ವರನಟ ಡಾ. ರಾಜ್ಕುಮಾರ್ ಮೊಮ್ಮಗಳು ಧನ್ಯಾರಾಮ್ ಕುಮಾರ್ ಹಾಗೂ ಸೂರಜ್ ಗೌಡ ಅಭಿನಯದ ನಿನ್ನ ಸನಿಹಕೆ ಸಿನಿಮಾ ಚಿತ್ರದ ಬಿಡುಗಡೆ ವಿಘ್ನ ಎದುರಾಗಿದೆ. ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಈ ಚಿತ್ರದ ಇಂದಿನ ಪ್ರದರ್ಶನ ರದ್ದಾಗಿದೆ.
ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ವಿದ್ಯುತ್ ಸಮಸ್ಯೆಯಿಂದ 'ನಿನ್ನ ಸನಿಹಕೆ' ಚಿತ್ರದ ಇಂದಿನ ಪ್ರದರ್ಶನ ರದ್ದು ಮಾಡಲಾಗಿದೆ. ಆದರೆ ಶೋ ರದ್ದುಗೊಂಡಿರುವ ಬಗ್ಗೆ ಚಿತ್ರತಂಡಕ್ಕೆ ಮಾಹಿತಿ ಇಲ್ಲ. ಅಲ್ಲದೆ, ಮೊದಲ ದಿನದ ಮೊದಲ ಶೋ ವೀಕ್ಷಣೆಗೆ ಬಂದ ಚಿತ್ರ ತಂಡದವರು ಹಾಗೂ ಸಿನಿಪ್ರಿಯರಿಗೆ ನಿರಾಶೆ ಆಗಿದೆ.
ಅಭಿಮಾನಿಗಳ ಜೊತೆ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಿದ್ದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಬೇಸರಗೊಂಡರು. ಇಂದಿನ ಶೋ ರದ್ದಾಗಿರುವ ವಿಷಯ ತಿಳಿದು ನಿರ್ದೇಶಕ ಸೂರಜ್ ಗೌಡ ಕೂಡ ಚಿತ್ರಮಂದಿರಕ್ಕೆ ಬಂದಿದ್ದು, ಅಲ್ಲಿನ ಸಿಬ್ಬಂದಿ ಜೊತೆ ಮಾತನಾಡಿದರು.
ಕಳೆದ ಮೂರು ದಿನಗಳಿಂದ ಸಂತೋಷ್ ಚಿತ್ರಮಂದಿರದಲ್ಲಿ ವಿದ್ಯುತ್ ಇರಲಿಲ್ಲ. ಟ್ರಾನ್ಸ್ಫಾರ್ಮರ್ ಸಮಸ್ಯೆ ಜೊತೆಗೆ ಜನರೇಟರ್ ಕೂಡ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇಂದು ಸಿನಿಮಾ ಬಿಡುಗಡೆಯಾಗುವುದು ತಿಳಿದಿದ್ದರೂ ಕೂಡ ಚಿತ್ರಮಂದಿರದವರು ವಿದ್ಯುತ್ ಸಮಸ್ಯೆ ಸರಿಪಡಿಸಿಕೊಂಡಿರಲಿಲ್ಲ.
ಇದನ್ನೂ ಓದಿ: 'ಅವನೇ ಶ್ರೀಮನ್ನಾರಾಯಣ'ನ ದಾಖಲೆ ಮುರಿಯಲಿದೆಯಾ 'ಕಬ್ಜ'?