ಹೈದರಾಬಾದ್: ಸಿನಿಮಾ ಚಿತ್ರೀಕರಣದ ವೇಳೆ ಬಹುಭಾಷಾ ನಟ ಪ್ರಕಾಶ್ ರೈ ಕೈಗೆ ಗಾಯವಾಗಿದ್ದು, ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಇದೀಗ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ.
ತಮಿಳು ನಟ ಧುನುಷ್ ಅವರ ಚಿತ್ರ 'ತಿರುಚಿತ್ರಾಂಬಲಂ' ಚಿತ್ರದ ಫೈಟಿಂಗ್ ದೃಶ್ಯದ ಚಿತ್ರೀಕರಣವ ವೇಳೆ ಪ್ರಕಾಶ್ ರೈ ಅವರ ಕೈಗೆ ಗಾಯವಾಗಿದ್ದು, ವೈದ್ಯ ಸ್ನೇಹಿತ ಡಾ. ಗುರುವಾ ರೆಡ್ಡಿ ಸಲಹೆ ಮೇರೆಗೆ ಹೈದರಾಬಾದ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
-
A small fall.. a tiny fracture.. flying to Hyderabad into the safe hands of my friend Dr Guruvareddy for a surgery. I will be fine nothing to worry .. keep me in your thoughts 😊😊😊🤗🤗🤗
— Prakash Raj (@prakashraaj) August 10, 2021 " class="align-text-top noRightClick twitterSection" data="
">A small fall.. a tiny fracture.. flying to Hyderabad into the safe hands of my friend Dr Guruvareddy for a surgery. I will be fine nothing to worry .. keep me in your thoughts 😊😊😊🤗🤗🤗
— Prakash Raj (@prakashraaj) August 10, 2021A small fall.. a tiny fracture.. flying to Hyderabad into the safe hands of my friend Dr Guruvareddy for a surgery. I will be fine nothing to worry .. keep me in your thoughts 😊😊😊🤗🤗🤗
— Prakash Raj (@prakashraaj) August 10, 2021
ಪ್ರಕಾಶ್ ರೈ ಟ್ವೀಟ್
ಸಿನಿಮಾ ಚಿತ್ರೀಕರಣದ ವೇಳೆ ಚಿಕ್ಕದಾಗಿ ಕೆಳಗೆ ಬಿದ್ದಿರುವ ಕಾರಣ ಪೆಟ್ಟಾಗಿದೆ. ನನ್ನ ಸ್ನೇಹಿತ ಡಾ. ಗುರುವಾ ರೆಡ್ಡಿ ಜೊತೆಗೆ ಹೈದರಾಬಾದ್ಗೆ ತೆರಳುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದೇನೆ. ಶೀಘ್ರದಲ್ಲೇ ಗುಣಮುಖನಾಗಿ ವಾಪಸ್ ಬರುತ್ತೇನೆ. ಇದಕ್ಕಾಗಿ ನಿಮ್ಮ ಹಾರೈಕೆ ನನ್ನೊಂದಿಗೆ ಇರಲಿ ಎಂದಿದ್ದಾರೆ.
ನಟ ಧನುಷ್ ಅಭಿನಯದ ತಿರುಚಿತ್ರಾಂಬಲಂ ಚಿತ್ರೀಕರಣ ಇದೀಗ ಭರದಿಂದ ಸಾಗಿದ್ದು, ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಪ್ರಕಾಶ್ ರೈ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಗಾಯವಾಗಿದೆ.
ಇದನ್ನೂ ಓದಿರಿ: ಗಂಡ - ಹೆಂಡ್ತಿ ನಡುವೆ ಜಗಳ: ಮನೆ ಬಿಟ್ಟು ಹೋದ ಹೆತ್ತಮ್ಮನ ಹುಡುಕಲು ರಾತ್ರಿಯಿಡಿ ಸೈಕಲ್ ತುಳಿದ ಮಗ!
ದಕ್ಷಿಣ ಭಾರತದ ಬಹುಭಾಷಾ ನಟರಾಗಿರುವ ಪ್ರಕಾಶ್ ರೈ KGF ಚಾಫ್ಟರ್ - 2, ಮೇಜರ್, ಪುಷ್ಪಾ, ಅಣ್ಣಾತ್ತೆ, ಎನಿಮಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯ ಮಾಡಿದ್ದು, ಎಲ್ಲವೂ ತೆರೆ ಕಾಣಬೇಕಾಗಿದೆ. ಕಳೆದ ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ ಪುನೀತ್ ರಾಜಕುಮಾರ್ ಅವರ ಯುವರತ್ನ ಚಿತ್ರದಲ್ಲೂ ಪ್ರಕಾಶ್ ರೈ ಕಾಣಿಸಿಕೊಂಡಿದ್ದರು.
ನಿನ್ನೆ ಜಿಲ್ಲೆಯ ಬಿಡದಿಯ ಜೋಗಿನದೊಡ್ಡಿ ಬಳಿ 'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ಅವಘಡ ಸಂಭವಿಸಿ ತಮಿಳುನಾಡು ಮೂಲದ ಫೈಟರ್ ವಿವೇಕ್ (28) ಮೃತಪಟ್ಟಿರುವ ಘಟನೆ ಸಹ ನಡೆದಿದೆ.