ETV Bharat / sitara

ಬರುತ್ತಾ ಬಾಹುಬಲಿ-3.. ನಟ ಪ್ರಭಾಸ್​ ಆಡಿದ 'ಚಮತ್ಕಾರ'ದ ಮಾತೇನು? - ಬಾಹುಬಲಿ 3 ನೇ ಪಾರ್ಟ್​ ಬಗ್ಗೆ ಪ್ರಭಾಸ್​ ಮಾತು

ಬಾಹುಬಲಿ ಸಿನಿಮಾ ನಿರ್ದೇಶಕ ರಾಜಮೌಳಿ ಮತ್ತು ನಿರ್ಮಾಪಕ ಶೋಬು ಯಾರ್ಲಗಡ್ಡ ಅವರು ಅತ್ಯಂತ ಯಶಸ್ವಿ ಸಿನಿಮಾವನ್ನು ಅಲ್ಲಿಗೇ ಕೈಬಿಡಲು ಬಯಸುವುದಿಲ್ಲ. ಹಾಗಾಗಿ ಏನಾದರೂ 'ಚಮತ್ಕಾರ' ನಡೆಯಬಹುದು ಎಂದು ನಟ ಪ್ರಭಾಸ್​ ಹೇಳುವ ಮೂಲಕ ಬಾಹುಬಲಿ ಮೂರನೇ ಅವತಾರ ಬರುವ ಬಗ್ಗೆ ಸುಳಿವು ನೀಡಿದರು.

Baahubali
ಬಾಹುಬಲಿ
author img

By

Published : Mar 4, 2022, 12:47 PM IST

ಹೈದರಾಬಾದ್ (ತೆಲಂಗಾಣ): ಖ್ಯಾತ ನಿರ್ದೇಶಕ ರಾಜಮೌಳಿಯ ಬಾಹುಬಲಿ ಸಿನಿಮಾ ಎರಡು ಅವತರಣಿಕೆಗಳಲ್ಲಿ ತೆರೆಕಂಡು ವಿಶ್ವದಾದ್ಯಂತ ಸದ್ದು ಮಾಡಿತ್ತು. ವಿಶ್ವದಲ್ಲಿಯೇ ಅತಿಹೆಚ್ಚು ಕಲೆಕ್ಷನ್​ ಗಿಟ್ಟಿಸಿದ ಮೊದಲ ಭಾರತೀಯ ಸಿನಿಮಾ ಇದಾಗಿತ್ತು. ಇದೀಗ ಬಾಹುಬಲಿಯ ಮೂರನೇ ಭಾಗ ಬರಲಿದೆಯಾ ಎಂಬ ಗುಸುಗುಸು ಶುರುವಾಗಿದೆ. ಅಲ್ಲದೇ, ಇದಕ್ಕೆ ನಟ ಪ್ರಭಾಸ್​ ಅವರ ಹೇಳಿಕೆ ಮತ್ತಷ್ಟು ಪುಷ್ಟಿ ನೀಡಿದೆ.

ತೆಲುಗು ಬಾಹುಬಲಿ ಪ್ರಭಾಸ್​ ತಮ್ಮ ಪ್ಯಾನ್​ ಇಂಡಿಯಾ ಸಿನಿಮಾ ರಾಧೆ ಶ್ಯಾಮ್​ ಪ್ರಚಾರದ ವೇಳೆ ಮಾತನಾಡುವಾಗ, ರಾಜಮೌಳಿ ಅವರು ನನಗೆ 10 ವರ್ಷಗಳಿಂದಲೂ ಪರಿಚಯ. ಅವರನ್ನು ನಾನು ಎಂದಿಗೂ ನನ್ನ ಸಿನಿಮಾ ಮಾಡಲು ಕೇಳಿಕೊಳ್ಳುವುದಿಲ್ಲ. ಬಾಹುಬಲಿ ಸಿನಿಮಾವನ್ನೂ ನಾನು ಕೇಳಿರಲಿಲ್ಲ. ಅವರಲ್ಲದೇ ಯಾರ ಬಳಿಯೂ ನಾನು ನನ್ನ ಸಿನಿಮಾ ನಿರ್ದೇಶಿಸಿ ಎಂದು ಯಾಚಿಸಲ್ಲ ಎಂದರು.

ಬಾಹುಬಲಿ ಸಿನಿಮಾ ನಿರ್ದೇಶಕ ರಾಜಮೌಳಿ ಮತ್ತು ನಿರ್ಮಾಪಕ ಶೋಬು ಯಾರ್ಲಗಡ್ಡ ಅವರು ಅತ್ಯಂತ ಯಶಸ್ವಿ ಸಿನಿಮಾವನ್ನು ಅಲ್ಲಿಗೆ ಕೈಬಿಡಲು ಬಯಸುವುದಿಲ್ಲ. ಹಾಗಾಗಿ ಏನಾದರೂ ಚಮತ್ಕಾರ ನಡೆಯಬಹುದು ಎಂದು ಹೇಳುವ ಮೂಲಕ ಬಾಹುಬಲಿ ಮೂರನೇ ಅವತಾರ ಬರುವ ಬಗ್ಗೆ ಸುಳಿವು ನೀಡಿದರು.

ಪ್ರಭಾಸ್​ ಅವರ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾ ರಾಧೆ ಶ್ಯಾಮ್​ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ರಾಧಾ ಕೃಷ್ಣಕುಮಾರ್ ನಿರ್ದೇಶನದ ಈ ಸಿನಿಮಾ ಮಾರ್ಚ್ 11 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.

ಓದಿ: 'ಸುಖಿ' ಚಿತ್ರೀಕರಣ ಆರಂಭಿಸಿದ ಶಿಲ್ಪಾ ಶೆಟ್ಟಿ.. 'ಆಲ್ ದಿ ಬೆಸ್ಟ್ ಮುಂಕಿ' ಎಂದ ತಂಗಿ ಶಮಿತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.