ETV Bharat / sitara

ಆಕಾಶದಲ್ಲಿ ಹಾರಾಡಿದ ಪವರ್ ಸ್ಟಾರ್ ಬ್ಯಾನರ್: ಅಪ್ಪುಗೆ ವಿಶೇಷವಾಗಿ ಶುಭಾಶಯ ಕೋರಿದ ನಿರ್ಮಾಪಕ

author img

By

Published : Mar 17, 2022, 3:40 PM IST

Puneeth Rajkumar Birth Anniversary: ಪುನೀತ್ ರಾಜ್​ಕುಮಾರ್ ಜನ್ಮದಿನಕ್ಕೆ ಜಕ್ಕೂರು ಏರೋಡ್ರಮ್​ನಿಂದ ವಿಶೇಷ ರೀತಿಯಲ್ಲಿ ಶುಭಾಶಯ ಕೋರಲಾಗಿದೆ. ಅಪ್ಪುಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಬ್ಯಾನರ್ ಹಿಡಿದು ಹೆಲಿಕಾಪ್ಟರ್​ ಹಾರಾಟ ನಡೆಸಿದೆ. ನಿರ್ಮಾಪಕ ಕಿಶೋರ್ ಪತ್ತಿಕೊಂಡ ಈ ರೀತಿ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ.

Producer who especially greeted Appu
ಆಗಸದಲ್ಲಿ ಹಾರಾಡಿದ ಪುನೀತ್ ಹುಟ್ಟುಹಬ್ಬದ ಬ್ಯಾನರ್

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬದುಕಿದ್ದರೆ, ಅಭಿಮಾನಿಗಳ ಜೊತೆ ಇಂದು 47ನೇ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದರು‌. ಆದರೆ ಅಪ್ಪು ಇಂದು‌‌‌ ನಮ್ಮೊಂದಿಗೆ ಇಲ್ಲ. ಅವರ ಹುಟ್ಟುಹಬ್ಬಕ್ಕೆ ಜಕ್ಕೂರು ಏರೋಡ್ರೋಮ್​ನಿಂದ ವಿಶೇಷ ಶುಭಾಶಯ ಸಲ್ಲಿಸಲಾಗಿದೆ.

ಹ್ಯಾಪಿ ಬರ್ತ್ ಡೇ ಪವರ್ ಸ್ಟಾರ್ ಎಂಬ ಪೋಸ್ಟರ್ ಹೊತ್ತು ಹೆಲಿಕಾಪ್ಟರ್ ಹಾರಾಟ ನಡೆಸಿದೆ. ವಿಧಾನಸೌಧದ ಸಮೀಪ ಹೆಲಿಕಾಪ್ಟರ್ ಬ್ಯಾನರ್ ಹೊತ್ತು ಹಾರಾಡಿದೆ.

ಹೆಲಿಕಾಪ್ಟರ್ ಸಾಗಿದ ಮಾರ್ಗ ಹೀಗಿದೆ: 1. ಜಕ್ಕೂರಿನಿಂದ ಡಾ. ರಾಜ್‌ಕುಮಾರ್ ಸಮಾಧಿ 20 ನಿಮಿಷಗಳು 2. ಓರಿಯನ್, ಸದಾಶಿವನಗರ, ಮಲ್ಲೇಶ್ವರಂ, ರಾಜಾಹಿನಗರ, ಮೆಜೆಸ್ಟಿಕ್ ಮತ್ತು ಗಾಂಧಿನಗರ ಸ್ಥಳದಿಂದ 40 ನಿಮಿಷಗಳು. 3. ಕೆ. ಆರ್. ಮಾರುಕಟ್ಟೆ, ವಿ.ವಿ. ಪುರಂ, ಭಾನಶಂಕರಿ, ಮೈಸೂರು ರಸ್ತೆ, ಗೋಪಾಲನ್ ಮಾಲ್, ಜೆಪಿ ನಗರ, ಸಿಲ್ಕ್ ಬೋರ್ಡ್, ಬೆಳ್ಳಂದೂರು, ದೊಮ್ಮಲೂರು, ಕೆ.ಆರ್ ಪುರಂ, ಬಾಣಸವಾಡಿ, ಎಚ್‌ಬಿಆರ್ ಲೇಔಟ್, ಮನಾಯತ ಟೆಕ್ ಪಾರ್ಕ್, ಭಾರತೀಯ ಮಾಲ್ ಮತ್ತು ಜಕ್ಕೂರ್ ಏರೋಡ್ರೋಮ್ 60 ನಿಮಿಷಗಳು. ವಿಶೇಷವೆಂದರೆ ಈ ಸ್ಥಳಗಳಲ್ಲಿ ಮುಖ್ಯವಾಗಿ ಎಲ್ಲಾ ಥಿಯೇಟರ್‌ಗಳು ಮತ್ತು ಮಾಲ್‌ಗಳಿವೆ.

ಇದನ್ನೂ ಓದಿ: ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ: ಬಿಎಸ್‌ವೈ

ಈ ಮೂಲಕ ಅಭಿಮಾನಿಗಳು ಆಗಸದಲ್ಲಿ ಪುನೀತ್ ರಾಜ್​ಕುಮಾರ್​​ರನ್ನು ನೋಡುವ ಮೂಲಕ ಕಣ್ತುಂಬಿಕೊಂಡಿದ್ದಾರೆ‌. ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಈ ರೀತಿ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ. ಯಾಕೆಂದರೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಪುನೀತ್ ಅಭಿಮಾನಿ. ಈ ಕಾರಣಕ್ಕೆ ಕಿಶೋರ್ ಸ್ಪೆಷಲ್ ಆಗಿ ಜನ್ಮದಿನದ ಶುಭಾಶಯ ಕೋರಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.