ETV Bharat / sitara

bigboss ಸೆಕೆಂಡ್ ಇನ್ನಿಂಗ್ಸ್: ಪ್ರಾಂಕ್ ಆದ ಪ್ರಶಾಂತ್ ಸಂಬರಗಿ - ಬಿಗ್​ಬಾಸ್​ ಶೋ

ಈ ವಾರ ಬಿಗ್​ಬಾಸ್​ನಲ್ಲಿ ನೋ ಎಲಿಮಿನೇಷನ್. ಪ್ರಶಾಂತ್ ಅವರನ್ನು ಪ್ರಾಂಕ್ ಮಾಡಲಾಗಿದೆ. ಆದರೆ ಇದನ್ನು ಟಾಸ್ಕ್ ಆಗಿ ನೀಡಲಾಗುತ್ತಿದೆ. ಪ್ರಶಾಂತ್ ಬಂದ ನಂತರ ಯಾವುದೇ ಪ್ರತಿಕ್ರಿಯೆ ನೀಡಬಾರದು. ಪ್ರಶಾಂತ್ ಅವರನ್ನು 'ಇನ್​ವಿಸಿಬಲ್' (ಕಾಣದಂತೆ) ಎಂದು ನೀವೆಲ್ಲ ಪರಿಗಣಿಸಬೇಕು ಎಂದು ಸುದೀಪ್​ ತಾಕೀತು ಮಾಡಿದ್ದಾರೆ.

prashanth
prashanth
author img

By

Published : Jun 27, 2021, 11:01 PM IST

ಈ ವಾರ ಬಿಗ್ ಬಾಸ್ ಮನೆಯಿಂದ ಯಾವ ಸ್ಪರ್ಧಿಯೂ ಹೊರ ಬಂದಿಲ್ಲ. ಕಾರಣ ನೋ ಎಲಿಮಿನೇಷನ್. ಆದರೆ, ಇದೇ ಮೊದಲ ಬಾರಿಗೆ ಬಿಗ್‌ಬಾಸ್ ಮನೆಯಲ್ಲಿ ಫ್ರಾಂಕ್ ನಡೆದಿದೆ. ಸೂಪರ್ ಸಂಡೆ ವಿತ್ ಸುದೀಪ್ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ವೇದಿಕೆ ಮೇಲೆ ಬಂದ ನಟ ಸುದೀಪ್, ಯಾವುದೇ ಎಲಿಮಿನೇಷನ್ ಇರುವುದಿಲ್ಲ. ಆದರೆ, ಒಂದು ಟ್ವಿಸ್ಟ್ ಇರುತ್ತದೆ. ಅದು ಪ್ರಾಂಕ್ ಎಂದು ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಸುದೀಪ್ ಸ್ಪಷ್ಟಪಡಿಸಿದ್ದಾರೆ.

prashanth
prashanth

ಅದರಂತೆ ಎಲಿಮಿನೇಷನ್ ಸುತ್ತು ಆರಂಭವಾಗುತ್ತಿದ್ದಂತೆ ಮೊದಲು ರಘುಗೌಡ, ದಿವ್ಯ ಸುರೇಶ್, ನಿಧಿ ಸುಬ್ಬಯ್ಯ, ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಿಯಾಂಕ ತಿಮ್ಮೇಶ್ ಸೇವ್ ಆಗುತ್ತಾರೆ. ಪ್ರಶಾಂತ್ ಸಂಬರಗಿ ನೀವು ಎಲಿಮಿನೇಟ್ ಆಗಿದ್ದು ಐದು ನಿಮಿಷ ಸಮಯ ಕೊಡುತ್ತೇನೆ ಹೊರಗೆ ಬನ್ನಿ ಎಂದು ಸುದೀಪ್ ಹೇಳುತ್ತಾರೆ. ಅದಕ್ಕೆ ಪ್ರಶಾಂತ್, 'ಎರಡನೇ ಇನ್ನಿಂಗ್ಸ್​ನಲ್ಲಿ ಎಲಿಮಿನೇಟ್​ ಆಗುತ್ತಿರುವ ಮೊದಲ ಸ್ಪರ್ಧಿ ನಾನೇ' ಎಂದು ಬೇಸರದಿಂದ ತಮ್ಮ ನೋವು ಹೇಳಿಕೊಂಡು ಹೊರನಡೆದರು. ಈ ಸಂದರ್ಭದಲ್ಲಿ ಸೆಲ್ಫಿಗೆ ಕೇವಲ ಹುಡುಗರಷ್ಟೇ ಬಂದು ನಿಂತರು.

