ಹ್ಯಾಟ್ರಿಕ್ ಚಿತ್ರಗಳ ಸರದಾರ ಧೃವ ಸರ್ಜಾ ಅಭಿನಯದ ಪೊಗರು ಚಿತ್ರದ ಮತ್ತೊಂದು ರಗಡ್ ಲುಕ್ ಇಂದು ರಿಲೀಸ್ ಆಗಿದೆ. ಆ್ಯಕ್ಷನ್ ಪ್ರಿನ್ಸ್ ಧೃವ ತಮ್ಮ ಟ್ವಿಟರ್ಲ್ಲಿ ಪೊಗರಿನ ನಯಾ ಲುಕ್ ರಿವೀಲ್ ಮಾಡಿದ್ದಾರೆ.
ಎದುರಾಳಿಗೆ ಪಂಚ್ ಕೊಡುತ್ತಿರುವ ನಟ ಧೃವ ಅವರ ನಟೋರಿಯಸ್ ಅವತಾರ ರೋಮಾಂಚನಕಾರಿಯಾಗಿದೆ. ಪೊಗರು ಸಿನಿಮಾ ಫುಲ್ ಆ್ಯಕ್ಷನ್ ಪ್ಯಾಕ್ಡ್ ಮೂವಿ ಅನ್ನೋದನ್ನ ಸದ್ಯ ರಿಲೀಸ್ ಆಗಿರುವ ಹೊಸ ನೋಡ ಸಾಬೀತುಪಡಿಸುವಂತಿದೆ.
-
POGARUU 😊😊 ಜೈ ಆಂಜನೇಯ 🙏 pic.twitter.com/vZXNSrYBac
— Dhruva Sarja (@DhruvaSarja) June 26, 2019 " class="align-text-top noRightClick twitterSection" data="
">POGARUU 😊😊 ಜೈ ಆಂಜನೇಯ 🙏 pic.twitter.com/vZXNSrYBac
— Dhruva Sarja (@DhruvaSarja) June 26, 2019POGARUU 😊😊 ಜೈ ಆಂಜನೇಯ 🙏 pic.twitter.com/vZXNSrYBac
— Dhruva Sarja (@DhruvaSarja) June 26, 2019
ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಪೊಗರು ಸಿನಿಮಾ ಶೂಟಿಂಗ್ ಕಳೆದ ತಿಂಗಳುಗಳಿಂದ ಬಿರುಸಿನಿಂದ ಸಾಗಿದೆ. ಈಗಾಗಲೇ ಹೈದರಾಬಾದಿನಲ್ಲಿ ಚಿತ್ರೀಕರಣ ಮುಗಿಸಿಕೊಂಡಿದ್ದ ಪೊಗರು ತಂಡ, ಮತ್ತೊಂದು ಸಾರಿ ಮುತ್ತಿನ ನಗರಿಗೆ ಹಾರುತ್ತಿದೆ. ಅಲ್ಲಿಯ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಜುಲೈ 3 ರಂದು ಚಿತ್ರೀಕರಣ ಶುರುವಾಗಲಿದೆಯಂತೆ. ಧೃವ 30ಕ್ಕೆ ಹೈದರಾಬಾದಿಗೆ ಹಾರಲಿದ್ದಾರಂತೆ.
ಪೊಗರು ಚಿತ್ರದಲ್ಲಿ ಧೃವಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಧನಂಜಯ್, ರಾಘವೇಂದ್ರ ರಾಜಕುಮಾರ್, ರವಿಶಂಕರ್, ಸಾಧುಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ನಟಿಸುತ್ತಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ.