ಇಂದು ಕನ್ನಡ ಚಿತ್ರರಂಗದ ಮೇರುನಟ ಡಾ. ವಿಷ್ಣುವರ್ಧನ್ ಹುಟ್ಟಿದ ದಿನ. ಹುಟ್ಟುಹಬ್ಬದ ವಿಶೇಷವಾಗಿ 1993 ರಲ್ಲಿ ಬಿಡುಗಡೆಯಾಗಿದ್ದ ಸುನಿಲ್ಕುಮಾರ್ ದೇಸಾಯಿ ನಿರ್ದೇಶನದ 'ನಿಷ್ಕರ್ಷ' ಸಿನಿಮಾ ಇದೇ ತಿಂಗಳ 20 ರಂದು ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಬಿಡುಗಡೆಯಾಗುತ್ತಿದೆ.
ಈ ಸಿನಿಮಾ ನೋಡಲು ಸಾಮಾನ್ಯ ಜನರು ಮಾತ್ರವಲ್ಲ ಸೆಲಬ್ರಿಟಿಗಳು ಕೂಡಾ ಕಾಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಈ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದರು. ಇದೀಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೂಡಾ 'ನಿಷ್ಕರ್ಷ' ಸಿನಿಮಾ ನೋಡುತ್ತೇನೆ ಎಂದಿದ್ದಾರೆ. ಸಿನಿಮಾ ಹೈ ಟೆಕ್ನಾಲಜಿ ಕಲರಿಂಗ್ ಹಾಗೂ ಡಿಜಿಟಲ್ ಸೌಂಡ್ನೊಂದಿಗೆ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಪುನೀತ್, ಬೆಂಗಳೂರಿನ ಮಣಿಪಾಲ್ ಸೆಂಟರ್ನಲ್ಲಿ ಈ ಸಿನಿಮಾ ಶೂಟಿಂಗ್ ಮಾಡಲಾಗಿತ್ತು. ಅದು ಆಗಲೇ ಹಾಲಿವುಡ್ ಶೈಲಿಯ ಸಿನಿಮಾದಂತೆ ಇತ್ತು. ನಾನು ಕೂಡಾ ಈ ಸಿನಿಮಾ ಅಭಿಮಾನಿ. ಡಿಜಿಟಲ್ ಸೌಂಡ್ನೊಂದಿಗೆ ಬಿಡುಗಡೆಯಾಗುತ್ತಿರುವ ಈ ಸಿನಿಮಾವನ್ನು ನೋಡುತ್ತೇನೆ ಎಂದು ಹೇಳುವ ಮೂಲಕ ಪುನೀತ್ ರಾಜ್‍ಕುಮಾರ್ 'ನಿಷ್ಕರ್ಷ' ಸಿನಿಮಾ ಮೇಲೆ ತಮಗಿರುವ ಕ್ರೇಜ್ ತೋರಿಸಿಕೊಂಡರು. ಸಿನಿಮಾವನ್ನು ಬಿ.ಸಿ. ಪಾಟೀಲ್ ನಿರ್ಮಿಸಿದ್ದಾರೆ.