ದಾವಣಗೆರೆ : ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ನಡೆದ ವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ ಆಗಮಿಸಿದ್ದರಿಂದ ಸೆಲ್ಫಿಗಾಗಿ ವೇದಿಕೆಗೆ ನುಗ್ಗಿದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಜಾತ್ರೆಯಲ್ಲಿ ನಟ ಸುದೀಪ್ಗೆ ವಾಲ್ಮೀಕಿ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬಳಿಕ ಕಿಚ್ಚನ ಜೊತೆ ಸೆಲ್ಫಿಗಾಗಿ ಅಭಿಮಾನಿಗಳ ದಂಡು ಮುಗಿಬಿದ್ದಿದೆ. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ನಟನನ್ನು ನೋಡಲು ಅಭಿಮಾನಿಗಳು ವೇದಿಕೆಗೆ ನುಗ್ಗಿದ್ದು, ಇವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಕಾರ್ಯಕ್ರಮದ ನಂತರ ಸುದೀಪ್ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ವಾಪಸಾಗಿದ್ದಾರೆ. ಜನರ ನೂಕುನುಗ್ಗಲಿನಲ್ಲಿ ವೇದಿಕೆ ಮುಂಭಾಗ ಇದ್ದ ಚೇರುಗಳು ಚೆಲ್ಲಾಪಿಲ್ಲಿಯಾದವು.