ಮನೆಯ ಎಲ್ಲಾ ಸದಸ್ಯರು ಬರಲಿಲ್ಲ. ದಿವ್ಯ ಸುರೇಶ್ ತುಂಬಾ ಖುಷಿ ಪಟ್ಟರು. ಮನೆಯಿಂದ ಹೊರಹೋಗಲು ಮೇನ್ ಡೋರ್​ಗೆ ಬರುತ್ತಿದ್ದಾಗ ಬಿಗ್ ಬಾಸ್, ಮಳೆ ಬರುತ್ತಿರುವ ಕಾರಣ ಛತ್ರಿ ಹಿಡಿದು ಬನ್ನಿ ಎಂದು ಹೇಳಿದರು. ಅದರಂತೆ ಛತ್ರಿ ಹಿಡಿದು ಬಾಗಿಲ ಬಳಿ ಬಂದು ನಿಂತರು.

prashanth
prashanth

ಇತ್ತ, ಮನೆ ಒಳಗಿನ ಸದಸ್ಯರನ್ನು ಮತ್ತೆ ಕರೆದ ಸುದೀಪ್, ಈ ವಾರ ನೋ ಎಲಿಮಿನೇಷನ್. ಪ್ರಶಾಂತ್ ಅವರನ್ನು ಪ್ರಾಂಕ್ ಮಾಡಲಾಗಿದೆ. ಆದರೆ, ಇದನ್ನು ಟಾಸ್ಕ್ ಆಗಿ ನೀಡಲಾಗುತ್ತಿದೆ. ಪ್ರಶಾಂತ್ ಬಂದ ನಂತರ ಯಾವುದೇ ಪ್ರತಿಕ್ರಿಯೆ ನೀಡಬಾರದು. ಪ್ರಶಾಂತ್ ಅವರನ್ನು 'ಇನ್​ವಿಸಿಬಲ್' (ಕಾಣದಂತೆ) ಎಂದು ನೀವೆಲ್ಲ ಪರಿಗಣಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಕೆಲ ಹೊತ್ತಿನ ನಂತರ ಪ್ರಶಾಂತ್ ಅವರಿಗೆ ಪೋಸ್ಟ್ ಒಂದು ಬರುತ್ತದೆ. ನೀವು ಮನೆ ಒಳಗೆ ಹೋಗಬಹುದು ನೋ ಎಲಿಮಿನೇಷನ್ ಎಂದು ಬರೆದಿರುತ್ತದೆ. ನಂತರ ಪ್ರಶಾಂತ್​ ಮನೆ ಒಳಗೆ ಮತ್ತೆ ಬಂದಿದ್ದಾರೆ. 'ನಾನು ಮತ್ತೆ ಬಂದಿದ್ದೇನೆ' ಎಂದು ಒಳಗೆ ಬರುತ್ತಾರೆ. ಆದರೆ, ಅವರನ್ನು ಯಾರೂ ನೋಡುವುದಿಲ್ಲ- ಮಾತನಾಡಿಸುವುದಿಲ್ಲ. ಮುಂದೆ ಏನಾಗುತ್ತದೆ ಎಂಬುದು ನಾಳಿನ ಎಪಿಸೋಡ್​​​ನಲ್ಲಿ ನೋಡಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.