ETV Bharat / sitara

ಮೆಗಾಸ್ಟಾರ್ ಭೇಟಿ ಮಾಡಿ ಮದುವೆಗೆ ಆಹ್ವಾನಿಸಿದ ಪವರ್ ಸ್ಟಾರ್​ - undefined

ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್​​ಚರಣ್ ತೇಜ ಅವರನ್ನು ಹೈದರಾಬಾದ್​​​ನಲ್ಲಿ ಭೇಟಿ ಮಾಡಿದ ಪುನೀತ್ ರಾಜ್​ಕುಮಾರ್​​​​, ಅಣ್ಣನ ಮಗ ಯುವರಾಜ್​ ಕುಮಾರ್ ಮದುವೆಗೆ ಆಹ್ವಾನ ನೀಡಿದ್ದಾರೆ.

ಪವರ್ ಸ್ಟಾರ್​
author img

By

Published : May 13, 2019, 10:03 AM IST

ಸ್ಯಾಂಡಲ್​​ವುಡ್​​​ನಲ್ಲಿ ಸದ್ಯಕ್ಕೆ ಎರಡು ಜೋಡಿಗಳ ಮದುವೆ ಸಂಭ್ರಮ ಮನೆ ಮಾಡಿದೆ. ಒಂದು ಕ್ರೇಜಿಸ್ಟಾರ್ ಪುತ್ರಿ ಗೀತಾಂಜಲಿ-ಅಜಯ್​​​​​ ಮದುವೆ ಹಾಗೂ ರಾಘವೇಂದ್ರ ರಾಜ್​​ಕುಮಾರ್ ಪುತ್ರ ಯುವರಾಜ್​​ಕುಮಾರ್​ - ಶ್ರೀದೇವಿ ಮದುವೆ ಇದೇ ತಿಂಗಳು ನಡೆಯಲಿದೆ.

puneet
ಮೆಗಾ ಫ್ಯಾಮಿಲಿ ಜೊತೆ ಪುನೀತ್ ​​​

ರವಿಚಂದ್ರನ್ ಹಾಗೂ ರಾಘವೇಂದ್ರ ರಾಜ್​ಕುಮಾರ್ ತಮ್ಮ ತಮ್ಮ ಮಕ್ಕಳ ಮದುವೆ ಆಹ್ವಾನ ಪತ್ರಿಕೆ ಹಂಚುವುದರಲ್ಲಿ ಬ್ಯುಸಿಯಾಗಿದ್ದಾರೆ. ಯುವರಾಜ್​​​​​ಕುಮಾರ್ ವಿವಾಹ ಇದೇ ತಿಂಗಳ 25, 26 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ರಾಜ್​ ಫ್ಯಾಮಿಲಿ ಗಣ್ಯರಿಗೆ ಆಹ್ವಾನ ಪತ್ರಿಕೆ ಹಂಚುವ ಕಾರ್ಯದಲ್ಲಿ ನಿರತವಾಗಿದೆ. ನಿನ್ನೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​​​​, ವಿನಯ್​ ರಾಜ್​ಕುಮಾರ್ ಹಾಗೂ ಯುವರಾಜ್​ಕುಮಾರ್ ಹೈದರಾಬಾದ್​​​ಗೆ ತೆರಳಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್​ಚರಣ್ ತೇಜ ಅವರನ್ನು ಭೇಟಿ ಮಾಡಿ ಮದುವೆಗೆ ಆಹ್ವಾನ ನೀಡಿದ್ದಾರೆ.

puneet
ಮೆಗಾಸ್ಟಾರ್ ಜೊತೆ ಪುನೀತ್​ ರಾಜ್​​​​​ಕುಮಾರ್​​​​

ಚಿರಂಜೀವಿ ಹಾಗೂ ಡಾ. ರಾಜ್​ ಎರಡೂ ಕುಟುಂಬಗಳ ನಡುವೆ ಮೊದಲಿನಿಂದಲೂ ಒಳ್ಳೆಯ ಒಡನಾಟ ಇದೆ. ಚಿರು ಜೊತೆ ಪುನೀತ್ ಸ್ವಲ್ಪ ಸಮಯ ಕಾಲ ಕಳೆದಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಚಿರಂಜೀವಿ ಜೊತೆ ಬಾಲಕೃಷ್ಣ, ಮಂಚು ಮನೋಜ್ ಹಾಗೂ ಇನ್ನಿತರ ಟಾಲಿವುಡ್ ಗಣ್ಯರಿಗೆ ಕೂಡಾ ಪುನೀತ್ ಅಣ್ಣನ ಮಗನ ಮದುವೆಗೆ ಆಹ್ವಾನಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರಿ ಗೀತಾಂಜಲಿ ವಿವಾಹ ಕೂಡಾ ಇದೇ ತಿಂಗಳ 28-29 ರಂದು ಅರಮನೆ ಮೈದಾನದಲ್ಲಿ ನಡೆಯಲಿದೆ.

puneet
ವಿನಯ್ ರಾಜ್​​​ಕುಮಾರ್, ಯುವರಾಜ್​​​​ಕುಮಾರ್, ರಾಮ್​​ಚರಣ್​, ಪುನೀತ್ ರಾಜ್​​​ಕುಮಾರ್​​

Intro:Body:

megastarpowerstar

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.