ETV Bharat / sitara

ತಮಿಳಿಗೂ ಡಬ್ ಆಗುತ್ತಿದೆ ಬಹದ್ದೂರ್​ ಹುಡ್ಗನ`ಪೊಗರು'

author img

By

Published : Dec 28, 2020, 7:32 AM IST

Updated : Dec 28, 2020, 7:46 AM IST

ಚಿತ್ರಕ್ಕೆ`ಸೆಮ್ಮ ತಿಮಿರು' ಎಂಬ ಹೆಸರನ್ನು ಇಡಲಾಗಿದೆ. ಈ ಚಿತ್ರವನ್ನು ಧ್ರುವ ಅವರ ಮಾವ ಮತ್ತು ನಟ`ಆ್ಯಕ್ಷನ್ ಕಿಂಗ್' ಅರ್ಜುನ್ ಸರ್ಜಾ ಅರ್ಪಿಸುತ್ತಿದ್ದಾರೆ. ಈ ಚಿತ್ರದ ತಮಿಳು ಡಬ್ಬಿಂಗ್ ಹಕ್ಕುಗಳು ಎಷ್ಟು ಕೋಟಿಗೆ ಮಾರಾಟವಾಗಿದೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದು, ಸದ್ಯಕ್ಕೆ ಚಿತ್ರತಂಡ ಆ ಮೊತ್ತವನ್ನು ಎಲ್ಲೂ ಬಹಿರಂಗ ಮಾಡಿಲ್ಲ..

pogaru movie will dub in tamil
ತಮಿಳಿಗೂ ಡಬ್ ಆಗುತ್ತಿದೆ ಪೊಗರು

ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಅಭಿನಯದ`ಪೊಗರು' ಚಿತ್ರ ಜನವರಿ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹೇಳಿದ ದಿನದಂದೇ ಈ ಸಿನಿಮಾ ಬಿಡುಗಡೆಯಾಗುತ್ತದೋ ಅಥವಾ ಮತ್ತೆ ಪೋಸ್ಟ್​ಪೋನ್​ ಆಗುತ್ತೋ ಗೊತ್ತಿಲ್ಲ. ಆದ್ರೆ, ಈ ಮಧ್ಯೆ, ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಪೊಗರು ಸಿನಿಮಾ ತಮಿಳಿಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ.

pogaru movie will dub in tamil
ತಮಿಳಿಗೂ ಡಬ್ ಆಗುತ್ತಿದೆ ಪೊಗರು

ಇದಕ್ಕೂ ಮುನ್ನ,`ಪೊಗರು' ಚಿತ್ರವು ತೆಲುಗಿಗೆ ಡಬ್ ಆಗಿತ್ತು. ಅಷ್ಟೇ ಅಲ್ಲ,`ಖರಾಬು' ಹಾಡು ತೆಲುಗಿನಲ್ಲೂ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ನಂತರ ಹಿಂದಿಗೆ ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿದೆ ಎಂದು ಹೇಳಲಾಯ್ತು. ಇದೀಗ ಚಿತ್ರವು ತಮಿಳಿಗೆ ಡಬ್ ಆಗುತ್ತಿದೆ ಎಂಬ ವಿಷಯವನ್ನು ಧ್ರುವ ಸರ್ಜಾ, ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಚಿತ್ರಕ್ಕೆ`ಸೆಮ್ಮ ತಿಮಿರು' ಎಂಬ ಹೆಸರನ್ನು ಇಡಲಾಗಿದೆ. ಈ ಚಿತ್ರವನ್ನು ಧ್ರುವ ಅವರ ಮಾವ ಮತ್ತು ನಟ`ಆ್ಯಕ್ಷನ್ ಕಿಂಗ್' ಅರ್ಜುನ್ ಸರ್ಜಾ ಅರ್ಪಿಸುತ್ತಿದ್ದಾರೆ. ಈ ಚಿತ್ರದ ತಮಿಳು ಡಬ್ಬಿಂಗ್ ಹಕ್ಕುಗಳು ಎಷ್ಟು ಕೋಟಿಗೆ ಮಾರಾಟವಾಗಿದೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದು, ಸದ್ಯಕ್ಕೆ ಚಿತ್ರತಂಡ ಆ ಮೊತ್ತವನ್ನು ಎಲ್ಲೂ ಬಹಿರಂಗ ಮಾಡಿಲ್ಲ.

`ಪೊಗರು' ಚಿತ್ರದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ನಟಿಸಿದ್ದು, ಉಳಿದಂತೆ ರಾಘವೇಂದ್ರ ರಾಜಕುಮಾರ್, ಧನಂಜಯ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಕಥೆ-ಚಿತ್ರಕಥೆ ಬರೆದು ನಂದಕಿಶೋರ್ ನಿರ್ದೇಶನ ಮಾಡಿದ್ದಾರೆ. ಗಂಗಾಧರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಅರ್ಜುನ್ ಜನ್ಯ ಮತ್ತು ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ.

Last Updated : Dec 28, 2020, 7:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.