಾರ್ಥಿಗಳ ಕೊರತೆಯಿಂದ ಇನ್ನೇನು ಮುಚ್ಚುವ ಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆಯೊಂದು ಫಿನಿಕ್ಸ್ ಪಕ್ಷಿಯಂತೆ ಎದ್ದು ನಿಂತಿದೆ. ಕೇವಲ ಒಂದೇ ವರ್ಷದಲ್ಲಿ ಶಾಲೆಯ ಕೊಠಡಿ ತುಂಬೆಲ್ಲ ಮಕ್ಕಳು ತುಂಬಿ ತುಳುಕುತ್ತಿದ್ದ. ಈ ಮಹತ್ತರ ಸಾಧನೆಗೆ ಕಾರಣ ಓರ್ವ ನಟಿಯ ಪರಿಶ್ರಮ ಅನ್ನೋದು ವಿಶೇಷ.
ಹೌದು, ಬಟ್ಟಲು ಕಣ್ಣುಗಳ ಚೆಲುವೆ ಪ್ರಣೀತಾ ಸುಭಾಷ್ ಕಳೆದ ವರ್ಷ ಹಾಸನದ ಬಳುಘಟ್ಟ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದರು. ತಮ್ಮ ಹುಟ್ಟುಹಬ್ಬದ ನಿಮಿತ್ತ 'ಸರ್ಕಾರಿ ಶಾಲೆ ಉಳಿಸು' ಆಂದೋಲನಕ್ಕೆ ಕೈ ಜೋಡಿಸಿದ್ದ ಈ ಮಾಸ್ ಲೀಡರ್ ಚೆಲುವೆ, ಕೇವಲ ಒಂದೇ ವರ್ಷದಲ್ಲಿ ತಾವು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಈ ಶಾಲೆಯಲ್ಲಿಗ ವಿದ್ಯಾರ್ಥಿಗಳ ಸಂಖ್ಯೆ 22 ರಿಂದ 62 ಕ್ಕೆ ಏರಿಕೆಯಾಗಿದೆ. ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಸುಮಾರು 300% ರಷ್ಟು ಹೆಚ್ಚಳವಾಗಿದೆ.
- " class="align-text-top noRightClick twitterSection" data="">
ಈ ಶಾಲೆ ಮೊದಲಿನಂತಾಗಲು ಪ್ರಣೀತಾ ಅವರ ಅವಿರತ ಪರಿಶ್ರಮವೇ ಕಾರಣ. ಒಂದು ವರ್ಷದ ಅವಧಿಯಲ್ಲಿ ಶಾಲೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದಾರೆ. ಮಕ್ಕಳನ್ನು ಶಾಲೆಯತ್ತ ಕರೆತರಲು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಪರಿಣಾಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ವೃದ್ಧಿಸಿದೆ. ಈ ಸಂತಸದ ವಿಚಾರವನ್ನು ತಮ್ಮ ಫೇಸ್ಬುಕ್ಲ್ಲಿ ಹಂಚಿಕೊಂಡಿದ್ದಾರೆ ಲೀಡರ್ ಹುಡುಗಿ ಪ್ರಣೀತಾ.