ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ 35 ನೇ ಚಿತ್ರ 'ಮಾಫಿಯಾ'. ಈ ಚಿತ್ರಕ್ಕಾಗಿ ಪ್ರಜ್ವಲ್ ಎರಡು ವರ್ಷಗಳಿಂದ ದಟ್ಟವಾಗಿ ಬೆಳೆದಿದ್ದ ಕೂದಲನ್ನು ಕತ್ತರಿಸಿದ್ದಾರೆ. ವಿಶೇಷವೆಂದ್ರೆ ಆ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
'ಮಮ್ಮಿ' ಮತ್ತು 'ದೇವಕಿ'ಚಿತ್ರಗಳ ಮೂಲಕ ಜನಪ್ರಿಯರಾಗಿರುವ ಲೋಹಿತ್, ಮಾಫಿಯಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭ ಡಿಸೆಂಬರ್ 2ರಂದು ನಡೆಯಲಿದ್ದು, ಡಿ.6ರಿಂದ ಚಿತ್ರೀಕರಣ ಆರಂಭವಾಗಲಿದೆ.
![Prajwali Devaraj donates his hair to Cancer patients](https://etvbharatimages.akamaized.net/etvbharat/prod-images/kn-bng-02-mafia-cinemakkagi-haircutt-madida-prjawal-devaeaju-7204735_30112021155554_3011f_1638267954_387.jpg)
ಪ್ರಜ್ವಲ್ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಲಿದ್ದಾರೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್.ಬಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ, ಮಾಸ್ತಿ ಸಂಭಾಷಣೆ, ತರುಣ್ ಛಾಯಾಗ್ರಹಣ ಇರಲಿದೆ.
![Prajwali Devaraj donates his hair to Cancer patients](https://etvbharatimages.akamaized.net/etvbharat/prod-images/kn-bng-02-mafia-cinemakkagi-haircutt-madida-prjawal-devaeaju-7204735_30112021155554_3011f_1638267954_492.jpg)
(ಇದನ್ನೂ ಓದಿ: ಅಪ್ಪು ಪುತ್ಥಳಿ ಪ್ರತಿಷ್ಠಾಪನೆ... 'ಸಾಗರ' ಫ್ಯಾನ್ಸ್ ಅಭಿಮಾನ)