ETV Bharat / sitara

ಕೊರೊನಾಗೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಸಹ ನಿರ್ಮಾಪಕ ಬಲಿ! - ರಾಜಶೇಖರ್ ನಿಧನ

ನಿರ್ಮಾಪಕ ಕೋಟಿ ರಾಮು, ಅಣ್ಣಯ್ಯ ಚಿತ್ರದ ನಿರ್ಮಾಪಕ ಚಂದ್ರಶೇಖರ್ ಬಳಿಕ, ಈಗ ಪಾಪ್ ಕಾರ್ನ್ ಮಂಕಿ‌ಟೈಗರ್, ಬ್ಯಾಡ್ ಮ್ಯಾನರ್ಸ್, ಪೆಟ್ರೋಮ್ಯಾಕ್ಸ್ ಚಿತ್ರಗಳ‌ ಸಹ ನಿರ್ಮಾಪಕ ರಾಜಶೇಖರ್ ಮೃತಪಟ್ಟಿದ್ದಾರೆ.

ರಾಜಶೇಖರ್ ನಿಧನ
ರಾಜಶೇಖರ್ ನಿಧನ
author img

By

Published : Apr 30, 2021, 9:02 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಪ್ರತಿ ದಿನ ನೂರಾರು ಜನರ ಹೆಮ್ಮಾರಿಗೆ ಬಲಿಯಾಗುತ್ತಿದ್ದಾರೆ. ಕಳೆದ ಒಂದು ವಾರದಿಂದ ಕನ್ನಡ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು, ಸಹ ನಟರು ಕೊರೊನಾಗೆ ಬಲಿಯಾಗುತ್ತಿದ್ದಾರೆ.

ನಿರ್ಮಾಪಕ ಕೋಟಿ ರಾಮು, ಅಣ್ಣಯ್ಯ ಚಿತ್ರದ ನಿರ್ಮಾಪಕ ಚಂದ್ರಶೇಖರ್ ಬಳಿಕ, ಈಗ ಪಾಪ್ ಕಾರ್ನ್ ಮಂಕಿ‌ಟೈಗರ್, ಬ್ಯಾಡ್ ಮ್ಯಾನರ್ಸ್, ಪೆಟ್ರೋಮ್ಯಾಕ್ಸ್ ಚಿತ್ರಗಳ‌ ಸಹ ನಿರ್ಮಾಪಕ ರಾಜಶೇಖರ್ ಕೊರೊನಾಗೆ ಉಸಿರು ಚೆಲ್ಲಿದ್ದಾರೆ.

ನಿನಾಸಂ ಸತೀಶ್ ಸಂತಾಪ
ನಿನಾಸಂ ಸತೀಶ್ ಸಂತಾಪ

38 ವರ್ಷದ ರಾಜಶೇಖರ್ ಮೂಲತಃ ಮೈಸೂರಿನವರಾಗಿದ್ದು, ಬೆಂಗಳೂರಲ್ಲಿ ವಾಸವಾಗಿದ್ದರು. ಆದರೆ, ಕೆಲ ದಿನಗಳ ಹಿಂದೆ ರಾಜಶೇಖರ್​ಗೆ ಕೊರೊನಾ ಪಾಸಿಟಿವ್ ಆಗಿ, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ರಂತೆ. ಆದರೆ ಮನೆಯಲ್ಲೇ ಉಸಿರಾಟದ ತೊಂದರೆ ಆದ ಕಾರಣ, ಸರಿ ಸುಮಾರು 5 ಗಂಟೆಗೆ ಹೊತ್ತಿಗೆ ರಾಜಶೇಖರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪತ್ನಿ ಇಬ್ಬರು ಮಕ್ಕಳನ್ನ ಬಿಟ್ಟು ರಾಖಶೇಖರ್ ಅಗಲಿದ್ದಾರೆ. ಇನ್ನು ಮೈಸೂರಿನಲ್ಲಿರೋ ಕುಟುಂಬ, ರಾಜಶೇಖರ್ ಸಾವಿನ ಸುದ್ದಿ ಕೇಳಿ ಶಾಕ್​ಗೆ ಒಳಗಾಗಿದೆ. ನಟ ನೀನಾಸಂ ಸತೀಶ್ ಸೋಷಿಯಲ್ ಮೀಡಿಯಾದಲ್ಲಿ ಕಂಬನಿ ಮಿಡಿದಿದ್ದಾರೆ.

(ಇದನ್ನೂ ಓದಿ: ಚಿಲ್ಲರೆ ಅಂಗಡಿ ವ್ಯಾಪಾರಿ ಕೋಟಿ ನಿರ್ಮಾಪಕ ಆಗಿದ್ದು ಹೀಗೆ..!)

(ಕೊರೊನಾಗೆ ಬಲಿಯಾದ 'ಕೋಟಿ' ನಿರ್ಮಾಪಕ, ಮಾಲಾಶ್ರೀ ಪತಿ ರಾಮು)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.