ETV Bharat / sitara

'ಸಲಾರ್​'​​ ಸಿನಿಮಾಕ್ಕೆ ಪ್ರಭಾಸ್​ ಪಡೆದ ಸಂಭಾವನೆ ಎಷ್ಟು ಗೊತ್ತಾ? - Director Prashant Neel

ಪ್ರಭಾಸ್​​ ಅಭಿನಯದ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾಕ್ಕೆ 'ಸಲಾರ್​'​​ ಎಂದು ಟೈಟಲ್​ ಫಿಕ್ಸ್​​ ಮಾಡಲಾಗಿದೆ. ಈ ಚಿತ್ರಕ್ಕೆ ಕೆಜಿಎಫ್​​ ಮತ್ತು ಉಗ್ರಂ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರಶಾಂತ್​ ನೀಲ್​ ಡೈರೆಕ್ಷನ್‌ ಇದ್ದು​, ಬಾಹುಬಲಿ ಖ್ಯಾತಿಯ ಪ್ರಭಾಸ್​​ ನಾಯಕನಾಗಿ ನಟಿಸುತ್ತಿದ್ದಾರೆ. ಇದೀಗ ಈ ಚಿತ್ರಕ್ಕೆ ಪ್ರಭಾಸ್​ ಪಡೆದಿರುವ ಸಂಭಾವನೆ ಬಗ್ಗೆ ಚರ್ಚೆ ಶುರುವಾಗಿದೆ.

Prabhas salary for 'Salar' movie
'ಸಲಾರ್​'​​ ಸಿನಿಮಾಕ್ಕೆ ಪ್ರಭಾಸ್​ ಪಡೆದ ಸಂಭಾವನೆ ಎಷ್ಟು?
author img

By

Published : Dec 3, 2020, 12:14 PM IST

ಹೊಂಬಾಳೆ ಫಿಲಂಸ್​ ಸಂಸ್ಥೆಯಡಿ ವಿಜಯ್​ ಕಿರಗಂದೂರು ನಿರ್ಮಾಣ ಮಾಡುತ್ತಿರುವ 'ಸಲಾರ್​' ಚಿತ್ರದಲ್ಲಿ ಪ್ರಭಾಸ್​ ನಟಿಸುತ್ತಿರುವುದು ಬರೀ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಸುದ್ದಿಯಾಗಿದೆ. ಇದರ ಜೊತೆಗೆ ಈ ಚಿತ್ರಕ್ಕೆ ಪ್ರಭಾಸ್​ ಎಷ್ಟು ಸಂಭಾವನೆ ಪಡೆದಿರಬಹುದು ಎಂಬ ಬಗ್ಗೆ ಬಿಸಿ-ಬಿಸಿ ಚರ್ಚೆ ಶುರುವಾಗಿದೆ.

'ಸಲಾರ್​' ಚಿತ್ರಕ್ಕೆ ಪ್ರಭಾಸ್​ ಪಡೆಯುತ್ತಿರುವ ಸಂಭಾವನೆ ಬಗ್ಗೆ ನಿರ್ಮಾಪಕರು ಈವರೆಗೂ ಹೇಳಿಲ್ಲ. ಕಳೆದ ವರ್ಷವೇ ಚಿತ್ರೀಕರಣ ಪ್ರಾರಂಭವಾದ 'ರಾಧೇ ಶ್ಯಾಮ್​' ಚಿತ್ರಕ್ಕೆ ಪ್ರಭಾಸ್​ 80 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಹೀಗಾಗಿ ಸಲಾರ್ ಚಿತ್ರಕ್ಕೆ ಪ್ರಭಾಸ್​ 100 ಕೋಟಿಯವರೆಗೂ ಸಂಭಾವನೆ ಪಡೆದಿರಬಹುದು ಎಂದು ಹೇಳಲಾಗುತ್ತಿದೆ.

ಪ್ರಭಾಸ್​ ಈಗಾಗಲೇ ನಾಗ್ ​​ಅಶ್ವಿನ್​ ನಿರ್ದೇಶನದ ಹೊಸ ಚಿತ್ರವಲ್ಲದೆ, ರಾಮಾಯಣದ ಕುರಿತಾದ 'ಆದಿಪುರುಷ್​' ಎಂಬ ಚಿತ್ರವನ್ನೂ ಒಪ್ಪಿಕೊಂಡಿದ್ದರು. ಅವೆರೆಡರ ಜೊತೆಗೆ ಇದೀಗ 'ಸಲಾರ್​' ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಪ್ರಭಾಸ್​ 300 ಕೋಟಿ ರೂಪಾಯಿಯವರೆಗೆ ಸಂಪಾದಿಸುತ್ತಿದ್ದಾರೆ ಎನ್ನಲಾಗ್ತಿದೆ. ಪ್ರಭಾಸ್​ಗೆ 100 ಕೋಟಿ ಸಂಭಾವನೆ ಕೊಟ್ಟರೆ, ಒಟ್ಟಾರೆ ಚಿತ್ರಕ್ಕೆ ಎಷ್ಟು ಖರ್ಚಾಗಬಹುದು? ಎಂಬುದು ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.